ಕುಂದಾಪುರ ಮಿರರ್ ಸುದ್ದಿ…
ಕೋಟ :ಇತ್ತೀಚಿಗೆ ಶ್ರೀ ರಾಮ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಬೈದೆಬೆಟ್ಟು ಕೊಕ್ಕರ್ಣೆ ಇವರ ಆಶ್ರಯದಲ್ಲಿ ದುರ್ಗಾ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ನಡೆದ ಪ್ರತಿಭಾ ಕಾರಂಜಿಯಲ್ಲಿ ಬ್ರಹ್ಮಾವರ ವಲಯದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಾೈಬ್ರಕಟ್ಟೆಯ 6ನೇ ತರಗತಿ ಪ್ರಣೀತಾ ಅವರು ಹಿರಿಯರ ಕಥೆ ಹೇಳುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಪ್ರಣೀತಾ ಅವರು ಕನ್ನಡ ಶಾಲೆಯ ಮಹತ್ವ ಸಾರುವ ನಾನು ಹರ್ಷಿಣಿ ವಿಡಿಯೋದಲ್ಲಿ ಅಭಿನಯಿಸಿ ಪ್ರಸಿದ್ಧಿ ಪಡೆದಿದ್ದರು. ಶಿಕ್ಷಕ ಸುರೇಂದ್ರ ಕೋಟ ಅವರು ಕಥೆಯನ್ನು ರಚಿಸಿ ವಿದ್ಯಾರ್ಥಿಯನ್ನು ತಯಾರಿಗೊಳಿಸಿದ್ದರು. ಜಿಲ್ಲಾ ಮಟ್ಟದಲ್ಲಿ ಶಾಲೆ ಕೀರ್ತಿಯನ್ನು ಬೆಳಗಿದ ಪ್ರಣೀತಾ ಅವರ ಸಾಧನೆಯನ್ನು ಶಾಲಾ ಮುಖ್ಯ ಶಿಕ್ಷಕರು ಮತ್ತು ಅಧ್ಯಾಪಕ ವೃಂದ, ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರು ಮತ್ತು ಸರ್ವ ಸದಸ್ಯರು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಮತ್ತು ಸರ್ವ ಸದಸ್ಯರು, ಪೋಷಕರು ಮತ್ತು ಊರವರು ಸಂಭ್ರಮಿಸಿದ್ದಾರೆ.











