ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕುಂದಾಪುರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಆಗಮಿಸುವ ಪ್ರಯಾಣಿಕರಿಗೆ ಸ್ವಾಗತ ಕೋರಿ ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ವತಿಯಿಂದ ಕೊಡುಗೆಯಾಗಿ ನೀಡಲಾದ ಫಲಕವನ್ನು ಕರ್ಕಾಟಕ ಅಮಾವಾಸ್ಯೆ ಮತ್ತು ವಿಶ್ವ ಕುಂದಾಪ್ರ ದಿನಾಚರಣೆಯಂದು ಅನಾವರಣ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ಟ್ರಸ್ಟಿಗಳಾದ ಜೋಯ್ ಜೆ ಕರ್ವೆಲ್ಲೋ, ರಾಜೇಶ್ ಕಾವೇರಿ, ಕೆ.ಆರ್. ನಾಯ್ಕ್, ಪ್ರವೀಣ್ ಕುಮಾರ್ ಟಿ, ರಾಮಚಂದ್ರ ಬಿ.ಎನ್, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಸಂಚಾರ ನಿಯಂತ್ರಣಾಧಿಕಾರಿ ಶ್ರೀ ವೆಂಕಟರಮಣ, ಚಾಲಕರಾದ ಶ್ರೀ ಬಸಯ್ಯ, ಸ್ಥಳೀಯರಾದ ನಾಗರಾಜ ಮತ್ತು ಅನಿಲ್ ಉಪ್ಪೂರು, ಉಪಸ್ಥಿತರಿದ್ದರು.











