ಕುಂದಾಪುರ ಮಿರರ್ ಸುದ್ದಿ…
ಕೋಟ: ಕೋಟದ ಪಂಚವರ್ಣ ಯುವಕ ಮಂಡಲದ ನೇತ್ರತ್ವದಲ್ಲಿ ಗಿಳಿಯಾರು ಯುವಕ ಮಂಡಲ,ಮಣೂರು ಫ್ರೆಂಡ್ಸ್,ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ಯಕ್ಷ ಸೌರಭ ಕಲಾರಂಗ ಕೋಟ,ಮಹಿಳಾ ಬಳಗ ಹಂದಟ್ಟು ಇವರುಗಳ ಸಂಯೋಜನೆಯೊಂದಿಗೆ ನಡೆಯುತ್ತಿರುವ ನಿರಂತರ ಪ್ರತಿ ಭಾನುವಾರ ಸ್ವಚ್ಛತಾ ಅಭಿಯಾನಕ್ಕೆ 100ವಾರಗಳ ಸಂಭ್ರಮ ಆ ಪ್ರಯುಕ್ತ ಡಿ.12ರಂದು ಭಾನುವಾರ ಕೋಟ ಪಡುಕರೆ ಲಕ್ಷ್ಮೀ ಸೋಮಬಂಗೇರ ಸರಕಾರಿ ಪ್ರಥಮದರ್ಜೆ ಕಾಲೇಜು,ಗೀತಾನಂದ ಫೌಂಡೇಶನ್ ಮಣೂರು,ರೋಟರಿ ಕ್ಲಬ್ ಕೋಟ ಸಾಲಿಗ್ರಾಮ,ಕೋಟ ಹಾಗೂ ಕೋಟತಟ್ಟು ಗ್ರಾಮಪಂಚಾಯತ್, ನಿಸ್ವಾರ್ಥ ಸೇವಾ ಟ್ರಸ್ಟ್ ಕೋಟ ಇವರುಗಳ ಸಹಯೋಗದೊಂದಿಗೆ ಕೋಟ ಮಣೂರು ರಾಷ್ಟ್ರೀಯ ಹೆದ್ದಾರಿಯ ಮೂಲಕ ಕೋಟ ಹಿರೇಮಹಾಲಿಂಗೇಶ್ವರ ದೇವಳದ ವರೆಗೆ ಬೃಹತ್ ಸ್ವಚ್ಛತಾ ಅಭಿಯಾನ ಹಮ್ಮಿಕೊಂಡಿದೆ.
ವಿಶೇಷವಾಗಿ ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ನೂರನೇ ದಿನದ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.ಕಾರ್ಯಕ್ರಮದಲ್ಲಿ ಪರಿಸರವಾದಿಗಳಾದ ಮಂಗಳೂರಿನ ಜಿತ್ ಮಿಲನ್ ರೋಶ್ ,ವಿನಯಚಂದ್ರ ಸಾಸ್ತಾನ,ಪರಿಸರ ತಜ್ಞ ಡಾ.ಬಾಲಕೃಷ್ಣ ಮದ್ದೋಡಿ ಭಾಗವಹಿಸಲಿದ್ದು ಮಣೂರು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಅಧ್ಯಕ್ಷತೆ ವಹಿಸಲಿದ್ದಾರೆ.ಹಾಗೆ ಸ್ಥಳೀಯ ಸಹಯೋಗ ಸಂಸ್ಥೆಗಳ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿಲ್ಲಿದ್ದಾರೆ.
ಸುಮಾರು 3ವರೆ ಕಿಮೀ ಸ್ವಚ್ಛತಾ ಅಭಿಯಾನ
ಪ್ರತಿ ವರ್ಷ ಸ್ವಚ್ಛತಾ ಅಭಿಯಾನದ ಮೂಲಕ ಕೋಟ ಸುತ್ತಮುತ್ತಲ ರಾಷ್ಟ್ರೀಯ ಹೆದ್ದಾರಿ ,ಒಳ ರಸ್ತೆಗಳು ,ದೇವಳಗಳು ,ಬೀಚ್ ಹೀಗೆ ಸಾಕಷ್ಟು ಭಾಗಗಳನ್ನು ಶುಚಿಗೊಳಿಸುವ ಯೋಜನೆಯ, ನಡುವೆ ಪುನಃ ಆಯಾ ಭಾಗಗಳ ಪ್ಲಾಸ್ಟಿಕ್ ಕೊಂಪೆಗಳಾಗುವುದನ್ನು ತಡೆಯುವ ಉದ್ದೇಶದಿಂದ ಇದೇ ಬರುವಡಿ.12ರ ಭಾನುವಾರ ಸುಮಾರು 3ವರೆ ಕಿಮೀ ಪ್ಲಾಸ್ಟಿಕ್ ಮುಕ್ತಗೊಳಿಸುವ ಯೋಜನೆಗೆ ಈ ಎಲ್ಲಾ ಸಂಘಸಂಸ್ಥೆಗಳು,ಕಾಲೇಜು ವಿದ್ಯಾರ್ಥಿಗಳು,ಸ್ಥಳೀಯ ಪಂಚಾಯತ್ ಗಳು ಗುರಿ ಹಾಕಿಕೊಂಡಿವೆ.
ವಿಶೇಷತೆ:-
ಈ ಕಾರ್ಯಕ್ರಮದ ವಿಶೇಷತೆ ಏನೆಂದರೆ ಪ್ರತಿ ಭಾನುವಾರ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳುವ ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಹಲವು ಸಂಘಸಂಸ್ಥೆಗಳು ಪಾಲ್ಗೊಳ್ಳಲಿದೆ ಅದರಲ್ಲಿ ಕ್ಲಿನ್ ಕುಂದಾಪುರ ಪೆÇ್ರಜೆಕ್ಟ್, ಪರಿಸರ ಸ್ನೇಹಿ ಮಟ್ನಕಟ್ಟೆ ಬಳಗ ಕೆರ್ಗಾಲ್ ಉಪ್ಪುಂದ,ಕ್ಲಿನ್ ತ್ರಾಸಿ ಪ್ರೊಜೆಕ್ಟ್, ಸ್ವಚ್ಛತಾ ಮಾಸತಂಡ ಮರವಂತೆ ಇವರುಗಳು ಪಾಲ್ಗೊಳ್ಳಲಿದ್ದಾರೆ.ಎಂದು ಸಂಘದ ಅಧ್ಯಕ್ಷ ಅಮೃತ್ ಜೋಗಿ ಹಾಗೂ ಅಭಿಯಾನದ ಸಂಯೋಜಕ ರವೀಂದ್ರ ಕೋಟ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.











