ಕುಂದಾಪುರ ಮಿರರ್ ಸುದ್ದಿ…
ಕೋಟ: ಕೋಟ ಪೇಟೆ ದೇವರೆಂದ ಜನಜನಿತವಾದ ಕೋಟದ ವರುಣತೀರ್ಥ ಶ್ರೀ ರಾಜಶೇಖರ ದೇವಳದ ವಾರ್ಷಿಕ ದೀಪೋತ್ಸವ ಕಾರ್ಯಕ್ರಮ ಶನಿವಾರ ಶ್ರೀ ದೇವಳದಲ್ಲಿ ನಡೆಯಿತು. ಆ ಪ್ರಯುಕ್ತ ಶತರುದ್ರಾಭಿಷೇಕ,ಕಲಶಾಭಿಷೇಕ,ಅನ್ನಸಂತರ್ಪಣೆ ರಂಗಪೂಜೆ ,ಪನ್ಯಾರ ಪ್ರಸಾದ ವಿತರಣೆ ಕಾರ್ಯಕ್ರಮಗಳು ನೆರವೆರಿತು. ದೇವಳದ ಅಧ್ಯಕ್ಷ ಜಿ.ಪ್ರಭಾಕರ ಅಡಿಗ, ವ್ಯವಸ್ಥಾಪನಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.










