ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಇಲಿನ ಕೋಟತಟ್ಟು ಹಂದಟ್ಟು ಪರಿಸರದ ಪ್ರಜ್ಞಾ ಗೀತಾ ಪೂಜಾರಿ ತನ್ನ ಕೈಯಿಂದ ರಂಗೋಲಿಯ ಮೂಲಕ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯ ಚಿತ್ರವನ್ನು ಬಿಡಿಸಿ ಸೈ ಎನ್ನಿಸಿಕೊಂಡಿದ್ದಾರೆ.
ಈಕೆ ಉಡುಪಿಯ ಪೂರ್ಣಪ್ರಜ್ಞಾ ಕಾಲೇಜಿನಲ್ಲಿ ಎಂಎಸ್‍ಇ. ವ್ಯಾಸಂಗ ಮಾಡುತ್ತಿದ್ದು ಉಡುಪಿ ಸಮೀಪ ಸ್ನೇಹಿತವೊರ್ವರ ಗೃಹಪ್ರವೇಶದ ಹಿನ್ನಲ್ಲೆಯಲ್ಲಿ ಈ ಚಿತ್ರವನ್ನು ಅರಳಿಸಿದ್ದಾರೆ.
ಈಕೆ ಇತ್ತೀಚಿಗೆ ತನ್ನ ಕೈಯಂಗಳದಿ ಮೂಡಿದ ಸಾಕಷ್ಟು ಚಿತ್ರಗಳ ಮೂಲಕ ಸಂಗ್ರಹಿಸಿದ ಹಣವನ್ನು ಕೋಟದ ಕ್ಯಾನ್ಸರ್ ಪೀಡಿತರಿಗೆ ನೆರವಿನ ಹಸ್ತಚಾಚಿದ್ದಾರೆ. ಪ್ರಸ್ತುತ ಕಟೀಲೇಶ್ವರಿ ದೇವಿಯ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದು,ಗುರುವಿಲ್ಲದೆ ಚಿತ್ರ ಬಿಡಿಸುವ ಕಾಯಕ ಹಲವು ಚಿತ್ರರಂಗದ ಗಣ್ಯರ ಚಿತ್ರ ಬಿಡಿಸಿ ಮನಗೆದ್ದಿರುವುದು ಗಮನಾರ್ಹವಾಗಿದೆ.