ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡೆ ಸಹಿತ ಎಲ್ಲಾ ರಂಗದಲ್ಲಿಯೂ ಎಕ್ಸಲೆಂಟ್ ವಿದ್ಯಾಸಂಸ್ಥೆ ವಿಶಿಷ್ಟ ಸಾಧನೆ, ರಾಜ್ಯಕ್ಕೆ ಮಾದರಿ – ಎಂ. ಮಹೇಶ್ ಹೆಗ್ಡೆ

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಕುಂದಾಪುರದ ಸುಣ್ಣಾರಿಯಲ್ಲಿ ಕಳೆದ 12 ವರ್ಷಗಳ ಹಿಂದೆ ಕೇವಲ 40 ವಿದ್ಯಾರ್ಥಿಗಳಿಂದ ಪ್ರಾರಂಭವಾದ ಎಕ್ಸಲೆಂಟ್ ವಿದ್ಯಾಸಂಸ್ಥೆ ಇಂದು ವಿದ್ಯಾರ್ಥಿಗಳ ಸಂಖ್ಯೆಯಲ್ಲಿಯೂ, ಸಾಧನೆಯಲ್ಲಿಯೂ ರಾಜ್ಯಕ್ಕೆ ಮಾದರಿಯಾಗಿ ಬೆಳೆಯುತ್ತಿದೆ. ಎಕ್ಸಲೆಂಟ್ ವಿದ್ಯಾಸಂಸ್ಥೆ ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡೆ ಸಹಿತ ಎಲ್ಲಾ ರಂಗದಲ್ಲಿಯೂ ಕೂಡ ವಿಶಿಷ್ಟ ಸಾಧನೆಗಳ ಮೂಲಕ ತನ್ನದೇ ಆದ ಛಾಪನ್ನು ಮೂಡಿಸುತ್ತಾ ಬಂದಿದೆ ಎಂದು ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಎಂ. ಮಹೇಶ್ ಹೆಗ್ಡೆ ಹೇಳಿದರು.
ಎಕ್ಸಲೆಂಟ್ ಸಂಸ್ಥೆಯಲ್ಲಿ ಪ್ರತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಜೆಇಇ ಮೈನ್ 2025ರ ಫಲಿತಾಂಶದಲ್ಲಿ ಎಕ್ಸಲೆಂಟ್ ಕಾಲೇಜು ಉಡುಪಿ, ಕುಂದಾಪುರ, ಬೈಂದೂರು ತಾಲ್ಲೂಕಿಗೆ ಪ್ರಥಮ ಸ್ಥಾನಿಯಾಗಿದೆ. 2024ರ ವರ್ಷದ ಫಲಿತಾಂಶಕ್ಕಿಂತ ಅತ್ಯುತ್ತಮ ಫಲಿತಾಂಶವನ್ನು ಈ ಸಾಲಿನಲ್ಲಿ ಪಡೆದಿದ್ದು, 2024ರ ಫಲಿತಾಂಶ 97.66 ಜೆಇಇ ಮೈನ್ಸ್‍ನಲ್ಲಿ ಪಡೆದರೆ ಈ ವರ್ಷ ಅನನ್ಯ ಯು. ಶೆಟ್ಟಿ 97.69 ಪರ್ಸೆಟೈಲ್ ತೆಗೆದು ಅತ್ಯುತ್ತಮ ಫಲಿತಾಂಶ ಪಡೆದಿರುತ್ತಾರೆ. ವಿಷಯವಾರು ಫಲಿತಾಂಶದಲ್ಲಿ ಹಿಂದಿನ ವರ್ಷ 98.80 ಪರ್ಸೈಟೈಲ್ ದಾಖಲಾಗಿದ್ದರೆ, 2025ನೇ ಸಾಲಿನಲ್ಲಿ ಪ್ರಸ್ತುತಿ ಶೆಟ್ಟಿ 99.51 ಪರ್ಸೆಟೈಲ್ ಪಡೆದುಕೊಂಡಿದ್ದಾರೆ. ಈ ವರ್ಷ 90 ಪರ್ಸೆಟೈಲ್‍ನಿಂದ 99.51 ಪರ್ಸೆಟೈಲ್‍ವರೆಗೆ 21 ವಿದ್ಯಾರ್ಥಿಗಳು ಸ್ಥಾನವನ್ನು ಪಡೆದಿದ್ದಾರೆ. ತ್ರಿಶಾ ಪಿ. ಶೆಟ್ಟಿ 98.58, ಆಮರ್‍ದೀಪ್ ಶೆಟ್ಟಿ 98.68, ಶ್ರೀ ಹರ್ಷ ಪೆನ್ನುಗೊಂಡಲ 97.42. ಸ್ಮರಣ್ ಎಂ. 96.33. ಮನ್ವಿತ್ 96.32, ಪ್ರಜ್ವಲ್ ಕೆ. 95.65, ಶಮನ ಯು. ಶೆಟ್ಟಿ 95.59., ದೀಕ್ಷಿತ್ ಶೆಟ್ಟಿ 95.02., ಗಗನ್ 94.72., ಚಿರಾಗ್ ಎಂ.ಕೆ. 94.44., ಸಿಂಚನ ಎಸ್.ಶೆಟ್ಟಿ 94.14, ಜಿತೇಶ ಶೆಟ್ಟಿ 93.55, ಆಕಾಶ್ 92.62, ಚಿತ್ರಾ ನಾಯಕ್ 91.37, ಅನ್ವಿತಾ ಪ್ರಭಾಕರ 91.28, ವೃತೀನ್ ಉದಯ ಕುಮಾರ್ 90.36, ತೇಜಸ್ವಿ ಕೃಷ್ಣಾನಂದ್ 90.21. ನಿಹಾಲ್ ಜೆ. ಶೆಟ್ಟಿ 90.04, ಹಾಗೂ ಅವಿಜಿತ್ ಶೆಟ್ಟಿ 90.03 ಪರ್ಸೆಟೈಲ್ ಪಡೆದು ಉತ್ತಮ ಸಾಧನೆ ಮಾಡಿದ್ದಾರ ಎಂದು ಅವರು ಹೇಳಿದರು.
