ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ : ಹಂಗಳೂರು ಲಯನ್ಸ್ ಕ್ಲಬ್‍ನ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭವು ಆರ್.ಎನ್.ಶೆಟ್ಟಿ. ಕಲ್ಯಾಣಭವನದ ಎಸ್.ಎಸ್. ಹೆಗ್ಡೆ ಸಭಾ ಭವನದಲ್ಲಿ ನಡೆಯಿತು.
ಲಯನ್ಸ್ ಕ್ಲಬ್ ಹಂಗಳೂರು ಇದರ ನೂತನ ಅಧ್ಯಕ್ಷರಾಗಿ ಸಂದೀಪ್ ಶೆಟ್ಟಿ, ಕಾರ್ಯದರ್ಶಿಯಾಗಿ ವಿಲ್ಫ್ರೇಡ್ ಮೆನೆಜಸ್, ಖಜಾಂಚಿಯಾಗಿ ನಿತೇಶ್ ಡಿ’ಕೋಸ್ತ ಹಾಗೂ ಇತರ ಸದಸ್ಯರು ಅಧಿಕಾರ ಸ್ವೀಕರಿಸಿದರು.
ಪದಪ್ರದಾನವನ್ನು ರೋಟರಿ ನಿಕಟಪೂರ್ವ ಜಿಲ್ಲಾ ಗವರ್ನರ್ 317ಸಿ ಲಯನ್ ಕೆ. ಸುರೇಶ್ ಅವರು ನೆರವೇರಿಸಿ ಮಾತನಾಡಿ, ಹಂಗಳೂರು ಲಯನ್ಸ್ ಕ್ಲಬ್ ಕುಂದಾಪುರದ ಭಾಗದಲ್ಲಿ ಮಾನವೀಯ ಮೌಲ್ಯಗಳನ್ನ ಎತ್ತಿ ಹಿಡಿಯುವ ನಿರಂತರ ಕೆಲಸ ಮಾಡಿಕೊಂಡು ಬಂದಿದ್ದು, ಕಳೆದ 28 ವರ್ಷಗಳಲ್ಲಿ ಲಯನ್ಸ್ ಕ್ಲಬ್ ಹಂಗಳೂರು ರೋವನ್ ಡಿ’ಕೋಸ್ತ್ ಅವರ ಅಧ್ಯಕ್ಷತೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರಥಮ ಸ್ಥಾನ ತನ್ನದಾಗಿಸಿಕೊಂಡಿದೆ. ಇದು ಲಯನ್ಸ್ ಸದಸ್ಯರಿಗೆ ಹೆಮ್ಮೆಯ ವಿಷಯ ಎಂದರು. ದೃಢ ಸಂಕಲ್ಪವಿದ್ದರೆ, ಯಾವುದೇ ಕಠಿಣ ಕಾರ್ಯವಾದರೂ ಸಾಧಿಸಲು ಸಾಧ್ಯ. ರೋವನ್ ಡಿ’ಕೋಸ್ ರವರ ಉತ್ತಮ ನಾಯಕತ್ವವನ್ನು ಶ್ಲಾಘನಾರ್ಹವಾದುದು. ಮುಂದಿನ ದಿನಗಳಲ್ಲಿ ಸಮಾಜ ಸೇವೆ ಮಾಡುವ ಮೂಲಕ ಲಯನ್ಸ್ ಕ್ಲಬ್ ಹಂಗಳೂರು ಪ್ರಥಮ ಸ್ಥಾನ ಪಡೆಯಲಿ ಎಂದರು.
ಅಧಿಕಾರ ಸ್ವೀಕರಿಸಿದ ನೂತನ ಅಧ್ಯಕ್ಷ ಸಂದೀಪ್ ಶೆಟ್ಟಿ ಮಾತನಾಡಿ, ಮುಂದಿನ ದಿನಗಳಲ್ಲಿ ಕೈಗೊಳ್ಳುವ ಎಲ್ಲಾ ಸಮಾಜಮುಖಿ ಕಾರ್ಯಗಳಿಗೆ ಸದಸ್ಯರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಕಳೆದ 28 ವರ್ಷಗಳಿಂದ ಲಯನ್ಸ್ ಕ್ಲಬ್ ಹಂಗಳೂರಿನಲ್ಲಿ ಸೇವೆ ಸಲ್ಲಿಸಿದ ಸ್ಥಾಪಕಧ್ಯಕ್ಷರಾಗಿರುವ ವಿಲ್ಫ್ರೇಡ್ ನತಾಲಿಯನ್ ಡಿ’ಸೋಜಾ ದಂಪತಿ ಇವರನ್ನು ಬೀಳ್ಕೋಡಲಾಯಿತು.
ಈ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಮತ್ತು ದೈಹಿಕ ಶಿಕ್ಷಣದ ಶಿಕ್ಷಕರಾದ ಉದಯ ಪೂಜಾರಿಯವನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ರಾಜೀವ್ ಕೋಟ್ಯಾನ್, ಅರುಣ್ ಕುಮಾರ್ ಶೆಟ್ಟಿ, ರಜತ್ ಹೆಗ್ಡೆ, ವಸಂತ ರಾಜ್, ಮ್ಯಾಥ್ಯೂ ಜೋಸೆಫ್, ಪುನೀತ್ ಶೆಟ್ಟಿ ಉಪಸ್ಥಿತರಿದ್ದರು.
ರೋವನ್ ಡಿ’ಕೋಸ್ತ್ ಸ್ವಾಗತಿಸಿದರು, ಬಾಲಕೃಷ್ಣ ಶೆಟ್ಟಿ ಪ್ರಾರ್ಥನೆಗೈದರು, ಗ್ರೇಟ್ಟಾ ಡಿ’ಕೋಸ್ತ್ ವಾರ್ಷಿಕ ವರದಿ ವಾಚಿಸಿದರು. ನಿತೇಶ್ ಡಿ’ಕೋಸ್ತ್ ವಂದಿಸಿದರು. ಅಶ್ವಿನಿ ಸಂದೀಪ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.











