ಸಾಸ್ತಾನ – ಶ್ರೀನಿವಾಸ ಕಲ್ಯಾಣೋತ್ಸವ ಕಛೇರಿ ಉದ್ಘಾಟನೆ

0
255

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಶ್ರೀನಿವಾಸ ಕಲ್ಯಾಣೋತ್ಸವ ಭಗವಂತನ ಇಚ್ಛೆ ಈ ಕಾರ್ಯದಲ್ಲಿ ಪ್ರತಿಯೊಬ್ಬರೂ ಭಾಗಿಯಾಗೋಣ ಎಂದು ಕೋಟದ ಅಮೃತೇಶ್ವರಿ ದೇಗುಲದ ಅಧ್ಯಕ್ಷ ಆನಂದ್ ಸಿ ಕುಂದರ್ ಹೇಳಿದರು.

ಸೋಮವಾರ ಸಾಸ್ತಾನದಲ್ಲಿ ಇದೇ ಬರುವ ಎಪ್ರಿಲ್ ೨ ಮತ್ತು ೩ರಂದು ನಡೆಯಲಿರುವ ಶ್ರೀನಿವಾಸ ಕಲ್ಯಾಣೋತ್ಸವ ಇದರ ಕಛೇರಿಯನ್ನು ಉದ್ಘಾಟಿಸಿ ಮಾತನಾಡಿ ಯಾವುದೇ ಧಾರ್ಮಿಕದಲ್ಲಿ ನಾವುಗಳು ಎಷ್ಟರ ಮಟ್ಟಿಗೆ ಭಾಗಿಯಾಗುತ್ತೇವೆ ಎನ್ನುವುದು ಬಹುಮುಖ್ಯವಾದದ್ದು. ಈ ಕೈಂಕರ್ಯ ಜಾತಿ ಮತ ಭೇದಗಳಿಗೂ ಮಿಗಿಲಾಗಿ ಭಾಗಿಯಾಗೋಣ ಎಂದು ಕರೆ ನೀಡಿದರು.

Click Here

Click Here

ದೀಪ ಬೆಳಗಿಸಿ ಶುಭಸಂದೇಶ ನೀಡಿ ಮಾತನಾಡಿದ ಸಮಿತಿ ಗೌರವಾಧ್ಯಕ್ಷ ವಿದ್ವಾನ್ ಡಾ.ವಿಜಯ್ ಮಂಜರ್ ಸಾರ್ವಜನಿಕ ಶ್ರೀನಿವಾಸ ಕಲ್ಯಾಣೋತ್ಸವ ಲೋಕಕಲ್ಯಾಣಾರ್ಥವಾಗಿ ನಡೆಯುತ್ತದೆ. ಇದನ್ನು ಪ್ರತಿಯೊಬ್ಬರು ವೃತ್ತದಂತೆ ಸ್ವೀಕರಿಸಿ ಭಾಗಿಯಾಗೋಣ. ಇದರ ಮುಖ್ಯ ಉದ್ದೇಶ ಆತ್ಮೋದ್ಧಾರಕ ಲೋಕ ಕಲ್ಯಾಣ. ಈ ಚಿಂತನಾ ಕಾರ್ಯ ಪ್ರತಿಯೊಬ್ಬರಿಗೂ ಶ್ರೇಯಸ್ಸಿನ ದಾರಿಯಾಗಲಿದೆ ಎಂದರು.

ಕಛೇರಿ ಪೂಜಾ ಧಾರ್ಮಿಕ ವಿಧಿವಿಧಾನಗಳನ್ನು ಪ್ರಸನ್ನ ತುಂಗ ನೆರವೆರಿಸಿದರು.

ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಅಧ್ಯಕ್ಷ ಎಂ.ಸಿ ಚಂದ್ರಶೇಖರ್, ಸಾಲಿಗ್ರಾಮ ಪಟ್ಟಣಪಂಚಾಯತ್ ಅಧ್ಯಕ್ಷೆ ಸುಕನ್ಯಾ ಜಗದೀಶ್ ಶೆಟ್ಟಿ, ಉಪಾಧ್ಯಕ್ಷೆ ಗಿರಿಜಾ ಪೂಜಾರಿ, ಮಾಜಿ ತಾ.ಪಂ. ಅಧ್ಯಕ್ಷೆ ಜ್ಯೋತಿ ಉದಯ್ ಕುಮಾರ್, ಪಟ್ಟಣ ಪಂಚಾಯತ್ ಸದಸ್ಯರಾದ ಸುಲತಾ ಹೆಗ್ಡೆ, ರತ್ನ ನಾಗರಾಜ್ ಗಾಣಿಗ, ಶ್ಯಾಮಸುಂದರ್ ನಾಯರಿ, ಪುನಿತ್ ಪೂಜಾರಿ, ಸಮಿತಿಯ ಪ್ರಮುಖರಾದ ಲೀಲಾವತಿ ಗಂಗಾಧರ,ಸುಬ್ರಾಯ ಆಚಾರ್, ಪ್ರತಾಪ್ ಶೆಟ್ಟಿ ಸಾಸ್ತಾನ, ನಾಗರಾಜ್ ಗಾಣಿಗ ಸಾಲಿಗ್ರಾಮ, ಜಿ.ವಿಠ್ಠಲ್ ಪೂಜಾರಿ, ಶಿವರಾಮ ಉಡುಪ, ರಘು ಮಧ್ಯಸ್ಥ ಪಾರಂಪಳ್ಳಿ, ಋಶಿರಾಜ್ ಸಾಸ್ತಾನ, ಪ್ರಶಾಂತ್ ಶೆಟ್ಟಿ,ನಟರಾಜ ಗಾಣಿಗ ,ಧರ್ಮಸ್ಥಳ ಗ್ರಾ.ಯೋ ಮೇಲ್ವಿಚಾರಕಿ ಜಯಲಕ್ಷ್ಮೀ, ಸೇವಾಪ್ರತಿನಿಧಶಿಗಳು ಮತ್ತಿತರರು ಉಪಸ್ಥಿತರಿದ್ದರು.

ಸಾಂಸ್ಕ್ರತಿಕ ವೇದಿಕೆಯ ಸದಸ್ಯ ಗಣೇಶ್ ಜಿ. ಚೆಲ್ಲಮಕ್ಕಿ ಸ್ವಾಗತಿಸಿ ನಿರೂಪಿಸಿದರು. ಪ್ರಧಾನಕಾರ್ಯದರ್ಶಿ ಐರೋಡಿ ವಿಠ್ಠಲ್ ಪೂಜಾರಿ ವಂದಿಸಿದರು.

Click Here

LEAVE A REPLY

Please enter your comment!
Please enter your name here