ಪಂಚವರ್ಣದ 248ನೇ ಪರಿಸರಸ್ನೇಹಿ ಅಭಿಯಾನ :ಪ್ರಕೃತಿ ಸೇವೆ ಭಗವಂತನಿಗೆ ಸಲ್ಲಿಸುವ ಭಕ್ತಿಯಷ್ಟೆ ಶ್ರೇಷ್ಠ – ಧರ್ಮದರ್ಶಿ ಲೋಕೇಶ್ ಅಡಿಗ

0
478

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಪ್ರಕೃತಿ ಮಾತೆಯ ಸೇವೆ ಭಗವಂತನಿಗೆ ಸಲ್ಲಿಸುವ ಭಕ್ತಿಯಷ್ಟೆ ಶ್ರೇಷ್ಠವಾದದ್ದು ಇಂತಹ ಕಾರ್ಯ ನಡೆಸುವ ನಿಮ್ಮಂತಹ ನಿಷ್ಕಲ್ಮಶ ಮನಸ್ಸುಗಳ ಕಾರ್ಯವೈಖರಿ ಪ್ರತಿಯೊಬ್ಬರು ಮಾದರಿಯಾಗಿದೆ ಎಂದು ಕುಂಭಾಶಿಯ ಶ್ರೀಂಗೇರಿ ಶ್ರೀಮಠದ ಆಡಳಿತಕ್ಕೊಳಪಟ್ಟ ಶ್ರೀ ನಾಗಾಚಲ ಶ್ರೀ ಶಂಕರ ಪೀಠದ ಧರ್ಮದರ್ಶಿ ಲೋಕೇಶ್ ಅಡಿಗ ಅಭಿಪ್ರಾಯಪಟ್ಟರು.

ಭಾನುವಾರ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಹಂದಟ್ಟು ಮಹಿಳಾ ಬಳಗ ಕೋಟ, ಮಣೂರು ಫ್ರೆಂಡ್ಸ್ ಇವರುಗಳ ಸಹಯೋಗದೊಂದಿಗೆ 248ನೇ ಭಾನುವಾರದ ಪರಿಸರಸ್ನೇಹಿ ಅಭಿಯಾನದ ಅಂಗವಾಗಿ ಇತ್ತೀಚಿಗೆ ನಾಗಮಂಡಲ ನಡೆದ ಕುಂಭಾಶಿಯ ಶ್ರೀನಾಗಾಚಲ ಶ್ರೀ ಶಂಕರ ಪೀಠ ಇಲ್ಲಿ ಹಮ್ಮಿಕೊಂಡ ಸ್ವಚ್ಛತಾ ಅಭಿಯಾನದಲ್ಲಿ ಮಾತನಾಡಿ ಸಮಾಜದಲ್ಲಿ ನಾನಾ ತರಹದ ಚಿಂತನೆಗಳು ವ್ಯಕ್ತಿತ್ವಗಳು ಕಾಣಬಹುದು, ಆದರೆ ದೂರದೃಷ್ಠಿಯ ಚಿಂತನೆಗಳ ಮೂಲಕ ಸಮಾಜಮುಖಿ ಕಾರ್ಯಗಳು ಪ್ರಸ್ತುತ ದಿನಗಳಲ್ಲಿ ವಿಶೇಷವಾಗಿ ಗಮನ ಸೆಳೆಯುತ್ತದೆ. ಅಂತ್ಯಯೇ ನಿಮ್ಮ ಪಂಚವರ್ಣ ಪ್ರತಿ ಕೈಂಕರ್ಯವನ್ನು ಪ್ರಶಂಸಿ ಲೋಕದ ಕಲ್ಯಾಣಕ್ಕೆ ಪ್ರಧಾನಿ ನರೇಂದ್ರ ಮೋದಿಯಂತಹ ಚಿಂತನೆಗಳು ಅವಶ್ಯಕವಾಗಿದೆ ಎಂದು ತಮ್ಮ ಆಶಯವನ್ನು ವ್ಯಕ್ತಪಡಿಸಿದರು.

Click Here

ಇದೇ ವೇಳೆ ಸ್ವಚ್ಛತಾ ಕಾರ್ಯ ಹಮ್ಮಿಕೊಂಡ ಕೋಟ ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಕೆ. ಮನೋಹರ್ ಪೂಜಾರಿ, ಪಂಚವರ್ಣ ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ, ಯುವಕಮಂಡಲದ ಸಂಘಟನಾ ಕಾರ್ಯದರ್ಶಿ ಗಿರೀಶ ಆಚಾರ್ ಇವರುಗಳನ್ನು ಶಾಲು ಹೋದಿಸಿ ಪ್ರಸಾದ ವಿತರಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಪಂಚವರ್ಣ ಯುವಕ ಮಂಡಲದ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಹಂದಟ್ಟು ಮಹಿಳಾ ಬಳಗದ ಸ್ಥಾಪಾಕಾಧ್ಯಕ್ಷೆ ಪುಷ್ಭ ಕೆ ಹಂದಟ್ಟು,ಜೆಸಿಐ ಸಿನಿಯರ್ ಲಿಜನ್ ಅಧ್ಯಕ್ಷ ಕೇಶವ ಆಚಾರ್, ಪಂಚವರ್ಣ ಯುವಕ ಮಂಡಲದ ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್, ಉಪಾಧ್ಯಕ್ಷ ದಿನೇಶ್ ಆಚಾರ್ ಮತ್ತಿತರರು ಉಪಸ್ಥಿತರಿದ್ದರು.

ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು.

Click Here

LEAVE A REPLY

Please enter your comment!
Please enter your name here