ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕರ್ನಾಟಕ ರಾಜ್ಯ ನಾಯರಿ ಸಮಾಜ ಸುಧಾರಕ ಸಂಘ ಬ್ರಹ್ಮಾವರ ಸಂಘದ ವತಿಯಿಂದ ಸಮಾಜ ಬಾಂಧವರಿಗಾಗಿ ಸಾಂಸ್ಕೃತಿಕ ಕಲರವ – 2025 ಸ್ಪರ್ಧಾ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪ್ರಭಾಕರ ನಾಯರಿ ವಹಿಸಿದ್ದರು.
ಕಾರ್ಯಕ್ರಮವನ್ನು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಉಡುಪಿ ಅರಣ್ಯ ಇಲಾಖೆಯ ಅಧಿಕಾರಿ ವಾರಿಜಾಕ್ಷಿ ನಾಯರಿ, ಸಂಘದ ಗೌರವಾಧ್ಯಕ್ಷರಾದ ಸಿ. ಮಂಜುನಾಥ ನಾಯರಿ, ವಿ. ಶಿವಕುಮಾರ್ ನಾಯರಿ, ಸಿ. ಎಂ. ರಾಮಚಂದ್ರ ನಾಯರಿ ಕಾರ್ತಟ್ಟು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಂಘದ ಮಾಜಿ ಅಧ್ಯಕ್ಷ ಮರುಳೀಧರ ನಾಯರಿ ನಿರೂಪಿಸಿ ಪ್ರಾಸ್ತಾವನೆಗೈದರು. ಸಂಘದ ಕಾರ್ಯದರ್ಶಿ ವಿಜಯ್ ಕೆ. ನಾಯರಿ ಸ್ವಾಗತಿಸಿ, ಕೋಶಾಧಿಕಾರಿ ಜಯರಾಮ್ ನಾಯರಿ ವಂದಿಸಿದರು.
ಸಮಾರೋಪ ಸಮಾರಂಭ
ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆಯನ್ನು ಸಂಘದ ಅಧ್ಯಕ್ಷ ಪ್ರಭಾಕರ ನಾಯರಿ ನೆರವೆರಿಸಿದರು. ಸಮಾಜದ ಹಿರಿಯರಾದ. ಸದಾಶಿವ ನಾಯರಿ ಮಣಿಪಾಲ, ಸುರೇಶ್ ನಾಯರಿ ಬೆಂಗಳೂರು, ಸಂಘದ ಗೌರವ ಅಧ್ಯಕ್ಷ ಲಿಂಗಯ್ಯ ನಾಯರಿ, ಮಾಜಿ ಅಧ್ಯಕ್ಷರಾದ ಮುರುಳಿಧರ್ ನಾಯರಿ. ನಿತ್ಯಾನಂದ ನಾಯರಿ, ದಿನೇಶ್ ನಾಯರಿ, ಚಂದ್ರಶೇಖರ್ ನಾಯರಿ, ಉಪಸ್ಥಿತರಿದ್ದು ವಿಜೇತರರಿಗೆ ಬಹುಮಾನ ವಿತರಿಸಿದರು.











