ಪಂಚವರ್ಣದಿಂದ 260ನೇ ಭಾನುವಾರ ಪರಿಸರಸ್ನೇಹಿ ಹಸಿರುಜೀವ ಅಭಿಯಾನ

0
530

Click Here

Click Here

ಪ್ರಸ್ತುತ ಕಾಂಕ್ರೀಟ್ ಕಾಡಿನಲ್ಲಿ ವಾಸ್ತವ್ಯ ಖೇಧ – ಅನಂತಯ್ಯ ನಾವಡ

ಕುಂದಾಪುರ ಮಿರರ್ ಸುದ್ದಿ…


ಕುಂದಾಪುರ: ಪರಿಸರದ ಬಗ್ಗೆ ಪ್ರಾಥಮಿಕ ಹಂತದಲ್ಲೆ ಜಾಗೃತಿ ಮೂಡಿಸಬೇಕಿದೆ ಎಂದು ಪರಿಸರಪ್ರೇಮಿ ಶಿಕ್ಷಕ ಕೋಡಿ ಅನಂತಯ್ಯ ನಾವಡ ಅಭಿಪ್ರಾಯಪಟ್ಟಿದ್ದಾರೆ.

ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಮಣೂರು ಫ್ರೆಂಡ್ಸ್, ಹಂದಟ್ಟು ಮಹಿಳಾ ಬಳಗ ಕೋಟ, ಜೆಸಿಐ ಸಿನಿಯರ್ ಲಿಜನ್ ಕೋಟ ಇವರ ಸಹಯೋಗದೊಂದಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸ ಬಡಾಕೆರೆ ಕುಂಬ್ರಿ ಕೋಟೇಶ್ವರ ಇವರ ಸಂಯೋಜನೆಯೊಂದಿಗೆ ಗೀತಾನಂದ ಫೌಂಡೇಶನ್ ಮಣೂರು, ಸಮುದ್ಯತಾ ಗ್ರೂಪ್ಸ್ ಕೋಟ, ಅನ್ನಪೂರ್ಣ ನರ್ಸರಿ ಪೇತ್ರಿ ಕೊಡ ಮಾಡಿದ ಗಿಡಗಳನ್ನು ನಡುವ 260ನೇ ಭಾನುವಾರದ ಪರಿಸರಸ್ನೇಹಿ ಹಸಿರು ಜೀವ ಅಭಿಯಾನ ಕಾರ್ಯಕ್ರಮದಲ್ಲಿ ಗಿಡ ವಿತರಿಸಿ ಮಾತನಾಡಿ ಪ್ರಸ್ತುತ ದಿನಗಳಲ್ಲಿ ನಮ್ಮ ವಾಸ್ತವ್ಯ ಕಾಂಕ್ರೀಟ್ ಕಾಡುಗಳಲ್ಲಾಗಿದೆ ಇದರಿಂದ ವಾತಾವರಣದಲ್ಲಿ ಬಾರಿ ವ್ಯತ್ಯಾಸ ಕಾಣುವಂತ್ತಾಗಿದೆ. ಅಲ್ಲದೆ ಅದನ್ನು ಸಹ ನಾವುಗಳು ಅನುಭವಿಸುತ್ತಿದ್ದೇವೆ. ಈ ಹಿನ್ನಲ್ಲೆಯಲ್ಲಿ ನಮ್ಮ ಹಿರಿಯರು ನಮಗೆ ಹಸಿರು ಹಾಗೂ ಉಸಿರು ನೀಡಿದ್ದಾರೆ. ಅದೇ ರೀತಿ ಮುಂದಿನ ಜನಾಂಗಕ್ಕೆ ನಾವುಗಳು ಈಗಿಂದಿಗಲೇ ಕಾರ್ಯಪ್ರವೃತರಾಗಿ ಹಸಿರು ಕ್ರಾಂತಿ ಸೃಷ್ಟಿಸುವಾ ಎಂದು ಪಂಚವರ್ಣದ ಹಸಿರು ಅಭಿಯಾನ ಹಾಗೂ ಪ್ಲಾಸ್ಟಿಕ್ ಮುಕ್ತ ಪರಿಸರದ ಯೋಜನೆಯನ್ನು ಕೊಂಡಾಡಿದರು.

Click Here

ಇದೇ ವೇಳೆ ಸ್ಥಳೀಯ ಗ್ರಾಮಸ್ಥರಿಗೆ, ಶಾಲಾ ಮಕ್ಕಳಿಗೆ ವಿವಿಧ ತರಹದ ತಳಿಗಳ ಗಿಡಗಳನ್ನು ವಿತರಿಸಲಾಯಿಲಾಯಿತು.

ಪಂಚವರ್ಣದ ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ ಮಕ್ಕಳಿಗೆ ಪರಿಸರ ಜಾಗೃತಿ ಮಾಹಿತಿಯನ್ನು ನೀಡಿದರು.

ಈ ಸಂದರ್ಭದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸ ಬಡಾಕೆರೆ ಕುಂಬ್ರಿ ಕೋಟೇಶ್ವರ ಇದರ ಎಸ್‍ಡಿಎಂಸಿ ಉಪಾಧ್ಯಕ್ಷ ಕೃಪಾಶ್ರೀ ಪುರಾಣಿಕ್, ಶಾಲಾ ಹಳೆ ವಿದ್ಯಾರ್ಥಿ ಸಂಘ ಅಧ್ಯಕ್ಷ ಆನಂದ್ ಕುಂದರ್, ಪ್ರೌಢ ಶಾಲಾ ಇಕೋ ಕ್ಲಬ್ ಶಿಕ್ಷಕಿ ಮಂಗಳ, ಕೃಷಿ ಇಲಾಖೆ ನಿವೃತ್ತ ಅಧಿಕಾರಿ ರುಕ್ಮ ಖಾರ್ವಿ, ಉದ್ಯಮಿ ಮುರಳಿ ಗಾಣಿಗ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಕೆ. ಮನೋಹರ್ ಪೂಜಾರಿ, ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಪಂಚವರ್ಣ ಮಹಿಳಾಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಪಂಚವರ್ಣದ ಸದಸ್ಯ ಮಹೇಶ್ ಬೆಳಗಾವಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ ಸಂಯೋಜಿಸಿ, ಕಾರ್ಯಕ್ರಮವನ್ನು ಸಂಚಾಲಕಿ ಸುಜಾತ ಬಾಯರಿ ನಿರೂಪಿಸಿದರು. ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್ ವಂದಿಸಿದರು.

Click Here

LEAVE A REPLY

Please enter your comment!
Please enter your name here