ಬಸ್ರೂರು ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನ ; ಫೆ.2 ಬ್ರಹ್ಮರಥೋತ್ಸವ

0
317

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಸುಮಾರು 475 ವರ್ಷಗಳ ಭವ್ಯ ಇತಿಹಾಸವಿರುವ ಕುಂದಾಪುರ ತಾಲೂಕು ಬಸ್ರೂರಿನ ಮಂಡಿಕೇರಿ ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನದ 16ನೇ ವರ್ಷದ ಬ್ರಹ್ಮ ರಥೋತ್ಸವವು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಫೆ. 2ರಂದು ಜರಗಲಿದೆ.

Click Here

ಬ್ರಹ್ಮ ರಥೋತ್ಸವ ದಿನದಂದು ಶ್ರೀದೇವಿಗೆ ಪಂಚಾಮೃತ ಅಭಿಷೇಕ, ಕನಕಾಭಿಷೇಕ, ತುಲಾಭಾರ ಸೇವೆ, ಯಜ್ಞವಿಧಿಗಳು, ಮಹಾ ಪ್ರಾರ್ಥನೆ, ಮಹಾಪೂಜೆ, ಮಹಾ ಬಲಿಪ್ರದಾನ, ಸಾಯಂಕಾಲ ರಥಾರೋಹಣ, ಮಹಾಸಮಾರಾಧನೆ ಬಳಿಕ ರಥೋತ್ಸವ ನಡೆಯಲಿದೆ. ರಾತ್ರಿ ಆಕರ್ಷಕ ಸುಡುಮದ್ದು ಪ್ರದರ್ಶನ ನಡೆಯಲಿದೆ. ಸಂಜೆ ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಪಂಡಿತ್ ಶ್ರೀ ವಾಗೀಶ್ ಭಟ್, ಬೆಂಗಳೂರು ಮತ್ತು ವೃಂದದವರಿಂದ “ಭಜನ್ ಸಂಧ್ಯಾ” ನಡೆಯಲಿದೆ.

ಜ. 30ರಿಂದ ಫೆಬ್ರವರಿ 3 ರ ತನಕ ಬ್ರಹ್ಮರಥೋತ್ಸವದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿದ್ದು, ಫೆ. 3ರಂದು ಅವಭ್ರತ ಉತ್ಸವ ನಡೆಯಲಿದೆ ಎಂದು ದೇವಸ್ಥಾನದ ಧರ್ಮದರ್ಶಿ ಮಂಡಳಿ ಪ್ರಕಟಣೆ ತಿಳಿಸಿದೆ.

Click Here

LEAVE A REPLY

Please enter your comment!
Please enter your name here