2026-27ನೇ ಶೈಕ್ಷಣಿಕ ಸಾಲಿನಿಂದ ಎಲ್‍ಕೆಜಿ ಯಿಂದ 6ನೇ ತರಗತಿವರೆಗೆ ಪ್ರಾರಂಭಿಸಲು ನಿರ್ಧರಿಸಲಾಗಿದ್ದು, ಈ ಸಾಲಿನಲ್ಲಿ 6 ರಿಂದ 10ನೇ ತರಗತಿವರೆಗೆ ಪ್ರಾರಂಭಿಸಲಾಗುವುದು. ಇದಕ್ಕಾಗಿ ನೂತನ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ. ಪ್ರತಿಯೊಂದು ತರಗತಿಯಲ್ಲಿ ಸ್ಮಾರ್ಟ್ ಕ್ಲಾಸ್ ಅಳವಡಿಕೆ ಮಾಡಲಾಗುತ್ತಿದ್ದು, ಶಾಲೆಯ ಪ್ರಾಂಗಣ ನವೀನ ವಿನ್ಯಾಸದೊಂದಿಗೆ ಹಸಿರಿನಿಂದ ಕಂಗೊಳಿಸುವಂತೆ ನಿರ್ಮಿಸಲಾಗುತ್ತಿದೆ. ಎಕ್ಸಲೆಂಟ್ ವಿದ್ಯಾಸಂಸ್ಥೆಯನ್ನು ಜಿಲ್ಲೆಯಲ್ಲಿ ಮಾದರಿ ಸಂಸ್ಥೆಯನ್ನಾಗಿ ರೂಪಿಸಬೇಕೆಂಬ ದೃಢಸಂಕಲ್ಪದಿಂದ ಮುನ್ನಡೆಯುತ್ತಿದ್ದೇವೆ ಎಂದು ಅವರು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ನಾಗರಾಜ ಶೆಟ್ಟಿ ಮಾತನಾಡಿ, ಎಕ್ಸಲೆಂಟ್ ಸಂಸ್ಥೆಯ ಯಶಸ್ಸಿನ ಕಿರೀಟಕ್ಕೆ ಮತ್ತೊಂದು ಗರಿ ಎನ್ನುವಂತೆ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಅಪಾರವಾದ ಕೊಡುಗೆಗಳು ಹಾಗೂ ಗ್ರಾಮೀಣ ವಿದ್ಯಾರ್ಥಿಗಳ ಸರ್ವೋತೋಮುಖ ಬೆಳವಣಿಗೆಗೆ ಕಾರಣವಾದ ಹಿನ್ನಲೆಯಲ್ಲಿ ಮತ್ತು ಗ್ರಾಮೀಣ ವಿದ್ಯಾರ್ಥಿಗಳ ಮೇಲೆ ತೋರಿಸಿದ ಕಾಳಜಿ ಹಾಗೂ ಶಿಕ್ಷಣದ ಮೇಲೆ ಇಟ್ಟಿರುವ ಗುರುತರವಾದ ಈ ಜವಾಬ್ದಾರಿಯನ್ನು ಗುರುತಿಸಿ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಕೊಡಮಾಡುವ “ಸುವರ್ಣ ಕನ್ನಡಿಗ 2025” ಪ್ರಶಸ್ತಿಗೆ ಸಂಸ್ಥೆಯ ಅಧ್ಯಕ್ಷ ಎಂ. ಮಹೇಶ್ ಹೆಗ್ಡೆ ಭಾಜನರಾಗಿದ್ದಾರೆ. ಇದು ಎಕ್ಸಲೆಂಟ್ ಸಂಸ್ಥೆಯ ಕೀರ್ತಿ ಕಳಶಕ್ಕೆ ದೊರೆತ ಮತ್ತೊಂದು ಹಿರಿಮೆಯ ಗರಿಯಾಗಿದೆ. ಮುಂದಿನ ದಿನಗಳಲ್ಲಿ ಹೊಸ ಹೊಸ ಸಮಾಜಮುಖಿ ಚಟುವಟಿಕೆಗಳನ್ನು ಇಟ್ಟುಕೊಂಡು ಸಂಸ್ಥೆಯ ಶ್ರೇಯೋಭಿವೃದ್ಧಿಯನ್ನು ರೂಪಿಸುತ್ತಾ ಗ್ರಾಮೀಣ ವಿದ್ಯಾರ್ಥಿಗಳ ಸಾಧನೆಯನ್ನು ದೇಶದ ಉತ್ತುಂಗಕ್ಕೆ ಏರಿಸುವ ಪಣವನ್ನು ಎಕ್ಸಲೆಂಟ್ ಸಂಸ್ಥೆ ತೊಟ್ಟಿದೆ ಎಂದು ಅವರು ಹೇಳಿದರು.











