ಕುಂದಾಪುರ :ಫೆ. 21 ರಿಂದ 23ತನಕ ಭಂಡಾರ್ಕಾರ್ಸ್ ಆರ್ಟ್ಸ್ ಆ್ಯಂಡ್ ಸಾಯನ್ಸ್ ಕಾಲೇಜಿನಲ್ಲಿ “ಕರ್ನಾಟಕ ಇತಿಹಾಸ ಪರಿಷತ್ತು 35ನೇ ವಾರ್ಷಿಕ ಮಹಾಅಧಿವೇಶನ”

0
260

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಭಂಡಾರ್ಕಾರ್ಸ್ ಆರ್ಟ್ಸ್ ಆ್ಯಂಡ್ ಸಾಯನ್ಸ್ ಕಾಲೇಜು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ಬೆಂಗಳೂರು ಹಾಗೂ ಧಾರವಾಡ ವಲಯ ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ಅಧ್ಯಾಪಕರ ಸಂಘ ಇವರ ಸಹಯೋಗದಲ್ಲಿ ಕರ್ನಾಟಕ ಇತಿಹಾಸ ಪರಿಷತ್ತು 35ನೇ ವಾರ್ಷಿಕ ಮಹಾಅಧಿವೇಶನ ಫೆ. 21, 22 ಮತ್ತು 23ರಂದು ಆರ್.ಎನ್.ಶೆಟ್ಟಿ ಸಭಾಂಗಣ, ಭಂಡಾರ್ಕಾರ್ಸ್ ಕಾಲೇಜು, ಕುಂದಾಪುರ ಇಲ್ಲಿ ನಡೆಯಲಿದೆ ಎಂದು ಕಾಲೀಜಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶುಭಕರಾಚಾರಿ ತಿಳಿಸಿದರು.

ಕರ್ನಾಟಕ ಇತಿಹಾಸ ಪರಿಷತ್ತು 35ನೇ ವಾರ್ಷಿಕ ಮಹಾಅಧಿವೇಶನದ ಪರಿಷತ್ತಿನ ಸ್ಥಳೀಯ ಕಾರ್ಯದರ್ಶಿಗಳಾದ ಗೋಪಾಲ ಕೆ. ಮಾತನಾಡಿ 1981 ರಿಂದ ಸತತವಾಗಿ ಪ್ರತಿವರ್ಷ ರಾಜ್ಯದ ವಿಶ್ವವಿದ್ಯಾಲಯ ಅಥವಾ ಕಾಲೇಜುಗಳಲ್ಲಿ ನಡೆಸುತ್ತಾ ಬಂದಿರುವ ಈ ಮಹಾ ಅಧೀವೇಶನದ ಉದ್ದೇಶಗಳು.
ಕರ್ನಾಟಕದ ಇತಿಹಾಸ ಹಾಗೂ ಸಂಸ್ಕೃತಿಯ ಕುರಿತಂತೆ ಸಂಶೋಧನೆಗಳನ್ನು ಮಾಡಲು ಪ್ರೇರೇಪಿಸುವುದು. ಸಂಶೋಧನೆ, ಪ್ರಬಂಧಮಂಡನೆ, ಪುಸ್ತಕ ಪ್ರಕಟಣೆ ಮುಂತಾದ ಜ್ಞಾನವೃದ್ಧಿ ಪ್ರಕ್ರಿಯೆಯನ್ನು ಉತ್ತೇಜಿಸುವುದು. ಕರ್ನಾಟಕ ವಿವಿಧ ಭಾಗದ ಸಂಶೋಧಕರಿಗೆ, ವಿದ್ವಾಂಸರುಗಳಿಗೆ ಹೊಸ ಹೊಸ ವ್ಯಾಖ್ಯಾನ ವಿವರಣೆಯುಳ್ಳ ಕೃತಿಗಳನ್ನು ಪ್ರಕಟಿಸಲು ವೇದಿಕೆಯನ್ನು ಒದಗಿಸುವುದು. ಕರ್ನಾಟಕದ ಇತಿಹಾಸದ ವೈಶಿಷ್ಟತೆಯನ್ನು ಬೌದ್ಧಿಕ ವಲಯಕ್ಕೆ ತಲುಪಿಸುವುದು.

