ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸೌಕೂರು ಇದರ ನೂತನ ಶಾಲಾ ಅಭಿವೃದ್ಧಿ ಸಮಿತಿ ರಚನೆ ಸೌಕೂರು ಶಾಲೆಯಲ್ಲಿ ನಡೆಯಿತು.
ಶಾಲಾ ಅಭಿವೃದ್ಧಿ ಸಮಿತಿಯ ನೂತನ ಅಧ್ಯಕ್ಷರಾಗಿ ರವೀಂದ್ರ ದೇವಾಡಿಗ ಮೇಲ್ಮನೆ ಸೌಕೂರು ಇವರು ಮುಂದಿನ ಮೂರು ವರ್ಷಕ್ಕೆ ಅವಿರೋಧ ಆಯ್ಕೆಯಾಗಿರುತ್ತಾರೆ. ಉಪಾಧ್ಯಕ್ಷರಾಗಿ ಕೀರ್ತಿ ದೇವಾಡಿಗ ಇವರು ಪುನರಾಯ್ಕೆ ಆಗಿದ್ದು ಹಾಗೂ ಸಮಿತಿಯ ತಂಡ ರಚಿಸಲಾಯಿತು. ಈ ಕಾರ್ಯಕ್ರಮದಲ್ಲಿ ಗುಲ್ವಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಸುರೇಂದ್ರ ಶೆಟ್ಟಿ ಗುಲ್ವಾಡಿ, ನಿರ್ಗಮಿತ ಅಧ್ಯಕ್ಷರಾದ ಭಾಸ್ಕರ್ ಭಂಡಾರಿ, ಚಿಕ್ಪೇಟೆ ಶಾಲೆಯ ಮುಖ್ಯೋಪಾಧ್ಯಾಯರಾದ ನಮೃತ ಭಟ್ ಶಿಕ್ಷಕಿ ಮಂಜುಳಾ ಪೂಜಾರಿ ಹಾಗೂ ಮಕ್ಕಳ ಪೋಷಕರು ಪಾಲ್ಗೊಂಡಿದ್ದರು.











