ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ : ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಕೇಂದ್ರ ಸರಕಾರ ಅನುದಾನ ಮೀಸಲಿಡುತ್ತಿದೆ. ಕೇಂದ್ರ ಸರಕಾರದ ಈ ಅನುದಾನದಿಂದ ಕೊರಗರ ಕಾಲೋನಿ ರಸ್ತೆ ಅಭಿವೃದ್ಧಿಗೆ ಪ್ರಯತ್ನಿಸಲಾಗುತ್ತಿದೆ. ಸೌಕೂರು ದೇವಸ್ಥಾನದಿಂದ ಭಟ್ರಹಾಡಿವರೆಗೆ ರಸ್ತೆ ಆಗಬೇಕು ಎಂಬುದು ಈ ಭಾಗದ ಜನರ ಒತ್ತಾಸೆ. ಒಂದೊಂದು ಊರಿಗೆ ಒಂದೊಂದು ರಸ್ತೆ ಆಗುತ್ತಾ ಹೋದರೆ ಊರು ಅಭಿವೃದ್ಧಿ ಆಗುತ್ತದೆ. ಈ ಭಾಗದ ಜನರ ಬೇಡಿಕೆಯಂತೆ ರಸ್ತೆ ನಿರ್ಮಿಸಲು ಸಾಧ್ಯವಾದಷ್ಟು ಪ್ರಯತ್ನ ನಡೆಸುವುದಾಗಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.
ಬೈಂದೂರು ವಿಧಾನಸಭಾ ಕ್ಷೇತ್ರದ ಗುಲ್ವಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೌಂಜೂರು ಕೆತ್ತಮಕ್ಕಿ ಎಸ್‍ಸಿ ಕಾಲೋನಿಗೆ ಹೋಗುವ ರಸ್ತೆಯ ಅಭಿವೃದ್ಧಿಯ ಸುಮಾರು 50 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಶನಿವಾರ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಗುಲ್ವಾಡಿ ಗ್ರಾಮ ಪಂಚಾಯತ್ ಸದಸ್ಯ ರಾಮಕೃಷ್ಣ ಹೆಬ್ಬಾರ್, ತಾಪಂ ಮಾಜಿ ಸದಸ್ಯ ಕರಣ್ ಪೂಜಾರಿ, ದಿವ್ಯಾನಂದ ಶೆಟ್ಟಿ, ರಾಮ ಅಡಿಗ, ಸ್ಥಳೀಯರು ಉಪಸ್ಥಿತರಿದ್ದರು.
ಸಂತೋಷ ಪೂಜಾರಿ ಸ್ವಾಗತಿಸಿದರು. ಸುರೇಂದ್ರ ಗುಲ್ವಾಡಿ ವಂದಿಸಿದರು.











