ಕೋಟದ ಹಾಡಿಕೆರೆ ಶ್ರೀ ಶಾಂತಮೂರ್ತಿ ಶ್ರೀ ಶನೀಶ್ವರ ದೇಗುಲದ 30ನೇ ವರ್ಷದ ವಾರ್ಷಿಕ ವರ್ಧಂತ್ಯೋತ್ಸವ ಹಾಗೂ ನೂತನ ಸಭಾಭವನ ಲೋಕಾರ್ಪಣೆ

0
16

ಕುಂದಾಪುರ ಮಿರರ್ ಸುದ್ದಿ…

ಕೋಟ: ಇಲ್ಲಿನ ಶ್ರೀ ಶಾಂತಮೂರ್ತಿ ಶ್ರೀ ಶನೀಶ್ವರ ಹಾಗೂ ಶ್ರೀ ಕನ್ನಿಕಾ ದುರ್ಗಾಪರಮೇಶ್ವರೀ ದೇವಸ್ಥಾನ ಹಾಡಿಕೆರೆಬೆಟ್ಟು ಕೋಟ ಇದರ 30ನೇ ವರ್ಷದ ವಾರ್ಷಿಕ ವರ್ಧಂತ್ಯೋತ್ಸವಹಾಗೂ ನೂತನ ಸಭಾಭವನ ಲೋಕಾರ್ಪಣೆ ಕಾರ್ಯಕ್ರಮ ಇದೇ ಫೆ.12ರಿಂದ ಮೊದಲ್ಗೊಂಡು 15ರಂದು ನಡೆಲಿದೆ ಈ ಪ್ರಯುಕ್ತ ದಿವ್ಯ ಕ್ಷೇತ್ರ ಹರಿಹರಪುರದ ಶ್ರೀ ಆದಿ ಶಂಕರಾಚಾರ್ಯ ಶಾರದ ಲಕ್ಷ್ಮೀನೃಸಿಂಹ ಪೀಠಾಧೀಶ್ವರರಾದ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ನೂತನ ಸಭಾಭವನ ಲೋಕಾರ್ಪಣೆಗೊಳ್ಳಲಿದೆ

ಧಾರ್ಮಿಕ ಸಭಾ ಕಾರ್ಯಕ್ರಮ
ಪಾಕಶಾಲೆಯನ್ನು ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಉಪ್ಪುಂದ ಪ್ರವರ್ತಕ ಡಾ. ಗೋವಿಂದ ಬಾಬು ಪೂಜಾರಿ,ದೀಪ ಪ್ರಜ್ವಲನೆಯನ್ನು ಗೀತಾನಂದ ಫೌಂಡೇಶನ್ ಮಣೂರು ಪಡುಕೆರೆ ಪ್ರವರ್ತಕ ಆನಂದ ಸಿ. ಕುಂದರ್, ಸಭಾಧ್ಯಕ್ಷತೆಯನ್ನು ಶನೀಶ್ವರ ಕ್ಷೇತ್ರದ ಪಾತ್ರಿ ಕೆ. ಭಾಸ್ಕರ ಸ್ವಾಮಿ ವಹಿಸಲಿದ್ದಾರೆ
ಗೌರವ ಉಪಸ್ಥಿತಿಯಲ್ಲಿ ನಾಡೋಜ ಡಾ. ಜಿ. ಶಂಕರ್,ಸಂಸದ ಕೋಟ ಶ್ರೀನಿವಾಸ ಪೂಜಾರಿ,ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ,ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ,ಕಾಂಗ್ರೆಸ್ ಮುಖಂಡ ದಿನೇಶ್ ಹೆಗ್ಡೆ ಮೊಳಹಳ್ಳಿ, ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇಗುಲದ ಧರ್ಮದರ್ಶಿ ಕೃಷ್ಣಮೂರ್ತಿ ಮಂಜರು,ಸಾರಿಗೆ ಮತ್ತು ಮಜೂರಾಯಿ ಸಚಿವರ ಆಪ್ತ ಸಹಾಯಕ ಶಂಕರ್ ಶೆಟ್ಟಿ,ಉದ್ಯಮಿ ಬಿಜು ನಾಯರ್, ಜನತ ಸಮೂಹ ಸಂಸ್ಥೆಯ ನಿರ್ದೇಶಕ ಪ್ರಶಾಂತ್ ಎ. ಕುಂದರ್, ಮಣೂರು, ಪಡುಕೆರೆ ಮತ್ತಿತರರ ಗಣ್ಯರು ಪಾಲ್ಗೊಳ್ಳಲಿದ್ದಾರೆ

