ಕುಂದಾಪುರ :ರಾಜ್ಯ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಗ್ರಾಮ ಪಂಚಾಯತ್‌ಗಳ ಎದುರು ಬಿಜೆಪಿಯಿಂದ ಧರಣಿ ಸತ್ಯಾಗ್ರಹ

0
514

Click Here

Click Here

ಕುಂದಾಪುರ ಮಿರರ್ ಸುದ್ದಿ…

Click Here

ಕುಂದಾಪುರ: ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್‌ಗಳ ಮುಂದೆ ಬಿಜೆಪಿಯಿಂದ ಜೂ.23 ಸೋಮವಾರ ಧರಣಿ ಸತ್ಯಾಗ್ರಹ ನಡೆದಿದ್ದು ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸ್ಥಳೀಯಾಡಳಿತದ ಎದುರು ಭಾಜಪಾ ಪ್ರತಿಭಟನೆ ನಡೆಸಿತು.

ಅಮಾಸೆಬೈಲು ಗ್ರಾ.ಪಂ ಎದುರು ನಡೆದ ಧರಣಿ ಉದ್ದೇಶಿಸಿ ಮಾತನಾಡಿದ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ, ರಾಜ್ಯ ಸರಕಾರದ ಕೆಲವು ಧೋರಣೆ, ನಿಯಮಗಳನ್ನು ವಿರೋಧಿಸಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಎಲ್ಲಾ ಗ್ರಾಮಪಂಚಾಯತ್, ಪುರಸಭೆ, ಪಟ್ಟಣಪಂಚಾಯತ್‌ನಲ್ಲಿ ಧರಣಿ ಮಾಡಲಾಗಿದೆ. ದ.ಕ.-ಉಡುಪಿ ಜಿಲ್ಲೆಯಲ್ಲಿ 9/11 ನಿವೇಶನಗಳ ಸಮಸ್ಯೆಗಳನ್ನು ಜನರು ಅನುಭವಿಸುತ್ತಿದ್ದು ಎಲ್ಲಾ ಅಧಿವೇಶನದಲ್ಲಿ ಧ್ವನಿಯೆತ್ತಿದರೂ ಸರಕಾರ ಗಮನಹರಿಸಿಲ್ಲ. ಮೊದಲು ಗ್ರಾ.ಪಂ.ಗೆ 25 ಸೆಂಟ್ಸ್ ತನಕ, ತಾಲೂಕು ಪಂಚಾಯತಿಗೆ 1 ಎಕರೆಗೆ 9/11 ಮಾಡುವ ಅಧಿಕಾರವಿತ್ತು. ಈಗ ಅದನ್ನು ಪ್ರಾಧೀಕಾರಕ್ಕೆ ನೀಡಿದ್ದು ಗ್ರಾಮೀಣ ಭಾಗದ ಜನರಿಗೆ ಸಮಸ್ಯೆಯಾಗುತ್ತಿದೆ. ಮಡಾಮಕ್ಕಿ, ಬೆಳ್ವೆ ಜನರು ಉಡುಪಿಗೆ ಹೋಗಬೇಕಿದೆ. ಕಳೆದ 1 ವರ್ಷದಿಂದ ಪ್ರಾಧೀಕಾರದಲ್ಲಿ ಸಿಂಗಲ್ ಲೇಔಟ್ ಅನುಮೋದನೆಯಾಗದೆ ಮನೆ ನಿರ್ಮಾಣಕ್ಕೆ ಸಮಸ್ಯೆಯಾಗುತ್ತಿದೆ. ಹಾಗೆಯೇ ಹಿರಿಯ ನಾಗರಿಕರ ಪಿಂಚಣಿ ಸೌಲಭ್ಯ ನಿಲ್ಲಿಸುವ ಹುನ್ನಾರವನ್ನು ಸರಕಾರ ಮಾಡುತ್ತಿದೆ. ಬಸವ ವಸತಿ, ಆಶ್ರಯ ಮನೆಗಳ ಬಿಡುಗಡೆ ಈ ಸರಕಾರದಿಂದ ಆಗಿಲ್ಲ. ಹಿಂದೆ ಮಂಜೂರಾದ ಮನೆಗಳಿಗೆ ಹಣ ಬಿಡುಗಡೆಯಾಗಿಲ್ಲ. ಅಕ್ರಮ- ಸಕ್ರಮ ಅರ್ಜಿಗಳನ್ನು ಸಮಿತಿ ಮುಂದೆ ತಾರದೆ ಅಧಿಕಾರಿಗಳೇ ತಿರಸ್ಕರಿಸುತ್ತಿದ್ದು ಅರ್ಜಿಗಳನ್ನು ಸಮಿತಿ ಮುಂದಿಡಬೇಕು. ವಿದ್ಯುತ್‌ ದರ ಏರಿಕೆಯಿಂದ ಸಾಮಾನ್ಯರು ಹೈರಾಣಾಗಿದ್ದಾರೆ. ಅಭಿವೃದ್ಧಿಗೆ ಅನುದಾನಗಳು ಸಿಗುತ್ತಿಲ್ಲ. ಇದೆಲ್ಲಾ ಸಮಸ್ಯೆಗಳನ್ನು ಶೀಘ್ರ ರಾಜ್ಯದ ಸರಕಾರ ಬಗೆಹರಿಸದಿದ್ದಲ್ಲಿ ಅಧಿವೇಶನದಲ್ಲಿ ಹೋರಾಟ ಮಾಡಲಾಗುತ್ತದೆ ಎಂದರು.

