ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಉತ್ತಮ ಗುಣ ಮಟ್ಟದ ಉತ್ಪನ್ನವನ್ನು ಗ್ರಾಹಕರಿಗೆ ನೀಡುತ್ತಾ ಬಂದಿರುವ ಜಸ್ಟ್ ಬೇಕ್ ಶಾಖೆ ನಮ್ಮ ಕೋಟೇಶ್ವರದಲ್ಲಿ ಉದ್ಘಾಟನೆಗೊಂಡಿರುವುದು ಸಂತೋಷದ ಸಂಗತಿ ಎಂದು ಉದ್ಯಮಿ ಕೋಟ ಆನಂದ ಸಿ ಕುಂದರ್ ಹೇಳಿದರು.








ಕೋಟೇಶ್ವರದ ಪಟ್ಟಾಭಿ ಸಂಕೀರ್ಣದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಜಸ್ಟ್ ಬೇಕ್ ನೂತನ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ, ಸಹನಾ ಗ್ರೂಪ್ಸ್ ಇದರ ಆಡಳಿತ ನಿರ್ದೇಶಕ ಸುರೇಂದ್ರ ಶೆಟ್ಟಿ ಅವರು, ಜಸ್ಟ್ ಬೇಕ್ ಸಂಸ್ಥೆ ಗ್ರಾಹಕರಿಗೆ ಗುಣಮಟ್ಟದ ಉತ್ಪನ್ನ ನೀಡುವುದರ ಮೂಲಕ ಬ್ರ್ಯಾಂಡ್ ಆಗಿದೆ. ಇಲ್ಲಿನ ಗ್ರಾಹಕರಿಗೆ ಒಳ್ಳೆಯ ಸೇವೆ ಹಾಗೂ ಗುಣಮಟ್ಟದ ಉತ್ಪನ್ನ ನೀಡುವ ಮೂಲಕ ಯಶಸ್ಸು ಹೊಂದಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಹಂಗಳೂರಿನ ಸಂತ ಫಿಯುಸ್ ಇಗರ್ಜಿ ಉಪಾಧ್ಯಕ್ಷ ವಾಲ್ಟರ್ ಫೆರ್ನಾಂಡೀಸ್, ಜಸ್ಟ್ ಬೇಕ್ ಸಂಸ್ಥೆಯ ಕೆ.ರಾಜಶೇಖರ ಶೆಟ್ಟಿ, ಆನಂದ ಪಿ.ಸುವರ್ಣ, ಸುಕುಮಾರ್ ಬಂಗೇರಾ ಉಪಸ್ಥಿತರಿದ್ದರು.
ದೇಶದಲ್ಲಿ 260 ಶಾಖೆ ಹೊಂದಿರುವ ಜಸ್ಟ್ ಬೇಕ್ ಕರಾವಳಿ ಭಾಗದಲ್ಲಿ 32 ಶಾಖೆಯನ್ನು ಹೊಂದಿದೆ.











