ಕುಂದಾಪುರ : ಕಲಾಕದಂಬ ಕಾಳಿಂಗ ನಾವಡ ಪ್ರಶಸ್ತಿಗೆ ಹಾಲಾಡಿ ರಾಘವೇಂದ್ರ ಮಯ್ಯ ಆಯ್ಕೆ

0
82

Click Here

Click Here

ಕುಂದಾಪುರ ಮಿರರ್ ಸುದ್ದಿ…

Click Here

ಕೋಟ: ಯಕ್ಷಗಾನ, ನಾಟಕವಲ್ಲದೆ ಹಲವಾರು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಬೆಂಗಳೂರಿನ ಕಲಾಕದಂಬ ಆರ್ಟ್ ಸೆಂಟರ್ ಸಂಸ್ಥೆಯು ಯಕ್ಷಗಾನದ ಕಂಚಿನ ಕಂಠದ ಭಾಗವತರೆಂದೇ ಪ್ರಸಿದ್ಧರಾದ ಕರಾವಳಿಯ ಗಾನಕೋಗಿಲೆ ಖ್ಯಾತಿಯ ಭಾಗವತ ಕಾಳಿಂಗ ನಾವಡರ ನೆನಪಿನಲ್ಲಿ ಪ್ರತಿ ವರ್ಷ ಯಕ್ಷಗಾನ ಕ್ಷೇತ್ರದಲ್ಲಿನ ಪ್ರತಿಭಾನ್ವಿತರೋರ್ವರಿಗೆ ಕಾಳಿಂಗ ನಾವಡ ಪ್ರಶಸ್ತಿಯನ್ನು ನೀಡುತಿದ್ದು, ಈ ಹಿನ್ನಲ್ಲೆಯಲ್ಲಿ 16ನೇ ವರ್ಷದ 2025ರ ಸಾಲಿನ ಕಾಳಿಂಗ ನಾವಡ ಪ್ರಶಸ್ತಿಯನ್ನು ಸತತ 42 ವರ್ಷಗಳಿಂದ ಯಕ್ಷಗಾನದ ಭಾಗವತರಾಗಿ ತಮ್ಮ ಸೇವೆ ಸಲ್ಲಿಸುತ್ತಿರುವ ಹಾಲಾಡಿ ರಾಘವೇಂದ್ರ ಮಯ್ಯರಿಗೆ ಇದೇ ಬರುವ ಅಕ್ಟೋಬರ್ ತಿಂಗಳ 12 ರಂದು ಸಂಜೆ ಬೆಂಗಳೂರಿನ ಬನಶಂಕರಿ 3ನೇ ವಿಭಾಗದಲ್ಲಿನ ಚೆನ್ನಮ್ಮನ ಕೆರೆ ಅಚ್ಚುಕಟ್ಟುಲ್ಲಿರುವ ಪರಂಪರ ಆಡಿಟೋರಿಯಮ್‍ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುತ್ತದೆ, ಅಲ್ಲದೆ ಇಪ್ಪತ್ತೈದು ಸಾವಿರ ನಗದು, ಬೆಳ್ಳಿ ಫಲಕ, ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆಯನ್ನು ಪ್ರಶಸ್ತಿ ನೀಡಲಾಗುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.

Click Here

LEAVE A REPLY

Please enter your comment!
Please enter your name here