ಗುಂಡ್ಮಿ ಪರಿಸರದಲ್ಲಿ ಹೀಗೊಂದು ಮನೆಯಂಗಳದಿ ಸಾಹಿತ್ಯ ಸಂಜೆ ಕಾರ್ಯಕ್ರಮ ಆಯೋಜನೆ

0
374

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಗುಂಡ್ಮಿ ಶ್ರೀಪತಿ ಮೈಯ್ಯ ಇವರ ಮನೆ ಅಂಗಳದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಬ್ರಹ್ಮಾವರ ತಾಲೂಕು ಘಟಕ ಹಾಗೂ ಸಮಗ್ರತಾ ಗುಂಡ್ಮಿ ಏರ್ಪಡಿಸಿರುವ ಸಾಹಿತ್ಯ ಸಂಜೆ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು.

ಶ್ರೀ ಭಗವತಿ ಜ್ಞಾನವಿಕಾಸ ಕೇಂದ್ರ ಗುಂಡ್ಮಿ, ಸ್ನೇಹಕೂಟ ಮಣೂರು, ವಿಪ್ರ ಮಹಿಳಾ ವಲಯ ಸಾಲಿಗ್ರಾಮ, ಮಹಿಳಾ ವೇದಿಕೆ ಸಾಲಿಗ್ರಾಮ ಈ ತಂಡದವರು ವೈವಿಧ್ಯಮಯ ಗ್ರಾಮೀಣ ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರಸ್ತುತಪಡಿಸಿದರು.

ಕುಣಿತ ಭಜನೆ, ನಾಟಕದ ಭಾಗಂಶ ನೃತ್ಯ, ಪ್ರಹಸನ, ಹಳ್ಳಿ ಹಾಡು ಅಂಗಳದ ಬೇರೆ ಬೇರೆ ವೇದಿಕೆಯಲ್ಲಿ ಪ್ರಸ್ತುತಪಡಿಸಿದರು.

Click Here

ಈ ಸಂದರ್ಭದಲ್ಲಿ ಸ್ಥಳೀಯರಾದ ವಿಷ್ಣುಮೂರ್ತಿ ಹೊಳ್ಳ, ಹಾಗೂ ಸಾಹಿತಿ ಉಪೇಂದ್ರ ಸೋಮಯಾಜಿ ಅವರು ಕೃಷಿ, ಸಾಹಿತ್ಯದಲ್ಲಿ ತೊಡಗಿಸಿಕೊಂಡ ಜಿ.ನಾಗೇಶ ಮಯ್ಯ, ಹಾಗೂ ತಮ್ಮಯ್ಯ ಮೇಸ್ತ್ರಿ ಇವರುಗಳನ್ನು ಅಭಿನಂದಿಸಿದರು.

ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷ ರಾಮಚಂದ್ರ ಐತಾಳ ಹಾಗೂ ಸಾಹಿತ್ಯ ಪರಿಷತ್‍ನ ಅಚ್ಚುತ ಪೂಜಾರಿ, ವಿಶ್ವನಾಥ ಕಾರ್ವಿ ಇವರು ಎರಡನೇ ವರ್ಷದ ಪದವಿಪೂರ್ವ ವಿದ್ಯಾರ್ಥಿಗಳಾದ 90 ಶೇಕಡಾ ಅಂಕ ಪಡೆದ ರಶ್ಮಿ ಬಟ್, ಅನನ್ಯ, ಅನಿಶಾ ಇವರಿಗೆ ಗೌರವ ಧನ ಕೊಟ್ಟು ಗೌರವಿಸಿದರು.
ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ್ ಹೆಬ್ಬಾರ್, ಸಮಗ್ರತಾ ಗುಂಡ್ಮಿಯ ಶಿವಾನಂದ ಮಯ್ಯ, ಕಾಶಿ ಈಶ್ವರಮಯ್ಯ, ಬಾಲಚಂದ್ರಮಯ್ಯ, ಉದಯಮಯ್ಯ, ಗಣೇಶ ಹೆಬ್ಬಾರ್ ಉಪಸ್ಥಿತರಿದ್ದರು.

ನಳಿನಿ ಶ್ರೀಪತಿ ಮೈಯ್ಯ ಮನೆಯಂಗಳಕ್ಕೆ ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿ ವಂದಿಸಿದರು.

Click Here

LEAVE A REPLY

Please enter your comment!
Please enter your name here