ಬೈಂದೂರು :ಜೂ.27 ರಿಂದ 29ತನಕ ಹಲಸು ಹಾಗೂ ಕೃಷಿ ಮೇಳ

0
546

Click Here

Click Here

ಕುಂದಾಪುರ ಮಿರರ್ ಸುದ್ದಿ.

ಬೈಂದೂರು: ಬೈಂದೂರಿನ ಇತಿಹಾಸದಲ್ಲಿ ಪ್ರಥಮ ಭಾರಿಗೆ ಮೂರು ದಿನಗಳ ಹಲಸು ಮತ್ತು ಕೃಷಿ ಮೇಳ ಜೂನ್ 27ರ ಶುಕ್ರವಾರದಿಂದ 29ರ ಭಾನುವಾರದ ತನಕ ಇಲ್ಲಿನ ಯಡ್ತರೆ ಬಂಟರ ಭವನದಲ್ಲಿ ಜರುಗಲಿದೆ. ಬೈಂದೂರು ಉತ್ಸವ ಸಮಿತಿ ಹಾಗೂ ರೈತೋತ್ಥಾನ ಬಳಗ ನೇತೃತ್ವದಲ್ಲಿ, ಸಮಷ್ಟಿ ಪ್ರತಿಷ್ಠಾನ ರಿ. ಹಾಗೂ ರೋಟರಿ ಕ್ಲಬ್ ಬೈಂದೂರು ಸಹಯೋಗದೊಂದಿಗೆ ನಡೆಯುವ ಕಾರ್ಯಕ್ರಮದಲ್ಲಿ ವಿವಿಧ ತಳಿಯ ಹಲಸು ಮತ್ತು ಮಾವಿನ ಹಣ್ಣಿನ ಪ್ರದರ್ಶನ ಹಾಗೂ ಮಾರಾಟ, ರುಚಿಕರ ಹಲಸಿನ ಉಪ ಉತ್ಪನ್ನಗಳು ಸವಿ ಉಣಬಡಿಸುವ ಜೊತೆಗೆ ಸಾಧಕ ಕೃಷಿಕರಿಗೆ ಸನ್ಮಾನ ಮೊದಲಾದ ಕಾರ್ಯಕ್ರಮಗಳು ಜರುಗಲಿದೆ.

Click Here

ಕಾರ್ಯಕ್ರಮಕ್ಕೆ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಚಾಲನೆ ನೀಡಲಿದ್ದು, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಸೇರಿದಂತೆ ವಿವಿಧ ಅತಿಥಿ ಗಣ್ಯರು ಉಪಸ್ಥಿತರಿರಲಿದ್ದಾರೆ. ಈ ವೇಳೆ ಸ್ಥಳೀಯ ಸಾಧಕ ಕೃಷಿಕರಿಗೆ ಸನ್ಮಾನ ನಡೆಯಲಿದೆ. ಆಧುನಿಕ ಕೃಷಿ ಮಾಹಿತಿ ಕಾರ್ಯಾಗಾರಗಳು ನಡೆಯಲಿದೆ. ಮೂರು ದಿನಗಳು ಕೂಡ ವಿವಿಧ ತಳಿಯ ಹಲಸು ಮತ್ತು ಮಾವಿನ ಹಣ್ಣಿನ ಪ್ರದರ್ಶನ ಇರಲಿದ್ದು, ವಿಶೇಷವಾಗಿ ಮೇಳವನ್ನು ಆಯೋಜಿಸಲಾಗಿದೆ. ಹತ್ತಾರು ಹಲಸು ಮತ್ತು ಮಾವಿನ ಉಪ ಉತ್ಪನ್ನಗಳ ಮಳಿಗೆ, ಹಣ್ಣಿನ ಖಾದ್ಯಗಳ ಮಳಿಗೆ ಹಾಗೂ ಇತರ ಆಹಾರ ಮಳಿಗೆ, ವಿವಿಧ ತಳಿಯ ಹಲಸು ಮತ್ತು ಮಾವಿನ ಗಿಡಗಳು ಮತ್ತು ಇತರ ಹಣ್ಣು, ಹೂವಿನ ಗಿಡಗಳ ಪ್ರದರ್ಶನ ಮಾರಾಟ ಮಳಿಗೆ, ತರಕಾರಿ ಬೀಜದ ಮಳಿಗೆ, ಕೃಷಿ ಯಂತ್ರೋಪಕಾರಣ ಮತ್ತು ಗೊಬ್ಬರ ಮಾರಾಟ ಮಳಿಗೆ, ಕರಕುಶಲ ಹಾಗೂ ನೆಯ್ಗೆ ಬಟ್ಟೆ ಮಳಿಗೆ, ಇತರ ಗೃಹಪಯೋಗಿ ವಸ್ತುಗಳ ಮಳಿಗೆ ಪ್ರದರ್ಶನದಲ್ಲಿ ಇರಲಿದೆ ಎಂದು ಸಂಘಟಕ ಶ್ರೀಧರ ಮರವಂತೆ (9482189216) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Click Here

LEAVE A REPLY

Please enter your comment!
Please enter your name here