ಕುಂದಾಪುರ :ಮಾನಸಿಕ ಆರೋಗ್ಯ ವೃದ್ಧಿಗೆ ಯೋಗ ಸಹಾಯಕ – ಡಾ.ಶಿಲ್ಪ

0
485

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಯೋಗವು ಮನುಷ್ಯನ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರಪಂಚಕ್ಕೆ ಭಾರತವು ಯೋಗವನ್ನು ಕಾಣಿಕೆಯಾಗಿ ನೀಡಿ ವಿಶ್ವ ಮಾನ್ಯತೆಯನ್ನು ಗಳಿಸಿದೆ. ಜನಸಾಮಾನ್ಯರೂ ಕೂಡ ತಮ್ಮ ದೈನಂದಿನ ಜೀವನದಲ್ಲಿ ಯೋಗವನ್ನು ಅಳವಡಿಸಿ ಕೊಳ್ಳಬೇಕಾದ ಅಗತ್ಯ ಇಂದಿನ ತುರ್ತಾಗಿದೆ ಎಂದು ಕುಂದಾಪುರ ಆಯುಷ್ ಇಲಾಖೆಯ ವೈದ್ಯರಾದ ಡಾ.ಶಿಲ್ಪ ಅವರು ಅಭಿಮತಿಸಿದರು.

Click Here

ಅವರು ಕೋಟೇಶ್ವರ ಪಬ್ಲಿಕ್ ಸ್ಕೂಲ್ ನ ಪ್ರೌಢ ಶಾಲಾ ವಿಭಾಗದಲ್ಲಿ ಎನ್. ಎಸ್. ಎಸ್. ಘಟಕದ ಆಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ವಿದ್ಯಾರ್ಥಿಗಳಿಗೆ ಯೋಗ ಪ್ರಾತ್ಯಕ್ಷಿಕೆಯ ತರಬೇತಿ ನೀಡಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪಪ್ರಾಂಶುಪಾಲ ಚಂದ್ರ ಶೇಖರ್ ಶೆಟ್ಟಿ ಅವರು ಯೋಗ ದೀಕ್ಷೆಯಲ್ಲಿ ಇಂದು ಜಗತ್ತು ಮಿಂದೇಳುತ್ತಿದ್ದು, ಭಾರತದ ಪ್ರಾಚೀನ ಯೋಗಕಲೆ ಜಗತ್ತಿನಾದ್ಯಂತ ಜನಪ್ರಿಯ ಗೊಳ್ಳುತ್ತಿದೆ. ನಾವು ಕೂಡ ಅದನ್ನು ಅಳವಡಿಸಿ ಕೊಳ್ಳಬೇಕು ಎಂದು ಪ್ರತಿಪಾದಿಸಿದರು.

ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಆರಂಭವಾದ ಸಮಾರಂಭಕ್ಕೆ ದೈಹಿಕ ಶಿಕ್ಷಣ ಶಿಕ್ಷಕ ಉದಯ ಮಡಿವಾಳ ಎಂ. ಅವರು ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಮಹಾಲಕ್ಷ್ಮಿ ನಿರೂಪಿಸಿದರು. ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿ ರಮಾನಂದ ನಾಯಕ್ ವಂದಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕ ಸಿಬ್ಬಂದಿಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಶಿಕ್ಷಕ ಮಂಜುನಾಥ್ ಹೊಳ್ಳ ಅವರು ಸಹಕರಿಸಿದರು.

Click Here

LEAVE A REPLY

Please enter your comment!
Please enter your name here