ಸಾಸ್ತಾನ ಟೋಲ್ ಪ್ಲಾಜಾ ಬಳಿ ಬಸ್ಸು ಮಾಲಕರ ಸಂಘಟನೆಯಿಂದ ಪ್ರತಿಭಟನೆ

0
269

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕೋಟ: ಸಾಸ್ತಾನ ಟೋಲ್ ಪ್ಲಾಜಾ ಮತ್ತು ಹೆಜಮಾಡಿ ಟೋಲ್ ಪ್ಲಾಜಾಗಳಲ್ಲಿ ಖಾಸಗಿ ಬಸ್‍ಗಳಿಂದ ಕೆ.ಕೆ ಆರ್ ಕಂಪನಿ ದುಪ್ಪಟ್ಟು ಹಣ ವಸೂಲಾತಿ ಹಾಗೂ ಅವ್ಯವಹಾರದ ವಿರುದ್ಧ ಕೆನರಾ ಬಸ್ಸು ಮಾಲಕರ ಸಂಘ ಉಡುಪಿ, ಮಂಗಳೂರು. ಕರಾವಳಿ ಬಸ್ಸು ಮಾಲಕರ ಸಂಘ ಮಂಗಳೂರು ಉಡುಪಿ ಇವರ ವತಿಯಿಂದ ಬೃಹತ್ ಪ್ರತಿಭಟನಾ ಕಾರ್ಯಕ್ರಮ ಬುಧವಾರ ಸಾಸ್ತಾನ ಟೋಲ್ ಪ್ಲಾಜಾ ಬಳಿ ಮೌನ ಪ್ರತಿಭಟನೆ ನಡೆಸಿತು.

Click Here

ಈ ಸಂದರ್ಭದಲ್ಲಿ ಸಾಸ್ತಾನ ಟೋಲ್ ನಿರ್ವಾಹಕ ಸುನೀಲ್ ಇವರಿಗೆ ಮನವಿ ಸಲ್ಲಿಸಿತು. ಈ ವೇಳೆ ಹೋರಾಟಗಾರರ ಪರವಾಗಿ ಕಿಶನ್ ಕೊಳ್ಕೆಬೈಲ್, ವಿಜಯ್ ಕುಮಾರ್, ವಸಂತ ಶೆಟ್ಟಿ, ಹರೀಶ್ ಶೆಟ್ಟಿ, ದಿನೇಶ್, ಚಂದ್ರಿಕಾ ವಾದಿರಾಜ್, ವಿವೇಕ್, ಅಶಿರ್, ಶಿವಾನಂದ ಗಾಣಿಗ, ಹೆದ್ದಾರಿ ಜಾಗೃತಿ ಸಮಿತಿಯ ಪ್ರಮುಖ ವಿಠಲ ಪೂಜಾರಿ, ಸುಭಾಷ್ ಶೆಟ್ಟಿ ಗಿಳಿಯಾರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here