ಕುಂದಾಪುರ ಮಿರರ್ ಸುದ್ದಿ…
ಕೋಟ: ಬ್ರಹ್ಮ ಬಂಟ ಶಿವರಾಯ ಯಕ್ಷಗಾನ ಕಲಾಸಂಘ ಕೊಳ್ಕೆಬೈಲು ಗರಡಿ, ಶಿರಿಯಾರ ಇದರ ಮೊವತ್ತನೇ ವಾರ್ಷಿಕೋತ್ಸವ ಹಾಗೂ ಸಾಧಕರಿಗೆ ಅಭಿನಂದನೆ ಕಾರ್ಯಕ್ರಮ ಡಿ.5ರಂದು ಶಿರಿಯಾರ ಕೊಳ್ಕೆಬೈಲು ಗರಡಿ ಹಾಲುಹಬ್ಬದಂದು ಜರಗಿತು.
ಗರಡಿ ಮೊಕ್ತೇಸರ ರವೀಂದ್ರನಾಥ ಶೆಟ್ಟಿ ಕೊಳ್ಕೆಬೈಲು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬ್ರಹ್ಮಬಂಟ ಯಕ್ಷಗಾನ ಕಲಾಸಂಘ ಸತತ ಮೂವತ್ತು ವರ್ಷದಿಂದ ನಿರಂತರ ಸಕ್ರಿಯ ಚಟುವಟಿಕೆಯಲ್ಲಿರುವುದು ಖುಷಿಯ ವಿಚಾರವಾಗಿದೆ. ಸಂಘದ ಕಲಾವಿದರು ಹವ್ಯಾಸಿಗಳಾಗಿ ಬೆಳೆಯುವುದರ ಜತೆ ತಮ್ಮ ಮಕ್ಕಳನ್ನು ಕೂಡ ಬಾಲಕಲಾವಿದರನ್ನಾಗಿ ರೂಪಿಸಿರುವುದು ಅತ್ಯಂತ ಶ್ಲಾಘನೀಯ. ಸಂಘದ ಚಟುವಟಿಕೆ ನಿರಂತರವಾಗಿ ಮುಂದುವರಿಯಲಿ ಎಂದರು.
ಉದ್ಯಮಿ ಸಂದೀಪ ಶೆಟ್ಟಿ ಶಿರಿಯಾರ ಮೇಲ್ಮನೆ ಮಾತನಾಡಿ, ಕೊಳ್ಕೆಬೈಲು ಗರಡಿ ಹಾಗೂ ಶಿರಿಯಾರ ಮೇಲ್ಮನೆಗೂ ಐತಿಹಾಸಿಕ ಸಂಬಂಧದ ಕುರಿತು ತಿಳಿಸಿದರು.
ಸಂಘದ ಗೌರವಾಧ್ಯಕ್ಷ ಹೆರಿಯ ಪೂಜಾರಿ ಸಂಸ್ಥೆಯ ಮೊವತ್ತು ವರ್ಷದ ಹಿನ್ನಲೆ ಹಾಗೂ ಬೆಳೆದು ಬಂದ ಹಾದಿಯನ್ನು ತಿಳಿಸಿದರು.
ಸಂಸ್ಥೆಯ ಅಧ್ಯಕ್ಷ ಗೋಪಾಲಕೃಷ್ಣ ಗಾಣಿಗ (ಮಾಣಿ) ಅಧ್ಯಕ್ಷತೆ ವಹಿಸಿದ್ದರು.
ಯಕ್ಷಗುರು ಪ್ರಸಾದ್ ಕುಮಾರ್ ಮೊಗೆಬೆಟ್ಟು, ಶಿರಿಯಾರ ಗ್ರಾ.ಪಂ. ಅಧ್ಯಕ್ಷ ಸುಧೀಂದ್ರ ಶೆಟ್ಟಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಎಸೆಸೆಲ್ಸಿಯಲ್ಲಿ ಅತ್ಯಧಿಕ ಅಂಕಗಳಿಸಿದ ಸಿಂಚನಾಗೆ ಐದು ಸಾವಿರ ರೂ ನಗದು ಬಹುಮಾನದೊಂದಿಗೆ ಅಭಿನಂದಿಸಲಾಯಿತು.
ಸಾಮಾಜಿಕ ಚಿಂತಕ ಪ್ರಸಾದ್ ಶೆಟ್ಟಿ ನಡುಮನೆ ಉಪಸ್ಥಿತರಿದ್ದರು.
ಕಾರ್ಯದರ್ಶಿ ವಿನಯ್ ಪೂಜಾರಿ ಸ್ವಾಗತಿಸಿ, ವಿದ್ವಾನ್ ಅಶೋಕ್ ಸಾಹೇಬ್ರಕಟ್ಟೆ ಕಾರ್ಯಕ್ರಮ ನಿರೂಪಿಸಿ, ಭಾಸ್ಕರ ಪೂಜಾರಿ ಸಕ್ಕಟ್ಟು ವಂದಿಸಿದರು.
ಸಭಾ ಕಾರ್ಯಕ್ರಮದ ಅನಂತರ ಸಂಘದ ಸದಸ್ಯರಿಂದ ಮಾಯಾಪೂರಿ- ವೀರಮಣಿ ಯಕ್ಷಗಾನ ಜರಗಿತು.











