ಕುಂದಾಪುರ ಮಿರರ್ ಸುದ್ದಿ…

ಕೋಟ: ಇಲ್ಲಿನ ಸಾಸ್ತಾನದ ಕಾರ್ತಿಕ್ ಎಸ್ಟೇಟ್ ಅಲ್ಲಿ ಸಾರ್ವಜನಿಕ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಆಶ್ರಯದಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮದ ಅಂಗವಾಗಿ ಸಾಲಿಗ್ರಾಮದಿಂದ ಸಾಸ್ತಾನದ ವರೆಗೆ ರಾಷ್ಟ್ರೀಯ ಹೆದ್ದಾರಿ ಮೂಲಕ ನಡೆದ ಮೆರವಣಿಗೆಯ ಉದ್ದಕ್ಕೂ ಕೋಟದ ಪಂಚವರ್ಣ ಯುವಕ ಮಂಡಲ ಪಂಚವರ್ಣ ಮಹಿಳಾ ಮಂಡಲದ ಸ್ವಚ್ಛತಾ ಸೇನಾನಿಗಳು ಮೆರವಣಿಗೆಯಲ್ಲಿ ಉಪಯೋಗಿಸಿದ ಮಜ್ಜಿಗೆ ಪ್ಯಾಕ್, ನೀರಿನ ಬಾಟಲ್ ಗಳನ್ನು ತೆರವುಗೊಳಿಸಿದರು. ಸುಮಾರು ಮೂರು ಕಿ.ಮೀ ಅಧಿಕ ವ್ಯಾಪ್ತಿ ಮೆರವಣಿಗೆ ಕ್ರಮಿಸಿಕೊಂಡಿತು. ಸ್ವಚ್ಛತಾ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ಕೂಡಾ ವ್ಯಕ್ತವಾಯಿತು ಅಲ್ಲದೆ ಅವರೊಂದಿಗೆ ಕೈಜೋಡಿಸಿಕೊಂಡರು.











