ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆಯಿಂದ ಮಾ.19 ರಿಂದ 22ತನಕ ನಡೆದ ರಾಜ್ಯ ಮಟ್ಟದ ಕಡಲ ತೀರದ ಚಾರಣ, ಪ್ರಕೃತಿ ಅಧ್ಯಯನ ಮತ್ತು ಸ್ವಚ್ಚತಾ ಅಭಿಯಾನ ಕುಂಭಾಶಿಯ ಆನೆಗುಡ್ಡೆ ಸಭಾಭವನದಲ್ಲಿ ಇತ್ತೀಚಿಗೆ ನಡೆಯಿತು. ಬೆಂಗಳೂರು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಅರ್.ಸಿಂಧ್ಯಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆಯ ಮುಖ್ಯ ಆಯುಕ್ತ ಇಂದ್ರಾಳಿ ಜಯಕರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಶಿಬಿರಕ್ಕೆ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಭಾರತ್ ಸೌಟ್ಸ್ ಮತ್ತು ಗೈಡ್ಸ್ ನಲ್ಲಿ 30 ವರ್ಷಗಳ ಕಾಲ ಸೇವೆ ಸಲ್ಲಿಸಿ ಭಾರತ್ ಸೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆಯಿಂದ ಮೆಡಲ್ ಆಫ್ ಮೇರಿಟ್ ಸೇವಾ ಪದಕಕ್ಕೆ ಭಾಜನರಾದ ಗುಣರತ್ನ ಇವರನ್ನು ಪಿ.ಜಿ.ಅರ್.ಸಿಂಧ್ಯಾ ವಿಶೇಷವಾಗಿ ಗೌರವಿಸಿ, ಸನ್ಮಾಸಿದರು.
ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ. ರಮಣ ಉಪಾಧ್ಯಾಯ, ಆನೆಗುಡ್ಡೆ ಶ್ರೀ ವಿನಾಯಕ ಸಭಾಗೃಹದ ಮಾಲಕ ರವಿರಾಜ್ ಉಪಾಧ್ಯಾಯ, ಕುಂದಾಪುರ ಸ್ಥಳೀಯ ಸಂಸ್ಥೆಯ ಅಧ್ಯಕ್ಷೆ ಗುಣರತ್ನ, ಕುಂದಾಪುರ ಸೂಪರ್ ಗ್ರೇಡ್ ವಿದ್ಯುತ್ ಗುತ್ತಿಗೆದಾರ ಕೆ.ಆರ್. ನಾಯಕ್, ಕೋಟ ಗೀತಾನಂದ್ ಫೌಂಡೇಶನ್ ಪ್ರರ್ವತಕ ಆನಂದ ಸಿ.ಕುಂದರ್, ಜಿಲ್ಲಾ ಸ್ಥಾನೀಯ ಆಯುಕ್ತ ಅಭಿನಂದನ್ ಶೆಟ್ಟಿ, ಜಿಲ್ಲಾ ಸ್ಕೌಟ್ಸ್ ಆಯುಕ್ತ ಜನಾರ್ದನ ಕೊಡವೂರು, ಜಿಲ್ಲಾ ಗೈಡ್ಸ್ ಆಯುಕ್ತೆ ಜ್ಯೋತಿ ಜೆ.ಪೈ.,ಜಿಲ್ಲಾ ಸಂಸ್ಥೆಯ ಕಾರ್ಯದರ್ಶಿ ಆನಂದ ಅಡಿಗ ಉಪಸ್ಥಿತರಿದ್ದರು.
ರಾಜ್ಯ ಸಂಸ್ಥೆಯ ಸಂಘಟಕ ಸಮನಾ ಶೇಖರ್ ನಿರೂಪಿಸಿದರು. ಕುಂಬಾಶಿ ಆನೆಗುಡ್ಡೆ ಯಿಂದ ಕಡಲ ತೀರ ಚಾರಣ ಪ್ರಾರಂಭವಾಗಿ ಕೋಡಿ ಸೀ ವಾಕ್ ಬೀಚ್ ಪರಿಸರದಲ್ಲಿ ಶಿಭಿರಾಗ್ನಿ ನಡೆಯಿತು. ಗಂಗೊಳ್ಳಿ ಕಡಲ ತೀರದಲ್ಲಿ ಚಾರಣ ನಡೆಯಿತು. ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಉಪ್ಪುಂದ ಸರ್ವ ಧರ್ಮ ಪ್ರಾರ್ಥನೆ ಮತ್ತು ಸ್ವಚ್ಚತಾ ಶಿಬಿರ ಮೂಲಕ ಶಿಬಿರ ಸಮಾರೋಪಗೊಂಡಿತು.











