ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ವಂಡ್ಸೆ ಸಹಕಾರಿ ವ್ಯವಸಾಯಿಕ ಸಂಘ ನಿ., ವಂಡ್ಸೆ ಇದರ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಶುಕ್ರವಾರ ನಡೆಯಿತು. ನೂತನ ಅಧ್ಯಕ್ಷರಾಗಿ ಎನ್.ಮಂಜಯ್ಯ ಶೆಟ್ಟಿ ಸಬ್ಲಾಡಿ, ಉಪಾಧ್ಯಕ್ಷರಾಗಿ ಸಂಜೀವ ಪೂಜಾರಿ ಆಯ್ಕೆಯಾದರು.
ಟಿಎಪಿಸಿಎಂಎಸ್ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ನೋಟರಿ ವಕೀಲರಾದ ಪ್ರಸನ್ನಕುಮಾರ ಶೆಟ್ಟಿ, ತಾಲೂಕು ಪಂಚಾಯತ್ ರಾಜ್ ಒಕ್ಕೂಟದ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಮಾಜಿ ಧರ್ಮದರ್ಶಿ ವಂಡಬಳ್ಳಿ ಜಯರಾಮ ಶೆಟ್ಟಿ ನೂತನ ಅಧ್ಯಕ್ಷರು, ಉಪಾಧ್ಯಕ್ಷರನ್ನು ಅಭಿನಂದಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ನಿರ್ದೇಶಕರಾದ ರಾಜರಾಮ ಶೆಟ್ಟಿ ಇಡೂರು, ಜಗನ್ನಾಥ ಶೆಟ್ಟಿ ಹೊಸೂರು, ರಾಮಚ೦ದ್ರ ಮಂಜ ಮಾರಣಕಟ್ಟೆ, ಅರುಣ್ ಕುಮಾರ್ ಶೆಟ್ಟಿ ಹೊಸೂರು ನಿಡೂಟಿ, ಪ್ರಭಾಕರ ಕೆರಾಡಿ, ಗುಂಡು ಪೂಜಾರಿ ಹರವರಿ, ಶೇಖರ ಶೆಟ್ಟಿ ನೂಜು ಬೆಳ್ಳಾಲ, ಜಲಜಾಕ್ಷಿ ಶೆಡ್ತಿ ಹೊಸೂರು ನಿಡೂಟಿ, ಅಂಬಿಕಾ ಶೆಟ್ಟಿ ವಂಡೈ, ರಾಜ ನಾಯ್ಕ ಇಡೂರು, ಸಂತೋಷ ನಾಯ್ಕ ಕೆರಾಡಿ ಉಪಸ್ಥಿತರಿದ್ದರು.
ಚುನಾವಣಾಧಿಕಾರಿಯಾಗಿ ಸುಮಿತ್ರಾ ಕುಮಾರಿ ಎನ್.ಎಸ್ ಕರ್ತವ್ಯ ನಿರ್ವಹಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಮತಿ ಶೆಟ್ಟಿ ಸಹಕರಿಸಿದರು. ಸೀತಾರಾಮ ಪೂಜಾರಿ ವಂದಿಸಿದರು.
ಸಂಘದ ನೂತನ ಆಡಳಿತ ಮಂಡಳಿಗೆ ಜ.18ರಂದು ಚುನಾವಣೆ ನಡೆದು ಹಾಲಿ ಅಧ್ಯಕ್ಷರಾದ ಎನ್.ಮಂಜಯ್ಯ ಶೆಟ್ಟಿ ಸಬ್ಲಾಡಿ ನೇತೃತ್ವದ ವಂಡ್ಸೆ ರೈತ ಸಹಕಾರಿ ಬಳಗ ಎಲ್ಲಾ 13 ಸ್ಥಾನಗಳಲ್ಲಿ ಮೇಲುಗೈ ಸಾಧಿಸಿತ್ತು.