ಫೆ.21ರಂದು ಪೂರ್ವಾಹ್ನ 10 ಗಂಟೆಗೆ ಸರಿಯಾಗಿ ಮಹಾಅಧೀವೇಶನದ ಉದ್ಘಾಟನೆಯನ್ನು ಡಾ. ಎಚ್.ಎಸ್.ಬಲ್ಲಾಳ್, ಪ್ರೊ-ಛಾನ್ಸಲರ್, ಮಾಹೆ, ಇವರು ಮಾಡಲಿದ್ದಾರೆ. ಸಮ್ಮೇಳನದ ಸರ್ವಾಧ್ಯಕ್ಷರು : ಡಾ. ಕೇಶವನ್ ವೇಳುತಾಟ್, ಮಾನ್ಯ ವಿಶ್ರಾಂತ ಪ್ರಾಧ್ಯಾಪಕರು, ಇತಿಹಾಸ ವಿಭಾಗ, ಮಂಗಳೂರು ಹಾಗೂ ದೆಹಲಿ ವಿಶ್ವವಿದ್ಯಾನಿಲಯ ಇವರು ಭಾಗವಹಿಸಲಿದ್ದಾರೆ. ಕೋಟ ಶ್ರೀನಿವಾಸ ಪೂಜಾರಿ ಲೋಕಸಭಾ ಸದಸ್ಯರು, ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ. ಕಿರಣ್ ಕುಮಾರ್ ಕೊಡ್ಗಿ್ ಶಾಸಕರು, ಕುಂದಾಪುರ ವಿಧಾನ ಸಭಾ ಕ್ಷೇತ್ರ. ಡಾ. ರಾಜಣ್ಣ, ಅಧ್ಯಕ್ಷರು, ಕರ್ನಾಟಕ ಇತಿಹಾಸ ಪರಿಷತ್ತು, ಬೆಂಗಳೂರು ಡಾ. ಡಿ. ವಿ. ಪರಮಶಿವಮೂರ್ತಿ, ಕುಲಪತಿಗಳು, ಕನ್ನಡ ವಿಶ್ವವಿದ್ಯಾನಿಲಯ, ಹಂಪಿ ಡಾ. ಎಮ್.ಎಸ್. ಜಯಕರ ಶೆಟ್ಟಿ, ಕುಲಪತಿಗಳು, ಬೆಂಗಳೂರು ವಿಶ್ವವಿದ್ಯಾನಿಲಯ, ಬೆಂಗಳೂರು ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ಹೇಳಿದರು.

Click Here

ಈ ಸಂದರ್ಭದಲ್ಲಿ ಐತಿಹಾಸಿಕ ನೆಲೆಯನ್ನು ಪರಿಚಯಿಸುವ ಪುಸ್ತಕಗಳ ಬಿಡುಗಡೆ ನಡೆಯಲಿದೆ.

ಪ್ರಶಸ್ತಿ ಪ್ರದಾನ : ಇತಿಹಾಸ ಸಂಶೋಧನಾ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ವಿದ್ಯಾಂಸರುಗಳಿಗೆ ರಾಜರ್ಷಿ ಡಾ. ಡಿ. ವಿರೇಂದ್ರ ಹೆಗ್ಗಡೆ ಪ್ರಶಸ್ತಿ, ಡಾ. ಬಿ. ಶೇಕ್ ಅಲಿ ಪ್ರಶಸ್ತಿ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಒನಕೆ ಓಬವ್ವ ಪ್ರಶಸ್ತಿ, ಕುಂದಣ ಪ್ರಶಸ್ತಿ ಹಾಗೂ ಅತ್ಯುತ್ತಮ ಸಂಶೋಧನಾ ಪ್ರಬಂಧ ಪ್ರಶಸ್ತಿಗಳನ್ನು ನೀಡಲಾಗುವುದು.

ದಿನಾಂಕ 21 ಮತ್ತು 22 ರಂದು ಪ್ರೊ. ಎಸ್. ಶೆಟ್ಟರ್ ದತ್ತಿನಿಧಿ, ಪ್ರೊ. ಎಲ್. ಪಿ ರಾಜು ದತ್ತಿನಿಧಿ, ಈರಣ್ಣ ಪತ್ತಾರ ದತ್ತಿನಿಧಿ, ಪ್ರೊ ಎಸ್. ರಾಜಶೇಖರ ದತ್ತಿನಿಧಿ, ಪ್ರೊ ಶಿವರುದ್ರ ಕಲ್ಲೋಳಿಕರ್ ದತ್ತಿನಿದಿ, ಪ್ರೊ ನಾಗರತ್ನ ದತ್ತಿನಿಧಿ ಉಪನ್ಯಾಸಗಳು ನಡೆಯಲಿರುವುದು. ದಿನಾಂಕ 21.02.2023ರ ಸಂಜೆ 5.00ಕ್ಕೆ ಸರಿಯಾಗಿ ಕವಿ – ಅಮೃತ ಸೋಮೇಶ್ವರ ವಿರಚಿತ ಶ್ರೀ ಪ್ರಸಾದ್ ಕುಮಾರ ಮೊಗೆಬೆಟ್ಟು ನಿರ್ದೇಶನದಲ್ಲಿ “ರಣಧೀರ ಪುಲಿಕೇಶಿ” ಎಂಬ ಯಕ್ಷಗಾನ ಪ್ರಸಂಗ ನಡೆಯಲಿರುವುದು.

ದಿನಾಂಕ 23 ರಂದು ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸ ಮತ್ತು ಸಂಸ್ಕøತಿ ಕುರಿತ ಸಿಂಪೋಸಿಯಂ ಮತ್ತು ಸಮಾರೋಪ ಸಮಾರಂಭ ನಡೆಯಲಿರುವುದು ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Click Here

LEAVE A REPLY

Please enter your comment!
Please enter your name here