Click Here

Click Here

ಧಾರ್ಮಿಕ ಕಾರ್ಯಕ್ರಮ
12ರ ಬುಧುವಾರದಿಂದ 15ರವರೆಗೆ ವಾರ್ಷಿಕ ವರ್ಧಂತೋತ್ಸವದ ಧಾರ್ಮಿಕ ವಿಧಿವಿಧಾನಗಳು ನಡೆಯಲಿದ್ದು 12ರಂದು ಬುಧವಾರ ನೂತನ ಸಭಾಭವನದಲ್ಲಿ ದೇವತಾ ಪ್ರಾರ್ಥನೆ, ಫಲನ್ಯಾಸ, ಗುರುಗಣಪತಿ ಪೂಜೆ, ಪೂಣ್ಯಾಹವಾಚನ, ವಾಸ್ತು ಪೂಜೆ, ವಾಸ್ತುಹೋಮ, ಸುದರ್ಶನ ಹೋಮ, ಬದ್ದಲಿದಾನ, ಪ್ರಸಾದ ವಿತರಣೆ.,13 ಗುರುವಾರ ಪೂರ್ವಾಹ್ನ 6 ಕಾಯಿ ಗಣಹೋಮ ,ಕನ್ನಿಕಾ ದುರ್ಗಾಪರಮೇಶ್ವರಿಗೆ 108 ಕಲಶಾಸ್ಥಾಪನೆ, ಪರಿವಾರ ದೇವರಾದಂತಹ ಗಣಪತಿ, ಈಶ್ವರ, ನಂದಿ, ಆಂಜನೇಯ ದೇವರಿಗೆ 25 ಕಲಶ, ಕಾಕವಾಹನ ನವಗ್ರಹಗಳಿಗೆ 9 ಕಲಶ ಸ್ಥಾಪನೆ, ಕಲಾಹೋಮ, ಶನಿದೇವರ ಗುಡಿಯಲ್ಲಿ ವಾಸ್ತುಪೂಜೆ, ರಕ್ಷೋಘ್ನ ಹೋಮ, ದಿಗ್ಧಲಿದಾನ, ಪ್ರಸಾದ ವಿತರಣೆ, 14 ಶುಕ್ರವಾರ ಬೆಳಿಗ್ಗೆ 8.005 ಕನ್ನಿಕಾ ದುರ್ಗಾಪರಮೇಶ್ವರಿ, ಗಣಪತಿ, ಈಶ್ವರ ನಂದಿ, ಅಂಜನೇಯ ಕಾಕವಾಹನ ನವಗ್ರಹಗಳಿಗೆ ಕಲಶಾಭಿಷೇಕ, ಮಹಾಪೂಜೆ, ಚಂಡಿಕಾಹೋಮ, ಮಂಗಳಾರತಿ, ಪ್ರಸಾದ ವಿತರಣೆ. ಸಂಜೆ 5.00 ಶನಿದೇವರಿಗೆ 108 ಕಲಶಾಸ್ಥಾಪನೆ, ಛಾಯಾದೇವಿ ಹಾಗೂ ಯಕ್ಷಿ ದೇವರಿಗೆ 25 ಕಲಶ, ಕ್ಷೇತ್ರಪಾಲನಿಗೆ 9 ಕಲಶ ಸ್ಥಾಪನೆ ಕಲಾಹೋಮ, ಯಕ್ಷಿ ಛಾಯಾದೇವಿ ಕ್ಷೇತ್ರಪಾಲನಿಗೆ ಕಲಾಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ,15ರ ಶನಿವಾರ 4.55ಗ.ಬ್ರಾಹ್ಮಿ ಮುಹೂರ್ತದಲ್ಲಿ ಶನಿದೇವರಿಗೆ ಕಲಾಶಾಭಿಷೇಕ, ಮಹಾಪೂಜೆ, ದರ್ಶನ ಸೇವೆ, ಪ್ರಸಾದ ವಿತರಣೆ.9.ಗ ಸಾಮೂಹಿಕ ಶನಿಶಾಂತಿ, ಮಂಗಳಾರತಿ, ಪೂರ್ಣಾಹುತಿ ಪ್ರಸಾದ ವಿತರಣೆ, ತುಲಾಭಾರ ಸೇವೆ, ದರ್ಶನ ಸೇವೆ.ಮಹಾ ಅನ್ನಸಂತರ್ಪಣೆ ಕಾರ್ಯಕ್ರಮಗಳು ಜರಗಲಿದೆ

