ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :2025 -26ನೇ ಯ ಶೖಕ್ಷಣಿಕ ವರ್ಷದ ಆರಂಭೋತ್ಸವದ ದಿನದಂದು ಸುಮಾರು 45ಕ್ಕೂ ಅಧಿಕ ಸರಕಾರಿ ಹಾಗೂ ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ಕೋಟ ಗೀತಾನಂದ ಪೌಂಡೇಶನ್ ಟ್ರಸ್ಟ್ ನಿಂದ ಉಚಿತ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.
ಸರಕಾರಿ ಪ್ರೌಢಶಾಲೆ ಕಾಳಾವರದ 135 ವಿದ್ಯಾರ್ಥಿಗಳಿಗೆ ಸುಮಾರು 2250ಕ್ಕೂ ಅಧಿಕ ಪುಸ್ತಕ ನೀಡಿದ್ದರು. ಈ ಪುಸ್ತಕಗಳನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಮುಸರತ್ ಜಹಾಂನ್, ಅಕ್ಬರ್ ಎಂ. ಅವರ ಅಧ್ಯಕ್ಷತೆಯಲ್ಲಿ ಸರ್ವ ಶಿಕ್ಷಕರು ಸೇರಿ ವಿತರಿಸಿದರು. ಗೀತಾನಂದ ಫೌಂಡೇಶನ ಪ್ರವರ್ತಕರಾದ ಆನಂದ ಸಿ ಕುಂದರವರಿಗೆ ಶಾಲಾ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಲಾಯಿತು.











