ಕುಂದಾಪುರ ಮಿರರ್ ಸುದ್ದಿ…
ಕೋಟ: ಶ್ರೀ ಕ್ಷೇತ್ರ ಕೋಟ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಳದಲ್ಲಿ ವಾರ್ಷಿಕ ಕಾರ್ತಿಕ ಮಾಸದ ದೀಪೋತ್ಸವ ಕಾರ್ಯಕ್ರಮ ಭಕ್ತಮಹಾಶಯರ ಸಮ್ಮುಖದಲ್ಲಿ ಸಂಪನ್ನಗೊಂಡಿತು.

ಶ್ರೀ ದೇವಿಗೆ ವಿಶೇಷ ಮಹಾಮಂಗಳಾರತಿ ಪೂಜೆ,ಶ್ರೀ ನಾಗದೇವರಿಗೆ,ಸೇರಿದಂತೆ ರಕ್ತೇಶ್ಚರಿ,ವೀರಭದ್ರಸ್ವಾಮಿ,ಬೊಬ್ಬರ್ಯ ಪರಿವಾರ ದೇವರಿಗೆ ಪೂಜೆ ಸಲ್ಲಿಸಿದ ನಂತರ ದೇವಳದ ಅಧ್ಯಕ್ಷ ಆನಂದ್ ಸಿ ಕುಂದರ್ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.ಭಕ್ತಾಧಿಗಳು ದೇವಳದ ಗಲ್ಲಿ ಗಲ್ಲಿಗಳಲ್ಲಿ ಹಣತೆಗಳನ್ನು ಬೆಳಗಿಸಿ ಸಂತುಷ್ಟರಾದರು.ಭಕ್ತರಿಗೆ ಪನ್ಯಾರ ಪ್ರಸಾದ ವಿತರಿಸಲಾಯಿತು.
ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸುಬ್ರಾಯ ಆಚಾರ್ಯ, ಚಂದ್ರ ಪೂಜಾರಿ, ಸುಶೀಲಸೋಮಶೇಖರ್,ಜಿ.ಸತೀಶ್ ಹೆಗ್ಡೆ,ಅರ್ಚಕ ಉದಯ ಜೋಗಿ,ಕೃಷ್ಣ ಜೋಗಿ,ರಮಾನಾಥ ಜೋಗಿ,ಸುಬ್ರಾಯ ಜೋಗಿ,ಭಾಸ್ಕರ್ ಜೋಗಿ ಪೂಜಾ ಕೈಂಕರ್ಯದಲ್ಲಿ ಭಾಗಿಯಾದರು.











