ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಅಕ್ರಮವಾಗಿ ವಾಹನದಲ್ಲಿ 11 ಜಾನುವಾರುಗಳನ್ನು ಮಾಂಸಕ್ಕಾಗಿ ಸಾಗಾಟ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಜಾನುವಾರುಗಳನ್ನು ರಕ್ಷಣೆ ಮಾಡಿ ವಾಹನಗಳನ್ನು ವಶ-ಪಡಿಸಿಕೊಂಡ ಘಟನೆ ಜೂನ್ 5ರಂದು ರಾತ್ರಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಜಂಕ್ಷನ್ನಲ್ಲಿ ನಡೆದಿದೆ.
ಬೆಳಗಿನ ಜಾವ 3.30ರ ವೇಳೆಗೆ ಕೊಲ್ಲೂರು ಕಡೆಯಿಂದ ಅಕ್ರಮವಾಗಿ ಜಾನುವಾರುಗಳನ್ನು ತುಂಬಿಸಿಕೊಂಡು ಇಚರ್ ಲಾರಿಯಲ್ಲಿ ಬರುತ್ತಿದ್ದ ಬಗ್ಗೆ ಮತ್ತು ಲಾರಿಯನ್ನು ಹಿಂಬಾಲಿಸಿಕೊಂಡು ಕಾರಿನಲ್ಲಿ ಬೈಂದೂರು ಕಡೆಗೆ ಬರುತ್ತಿದ್ದಾರೆಂದು ಮಾಹಿತಿ ಪಡೆದ ಪೊಲೀಸರು ವಾಹನ ತಪಾಸಣೆ ನಡೆಸಿದ್ದಾರೆ. ಈ ಸಂದರ್ಭ ಅತೀವೇಗವಾಗಿ ಬಂದ ಇಚರ್ ಲಾರಿಯನ್ನು ಮತ್ತು ಕಾರನ್ನು ನಿಲ್ಲಿಸಲು ಸೂಚಿಸಿದರೂ ಪರಾರಿ ಯಾಗಿದ್ದು ಪರಾರಿಯಾದ ಲಾರಿಯನ್ನು ಮತ್ತು ಕಾರನ್ನು ಬೆನ್ನತ್ತಿದ್ದಾಗ ಆರೋಪಿಗಳು ನಿಲ್ಲಿಸಿ ಪರಾರಿಯಾಗಿದ್ದಾರೆ. ಪೊಲೀಸರು ಲಾರಿಯಲ್ಲಿ ಅಕ್ರಮವಾಗಿ ಹಿಂಸಾತ್ಮಕವಾಗಿ ತುಂಬಿರುವ 9 ಗಂಡು ಎತ್ತು ಮತ್ತು 2 ಹೋರಿಯನ್ನು ರಕ್ಷಿಸಿ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.