ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕುಂದಾಪುರ ತಾಲೂಕಿನ ಕೋಡಿ ಪ್ರದೇಶದಲ್ಲಿ ಕೃಷಿ ಜಮೀನು ಮತ್ತು ಮನೆಗಳಿಗೆ ಉಪ್ಪು ನೀರು ಬರದಂತೆ ತಡೆಯಲು ನದಿ ದಂಡೆ ಸಂರಕ್ಷಣೆಗೆ ಅನುದಾನ ಮಂಜೂರು ಮಾಡುವಂತೆ ಕುಂದಾಪುರದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿಯವರು ಸಣ್ಣ ನೀರಾವರಿ ಸಚಿವರಾದ ಎನ್ಎಸ್ ಬೋಸರಾಜರಿಗೆ ಮನವಿ ಮಾಡಿದರು.
ವಿಧಾನಸಭೆಯ ಅಧಿವೇಶನದ ಸಂದರ್ಭದಲ್ಲಿಯೇ ಸಣ್ಣ ನೀರಾವರಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ಎಸ್ ಬೋಸರಾಜರನ್ನು ಭೇಟಿ ಮಾಡಿ ಕೋಡಿ ಪರಿಸರದಲ್ಲಿ ನದಿಗಳಿಂದ ಉಪ್ಪು ನೀರು ಉಕ್ಕಿ ಕೃಷಿ ಜಮೀನು ಮತ್ತು ಮನೆಗಳಿಗೆ ನುಗ್ಗುತ್ತಿದ್ದು ಈ ಸಮಸ್ಯೆಯಿಂದ ಕೋಡಿ ಭಾಗದ ಜನ ವಸತಿ ಪ್ರದೇಶದ ಗ್ರಾಮಸ್ಥರು ದಿನ ನಿತ್ಯ ಸಮಸ್ಯೆಗೆ ಒಳಗಾಗಿದ್ದು ಉಪ್ಪು ನೀರು ನುಗ್ಗುವುದರಿಂದ ನೂರಾರು ಎಕರೆ ಕೃಷಿ ಜಮೀನಿನಲ್ಲಿ ಕೃಷಿ ಮಾಡಲಾಗುತ್ತಿಲ್ಲ ಕುಡಿಯುವ ನೀರು ಸಹ ಉಪ್ಪಾಗಿದ್ದು ಹಾಗೂ ಉಪ್ಪು ನೀರು ನಿಲ್ಲುವುದರಿಂದ ಹುಲ್ಲು ಮತ್ತು ಗಿಡಗಳು ಕೊಳೆತು ವಿಪರೀತ ಸೊಳ್ಳೆ ಉತ್ಪತ್ತಿಯಾಗುತ್ತಿದ್ದು ಸಾಂಕ್ರಮಿಕ ರೋಗ ಹರಡುವ ಸಾಧ್ಯತೆ ಇರುವುದರಿಂದ ಕೋಡಿ ಬಾಗದ ಜನರು ಸಂಕಷ್ಟಕ್ಕೆ ಒಳಗಾಗಿದ್ದು ಜರೂರು ಉಪ್ಪು ನೀರು ನುಗ್ಗದಂತೆ ನದಿ ದಂಡೆ ಕಟ್ಟುವ ಅಗತ್ಯತೆ ಇದ್ದು ಕೋಡಿ ಪರಿಸರದಲ್ಲಿ ಕೃಷಿ ಜಮೀನು ಮತ್ತು ಮನೆಗಳಿಗೆ ಉಪ್ಪು ನೀರು ಬರದಂತೆ ತಡೆಯಲು ನದಿ ದಂಡೆ ಸಂರಕ್ಷಣೆಗೆ ಆದ್ಯತೆ ನೀಡುವ ಸಲುವಾಗಿ ಜರೂರು ಅನುದಾನ ಮಂಜೂರು ಮಾಡುವಂತೆ ಶಾಸಕರು ಸಚಿವರಲ್ಲಿ ವಿನಂತಿಸಿ ಮನವಿ ಪತ್ರವನ್ನು ನೀಡಿದರು.











