ಕುಂದಾಪುರ :ರಸ್ತೆಯ ನಿಯಮಗಳನ್ನು ಸರಿಯಾಗಿ ಪಾಲಿಸಿದ್ದಲ್ಲಿ ಅಪಘಾತಗಳನ್ನು ತಡೆಯ ಬಹುದು- ಶಂಭುಲಿಂಗಯ್ಯ ಎಮ್‌.

0
227

Click Here

Click Here

ಬೈಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮದ ಶನಿವಾರ- ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹ 2025

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಸಂಭ್ರಮದ ಶನಿವಾರದ ಕಾರ್ಯಕ್ರಮದ ಅಂಗವಾಗಿ ಬೈಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ
ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹ 2025ರ ಮಾಹಿತಿ ಕಾರ್ಯಕ್ರಮವು ನಡೆಯಿತು.

Click Here

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಕ್ಕಳಿಗೆ ರಸ್ತೆ ಸುರಕ್ಷಾ ನಿಯಮಗಳನ್ನು ತಿಳಿಸುತ್ತ ಮಾತನಾಡಿದ ಶಂಕರನಾರಾಯಣ ಆರಕ್ಷಕ ಠಾಣೆಯ ಠಾಣಾಧಿಕಾರಿಗಳಾದ ಶಂಭುಲಿಂಗಯ್ಯ ಎಮ್‌ ಇ.ಯವರು ರಸ್ತೆಯ ನಿಯಮಗಳನ್ನು ಸರಿಯಾಗಿ ಪಾಲಿಸಿದ್ದಲ್ಲಿ ಅಪಘಾತಗಳನ್ನು ತಡೆಯ ಬಹುದು ಎಂದು ಅಭಿಪ್ರಾಯ ಪಟ್ಟರು. ಇದೇ ಸಂದರ್ಭದಲ್ಲಿ ಮಕ್ಕಳ ರಕ್ಷಣೆಯ ಬಗ್ಗೆ ಇರುವ ಕಾನೂನುಗಳ ಬಗ್ಗೆ ಮಕ್ಕಳಿಗೆ ತಿಳಸಿದರು.

ಶಂಕರನಾರಾಯಣ ಠಾಣೆಯ ಹೆಡ್‌ ಕಾನ್ಟೇಬಲ್‌ ಪುನಿತ್‌ ಕುಮಾರ್‌ ಶೆಟ್ಟಿ, ಮತ್ತು ಕಾನ್ಟೇಬಲ್‌ ಅಜಿತ್‌ ಕುಮಾರ ಉಪಸ್ಥಿತರಿದ್ದರು.

ಸಹಶಿಕ್ಷಕ ಆನಂದ ಕುಲಾಲ ಸ್ವಾಗತಿಸಿ ಪ್ರಸ್ತಾವನೆಗೈದರು. ಸಹಶಿಕ್ಷಕಿ ಸಂಧ್ಯಾ ಕೆ ಕಾರ್ಯಕ್ರಮ ನಿರೂಪಿಸಿದರು. ಅತಿಥಿ ಶಿಕ್ಷಕಿ ಪ್ರಮಿಳಾ ವಂದಿಸಿದರು. ನಂತರದಲ್ಲಿ ಸಂಭ್ರಮ ಶನಿವಾರದ ಅಂಗವಾಗಿ ಮಕ್ಕಳ ಬಾಲಸಭೆ ನಡೆಯಿತು.

Click Here

LEAVE A REPLY

Please enter your comment!
Please enter your name here