ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಕುಂದಾಪುರ ತಾಲೂಕಿನ ಪುರಾಣ ಪ್ರಸಿದ್ಧ ಬಸ್ರೂರು ಶ್ರೀ ಮಹಾಲಸ ನಾರಾಯಣಿ ದೇವಸ್ಥಾನಕ್ಕೆ ಭೇಟಿ ನೀಡಿದರು. ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಮುಖ್ಯಮಂತ್ರಿಗಳನ್ನು ಬರಮಾಡಿಕೊಂಡು ದೇವರ ಪ್ರಸಾದ ನೀಡಿ ಗೌರವಿಸಿದರು.
ಬೈಂದೂರು ಶಾಸಕ ಗುರುರಾಜ್ ಗಂಟಿ ಹೊಳೆ ಆಡಳಿತ ಮಂಡಳಿಯ ದಿನಕರ ಶೆಣೈ, ಗಣೇಶ್ ಪ್ರಭು, ಗೋಕುಲದಾಸ್ ಪೈ, ಕಮಲಾಕ್ಷ ಪೈ, ಗೋಪಾಲಕೃಷ್ಣ ಪೈ, ಅರುಣ್ ಶೆಣೈ , ಸಮಾಜ ಭಾಂದವರು, ಅರ್ಚಕರು, ಮೊದಲಾದವರು ಉಪಸ್ಥಿತರಿದ್ದರು.











