ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಬಾರಕೂರು ಸಮೀಪದ ಸಂಕಾಡಿ ಎಂಬ ಗ್ರಾಮಾಂತರ ಪ್ರದೇಶದ ಪುಟ್ಟ ಹಳ್ಳಿಯಲ್ಲಿ ಸ್ವಂತ ಮನೆ ಇಲ್ಲದ ನಿರ್ಗತಿಕ ಮಹಿಳೆ ಜಯಲಕ್ಸ್ಮಿ ಆವರಿಗೆ ಸ್ವಂತ ಮನೆ ನಿರ್ಮಿಸಲು ಲಯನ್ ಗಣೇಶ್ ರಾವ್ ಅವರು ಧನಸಹಾಯ ನೀಡಿದರು.
ಅಧ್ಯಕ್ಷ ಲಯನ್ ರೋವನ್ ಡಿಕೋಸ್ತಾ ಕಟ್ಟಡ ಪೂರ್ತಿಗೊಳಿಸಲು ಕ್ಲಬ್ ಮೂಲಕ ಇನ್ನಷ್ಟು ನೆರವು ನೀಡುವ ಭರವಸೆ ನೀಡಿದರು. ಲಯನ್ ಉಪ ರಾಜ್ಯಪಾಲ ಲಯನ್ ರಾಜೀವ ಕೋಟಿಯಾನ್ ಎಲ್ಲಿ ನೆರವಿನ ಅಗತ್ಯ ಇದೆಯೋ ಅಲ್ಲಿ ಹoಗಳೂರು ಲಯನ್ಸ್ ಇದೆ ಎಂದರು.
ಲಯನ್ ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾ ವಿಸಿದರು. ಈ ಸಂದರ್ಭ ಸ್ಥಳೀಯರಾದ ರತ್ನಾಕರ್ ಶೆಟ್ಟಿ, ಹಾಗೂ ಲಯನ್ಸ್ ಕ್ಲಬ್ ನ ಸದಸ್ಯರು ಉಪಸ್ಥಿತರಿದ್ದರು.











