ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಾರ್ಕೂರು ಹೊಸಾಳ ಗ್ರಾಮದ ಶ್ರೀಶ ಆರ್, ಹಾಗೂ ಮತ್ತೋರ್ವರಾದ ಪ್ರಶಾಂತ್ ಪೂಜಾರಿ ಮೀನುಗಾರಿಕೆ ಮಾಡುತ್ತಿರುವಾಗ ಮೃತಪಟ್ಟ ಬಗ್ಗೆ ಮೃತರ ವಾರಸುದಾರರಿಗೆ ಮೀನುಗಾರರ ಸಂಕಷ್ಟ ಪರಿಹಾರ ನಿಧಿಯ ಬಗ್ಗೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿಯವರು ಇಲಾಖೆಯೊಂದಿಗೆ ಸತತ ಸಂಪರ್ಕದಲ್ಲಿದ್ದು ಅದರಂತೆ ಶಾಸಕರ ಮುತ್ತುವರ್ಜಿಯಲಿ ತಲಾ 8 ಲಕ್ಷ ರೂಪಾಯಿ ಮೀನುಗಾರಿಕಾ ಸಂಕಷ್ಟ ಪರಿಹಾರ ನಿಧಿಯಿಂದ ಮಂಜೂರಾತಿಗೊಂಡಿದ್ದು ಶಾಸಕರ ಕಾರ್ಯವೈಖರಿ ಬಗ್ಗೆ ಫಲಾನುಭವಿಗಳು ಹರ್ಷ ವ್ಯಕ್ತಪಡಿಸಿದರು.











