ಕೂಟ ಮಹಾಜಗತ್ತು ಸಾಲಿಗ್ರಾಮ ಮಹಾಸಭೆ, ಸನ್ಮಾನ

0
674

Click Here

Click Here

ಕುಂದಾಪುರ ಮಿರರ್ ಸುದ್ದಿ…
ಕೋಟ:
ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗಸಂಸ್ಥೆ ಇದರ ವಾರ್ಷಕ ಮಹಾಸಭೆ ಹಾಗೂ ಸನ್ಮಾನ ಕಾರ್ಯಕ್ರಮ ಡಿ.4 ರಂದು ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಳದ ಜ್ಞಾನಮಂದಿರದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ಎಸ್ ಕಾರಂತ್ ಶುಭಾಶಂಸನೆಗೈದರು.

ಈ ಸಂದರ್ಭದಲ್ಲಿ ಸಮುದಾಯ ಹಿರಿಯರಾದ ಪಾರ್ವತಿ ಮಹಾಬಲೇಶ್ವರ ಭಟ್,ಎಮ್ ಶ್ರೀದೇವಿ, ನಾಗಪ್ಪಯ್ಯ ಹಂದೆ, ಸೂರ್ಯನಾರಾಯಣ ಹಂದೆ, ಶಿವರಾಮ್ ಐತಾಳ್ ಇವರುಗಳನ್ನು ಸನ್ಮಾನಿಸಲಾಯಿತು. ಸಮುದಾಯದ ಸಾಧಕರಾದ,ಸಾಹಿತಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉಪನ್ಯಾಸಕಿ,ಸಾಹಿತಿ ಪಾರ್ವತಿ ಜಿ.ಐತಾಳ್,ವೇ.ಮೂ.ಮಧುಸೂದನ್ ಬಾಯರಿ,ಸಾಲಿಗ್ರಾಮದ ಪ್ರಸಿದ್ಧ ವೈದ್ಯ ಡಾ.ಸುಧಾಕರ್ ಹಂದೆ,ಇತ್ತೀಚಿಗೆ ಡಾಕ್ಟರೇಟ್ ಪದವಿ ಸ್ವೀಕೃತ ಜಗದೀಶ್ ಹೊಳ್ಳ ಇವರುಗಳನ್ನು ಅಭಿನಂದಿಸಲಾಯಿತು.

Click Here

ಮುಖ್ಯ ಅತಿಥಿಗಳಾಗಿ ಕೂಟ ಮಹಾಜಗತ್ತು ಕೇಂದ್ರ ಸಂಸ್ಥೆಯ ಅಧ್ಯಕ್ಷ ಸತೀಶ್ ಹಂದೆ,ಮಹಿಳಾ ವೇದಿಕೆ ಅಧ್ಯಕ್ಷೆ ಯಶೋಧ,ಕೂಟ ಮಹಾಜಗತ್ತು ಅಂಗಸಂಸ್ಥೆಯ ಮಾಜಿ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ, ಅಂಗಸಂಸ್ಥೆಯ ಕಾರ್ಯದರ್ಶಿ ಪಿ ಮಂಜುನಾಥ್ ಉಪಾಧ್ಯಾ, ಯುವ ವೇದಿಕೆಯ ಅಧ್ಯಕ್ಷ ನಾಗರಾಜ್ ಐತಾಳ್,ನಿಕಟಪೂರ್ವ ಅಧ್ಯಕ್ಷ ಕೃಷ್ಣಪ್ರಸಾದ್ ಪಿ.ವೈ ಹೇರ್ಳೆ ಮತ್ತಿತರರು ಉಪಸ್ಥಿತರಿದ್ದರು. ಸಮುದಾಯದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ,ದತ್ತಿ ನಿಧಿ ವಿತರಿಸಲಾಯಿತು.

ಕೂಟ ಮಹಾಹಮಜಗತ್ತು ಅಂಗಸಂಸ್ಥೆಯ ಅಧ್ಯಕ್ಷ ಶ್ರೀಪತಿ ಅಧಿಕಾರಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಅಂಗಸಂಸ್ಥೆಯ ನರಸಿಂಹ ಮಧ್ಯಸ್ಥ ಸ್ವಾಗತಿಸಿದರು. ಕಾರ್ಯಕ್ರಮವನ್ನು ಕೂಟ ಮಹಾಜಗತ್ತು ಅಂಗಸಂಸ್ಥೆಯ ಸದಸ್ಯ ಸಂತೋಷ್ ಮಧ್ಯಸ್ಥ ನಿರೂಪಿಸಿದರು. ಗುಂಡ್ಮಿ ಗ್ರಾಮದ ಸದಸ್ಯ ಸುಬ್ರಾಯ ಮಯ್ಯ ವಂದಿಸಿದರು.

Click Here

LEAVE A REPLY

Please enter your comment!
Please enter your name here