ಸಾಂಸ್ಕೃತಿಕ ಕಲರವ
ಫೆ. 14ರ ಶುಕ್ರವಾರ ಬೆಳಿಗ್ಗೆ 8.00ರಿಂದ ವಿವಿಧ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ,ಮಧ್ಯಾಹ್ನ 12:00ರಿ0ದ ಶ್ರೀ ಗಣೇಶ್ ಕೊಮೆ ಸಾರಥ್ಯದ ಶ್ರೀ ಧರ್ಮಶಾಸ್ತ ಸ್ವರಾಂಜಲಿ,ಮ್ಯೂಸಿಕಲ್ ಕೋಟ ಇವರಿಂದ ಭಕ್ತಿ ಗಾನ ಸುಧೆ, ಸಂಜೆ 6:00 ರಿಂದ ಅಂತರಾಷ್ಟ್ರೀಯ ಮಟ್ಟದ ಯೋಗಪಟು, ಬಾಲನಟಿ ಕಲಾಶ್ರೀ ತಬ್ಬಿತಾ ವಿ. ಇವರಿಂದ ಯೋಗಾಸನ ಮತ್ತು ಭರತನಾಟ್ಯ ಕಾರ್ಯಕ್ರಮ ಹಾಗೂ ಕುಂದಗನ್ನಡ ಹಾಸ್ಯ ಚಕ್ರವರ್ತಿ ಮನು ಹಂದಾಡಿ ಇವರಿಂದ ನಗೆ ಹಬ್ಬ, ರಾತ್ರಿ 8:00ರಿಂದ ಮಂಗಳೂರು ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾವಿದರಿಂದ ಕಾರಣೀಕ ಕ್ಷೇತ್ರದ ಪುಣ್ಯ ಕಥಾನಕದ ನೃತ್ಯರೂಪಕ ಬಿಡುಏನೇ ಬ್ರಹ್ಮಲಿಂಗ ನೃತ್ಯ ರೂಪಕ,ಫೆ.15ರ ಶನಿವಾರ
ಬೆಳಿಗ್ಗೆ 8,00ರಿಂದ ವಿವಿಧ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ಬೆಳಿಗ್ಗೆ 10:00ರಿಂದ: ದೂರದರ್ಶನ ಗಾಯಕ ಡಾ. ಗಣೇಶ್ ಗಂಗೊಳ್ಳಿ, ಇವರಿಂದ ಭಕ್ತಿ ಗಾನ ಲಹರಿ ಸಂಜೆ 5.30ರಿಂದ ಖ್ಯಾತ ಗಾಯಕ ಮೈಸೂರು ರಾಮಚ0ದ್ರ ಆಚಾರ್ಯ ಇವರಿಂದ ಭಜನಾಮೃತ ಹಾಗೂ ರಾತ್ರಿ 8:00ರಿಂದ ಯಕ್ಷನಕ್ಷತ್ರ ಟ್ರಸ್ಟ್ ಕಿರಾಡಿ ಇವರಿಂದ ಕಾವ್ಯಶ್ರೀ ಅಜೇರು, ಗಣೇಶ್ ಹೆಬ್ರಿ, ಸುರೇಶ್ ಶೆಟ್ಟಿ ಶಂಕರನಾರಾಯಣ, ಪ್ರಸಾದ್ ಮೊಗೆಬಿಟ್ಟು ಇವರ ಗಾನ ಸಾರಥ್ಯದಲ್ಲಿ ಅದ್ಧೂರಿಯ ತೆಂಕು-ಬಡಗಿನ ಯಕ್ಷಗಾನ ಮಹಿಷಾಮರ್ಧಿನಿ ಮತ್ತು ಕದ0ಬ ಕೌಶಿಕ ಯಕ್ಷಗಾನ ಕಾರ್ಯಕ್ರಮ ಜರಗಲಿದೆ.
ಹೊರೆಕಾಣಿಕೆ ಮೆರವಣಿಗೆ
ಫ.13ರ ಗುರುವಾರ ಮಧ್ಯಾಹ್ನ 2:00 ಗಂಟೆಗೆ ಸರಿಯಾಗಿ ಕೋಟ ಹೈಸ್ಕೂಲ್ ಬಳಿಯ ಶ್ರೀ ಹಂದೆ ಮಹಾವಿಷ್ಣು ಮತ್ತು ಮಹಾಗಣಪತಿ ದೇವಸ್ಥಾನದಿಂದ ಶ್ರೀ ಕ್ಷೇತ್ರಕ್ಕೆ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ.
ಧಾರ್ಮಿಕ ವಿಧಿವಿಧಾನಗಳನ್ನು ವೇದಮೂರ್ತಿ ಶ್ರೀ ಜನಾರ್ಧನ ಅಡಿಗರ ನೇತೃತ್ವದಲ್ಲಿ ನಡೆಯಲಿರುವುದೆ ಎಂದು ದೇಗುಲ ಆಡಳಿತ ಮೊಕ್ತೇಸರ ಭಾಸ್ಕರ ಸ್ವಾಮಿ ತಿಳಿಸಿದ್ದಾರೆ.

Click Here

LEAVE A REPLY

Please enter your comment!
Please enter your name here