ಅಮಾಸೆಬೈಲು ಗ್ರಾಮ ಪಂಚಾಯತ್ ಎದುರು ನಡೆದ ಪ್ರತಿಭಟನೆಯಲ್ಲಿ ಗ್ರಾ.ಪಂ ಅಧ್ಯಕ್ಷೆ ಮಲ್ಲಿಕಾ ಕುಲಾಲ್, ಉಪಾಧಕ್ಷ ಶಂಕರ ಪೂಜಾರಿ ಸಹಿತ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

ವಿವಿದೆಡೆ ಪ್ರತಿಭಟನೆ:ಕುಂದಾಪುರ ವಿಧಾನಸಭಾ ಕ್ಷೇತ್ರದ 37 ಗ್ರಾ.ಪಂ, 1 ಪುರಸಭೆ, 1 ಪ.ಪಂ. ಎದುರು ಧರಣಿ ಸತ್ಯಾಗ್ರಹ‌ ನಡೆದಿದ್ದು ಗೋಪಾಡಿ ಗ್ರಾ.ಪಂ ಎದುರು ಕುಂದಾಪುರ ಬಿಜೆಪಿ ಮಂಡಲ ಅಧ್ಯಕ್ಷ, ಗ್ರಾ.ಪಂ ಅಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ ನೇತೃತ್ವದಲ್ಲಿ ಧರಣಿ ನಡೆದಿದ್ದು ಉಪಾಧ್ಯಕ್ಷೆ ಶಾಂತಾ ಎಸ್.ಎಂ.,‌ ಸದಸ್ಯರಾದ ನಾಗೇಶ್ ಶೆಟ್ಟಿಗಾರ್, ಸರೋಜಾ, ನೇತ್ರಾವತಿ, ಸಾವಿತ್ರಿ, ಪ್ರಭಾಕರ್, ಗಿರೀಶ್ ಉಪಾಧ್ಯ, ಜಿ.ಪಂ ಮಾಜಿ ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ, ಕ್ಷೇತ್ರದ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಸುರೇಂದ್ರ ಕಾಂಚನ್ ಮೊದಲಾದವರಿದ್ದರು.

ಬೀಜಾಡಿ ಗ್ರಾ.ಪಂ‌. ಎದುರಿನ ಪ್ರತಿಭಟನೆಯಲ್ಲಿ ಗ್ರಾ.ಪಂ ಅಧ್ಯಕ್ಷ ಪ್ರಕಾಶ್ ಪೂಜಾರಿ, ಉಪಾಧ್ಯಕ್ಷೆ ರಜಿನಿ ಜ್ಯೂಲಿ, ಸದಸ್ಯರಾದ ವಾದಿರಾಜ ಹೆಬ್ಬಾರ್, ಚಂದ್ರ ಮೊಗವೀರ, ಮಂಜುನಾಥ ಕುಂದರ್, ಸುಮತಿ ನಾಗರಾಜ್, ವಿಶ್ವನಾಥ ಮೊಗವೀರ, ಪ್ರಸನ್ನ ದೇವಾಡಿಗ, ಪೂರ್ಣಿಮಾ ಇದ್ದರು.

ಕೋಟೇಶ್ವರ ಗ್ರಾ.ಪಂ ಎದುರು ನಡೆದ ಪ್ರತಿಭಟನೆಯಲ್ಲಿ ಗ್ರಾ‌ಪಂ ಅಧ್ಯಕ್ಷೆ ರಾಗಿಣಿ ದೇವಾಡಿಗ, ಉಪಾಧ್ಯಕ್ಷ ಆಶಾ ವಿ., ಮಾಜಿ ಅಧ್ಯಕ್ಷ ಕೃಷ್ಣ ಗೊಲ್ಲ, ಸದಸ್ಯರಾದ ಉದಯ್ ನಾಯಕ್, ಚಂದ್ರಮೋಹನ್ ದೇವಾಡಿಗ, ವಿವೇಕ್ ದೇವಾಡಿಗ, ನಾಗರಾಜ್ ಎಂ. ಕಾಂಚನ್, ರಾಜು ಪೂಜಾರಿ, ರಾಜು ಮರಕಾಲ, ಸುರೇಶ್ ದೇವಾಡಿಗ, ಲತಾ ಶೇಖರ್ ಮೊಗವೀರ, ಆಶಾ ಜಿ. ಕುಂದರ್, ಶೋಭಾ ಶೆಟ್ಟಿ, ಸುಶೀಲಾ ಪೂಜಾರಿ, ಪುಟ್ಟಿ, ವಿಶಲಾಕ್ಷಿ ಶೆಟ್ಟಿಗಾರ್, ಜಯಲಕ್ಷ್ಮೀ ಆಚಾರ್, ಮುಖಂಡರಾದ ರಾಜೇಶ್ ಉಡುಪ, ಶೇಖರ ಮೊಗವೀರ, ಭಾಸ್ಕರ್ ಕುಂಬ್ರಿ ಮೊದಲಾದವರಿದ್ದರು.

Click Here

LEAVE A REPLY

Please enter your comment!
Please enter your name here