ಮಧುಕರ ಶೆಟ್ಟಿಯವರ ಜೀವನವೇ ಯುವ ಜನಾಂಗಕ್ಕೆ ಸ್ಪೂರ್ತಿಯ ಅಧ್ಯಾಯ- ಡಾ.ಪ್ರಶಾಂತ್ ಶೆಟ್ಟಿ

0
1304

Click Here

Click Here

ಗೃಹರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಡಾ.ಪ್ರಶಾಂತ್ ಶೆಟ್ಟಿ ಅವರಿಗೆ ಡಾ.ಮಧುಕರ ಶೆಟ್ಟಿ ಸಂಸ್ಮರಣಾ ಪ್ರಶಸ್ತಿ ಪ್ರದಾನ

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ:
ವೃತ್ತಿಪರ, ನಿಷ್ಠಾವಂತ, ಕರ್ತವ್ಯ ದಕ್ಷತೆಯಿಂದ ಇಂದಿಗೂ ಜೀವಂತವಾಗಿರುವ, ದಕ್ಷ, ಪ್ರಾಮಾಣಿಕ ಐಪಿಎಸ್ ಅಧಿಕಾರಿ ಡಾ.ಮಧುಕರ ಶೆಟ್ಟಿ ಅವರ ಜೀವನವೇ ಯುವ ಸಮುದಾಯಕ್ಕೆ ಒಂದು ಅಧ್ಯಯವಿದ್ದಂತೆ. ಅವರ ಹೆಸರಲ್ಲಿ ಪ್ರಶಸ್ತಿ, ಗೌರವ ಸ್ವೀಕರಿಸುತ್ತಿರುವುದು ಹೆಮ್ಮೆ ಎಂದು ಗೃಹರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಡಾ| ಪ್ರಶಾಂತ್ ಶೆಟ್ಟಿ ಹೇಳಿದರು.
Video:

Click Here


ಅವರು ರವಿವಾರ ಕುಂದಾಪುರದ ಆರ್.ಎನ್. ಶೆಟ್ಟಿ ಸಭಾವನದಲ್ಲಿ ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ನಡೆದ ಸಂಸ್ಮರಣಾ ಪ್ರಶಸ್ತಿ ಪ್ರದಾನ, ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಡಾ| ಮಧುಕರ ಶೆಟ್ಟಿ ಸಂಸ್ಮರಣಾ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಉಡುಪಿ ಸಾಯಿರಾಧ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಮನೋಹರ ಶೆಟ್ಟಿ ಮಾತನಾಡಿ, ಕಳೆದ 8-9 ವರ್ಷಗಳಲ್ಲಿ ಈವರೆಗೆ ಸುಮಾರು 3 ಸಾವಿರಕ್ಕೂ ಅಧಿಕ ಮಂದಿ ವಿದ್ಯಾರ್ಥಿ ವೇತನವನ್ನು ಪಡೆದುಕೊಂಡಿದ್ದಾರೆ. ಅವರಲ್ಲಿ ಅನೇಕ ಮಂದಿ ಉನ್ನತ ಸ್ಥಾನಕ್ಕೇರಿದ್ದಾರೆ. ನೀವೆಲ್ಲ ಪಡೆದುಕೊಂಡದ್ದರಲ್ಲಿ ಅಥವಾ ದುಡಿಮೆಯಲ್ಲಿ ಒಂದಷ್ಟು ಭಾಗವನ್ನು ಈ ಸಂಘಕ್ಕೆ ನೀಡಿದರೆ, ಇನ್ನಷ್ಟು ವಿದ್ಯಾರ್ಥಿಗಳ ಬದುಕು ಬೆಳಗಬಹುದು ಎಂದ ಅವರು, ಮುಂದಿನ ದಿನಗಳಲ್ಲಿ ಐಪಿಎಸ್, ಐಆರ್‍ಎಸ್ ಹಾಗೂ ಐಎಎಸ್ ಪರೀಕ್ಷೆ ಬರೆಯಲು ಮುಂದಾಗುವವರಿಗೆ ನಮ್ಮ ಸಂಸ್ಥೆಯಿಂದ 5 ಲಕ್ಷ ರೂ. ನೆರವು ನೀಡುವುದಾಗಿ ಘೋಷಿಸಿದರು.

ಮಂಗಳೂರಿನ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕೋಶಾಧಿಕಾರಿ ಉಳ್ತೂರು ಮೋಹನದಾಸ ಶೆಟ್ಟಿ ಉದ್ಘಾಟಿಸಿ, ಮಾತನಾಡಿದರು. ಕುಂದಾಪುರ ತಾ| ಯುವ ಬಂಟರ ಸಂಘದ ಅಧ್ಯಕ್ಷ ಸುನಿಲ್ ಕುಮಾರ್ ಶೆಟ್ಟಿ ಹೇರಿಕುದ್ರು ಅಧ್ಯಕ್ಷತೆ ವಹಿಸಿದ್ದರು. ಯುವ ಚೈತನ್ಯ ಸಂಚಿಕೆಯನ್ನು ಬೆಂಗಳೂರಿನ ಪ್ರೀಮಿಯರ್ ಸಂಜೀವಿನಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ| ಜಗದೀಶ್ ಶೆಟ್ಟಿ ಅನಾವರಣಗೊಳಿಸಿದರು.

ದಿ| ಎಂ. ಗೋಪಾಲಕೃಷ್ಣ ಶೆಟ್ಟಿ ಕಂದಾವರ ಕೆಳಾಮನೆ ಸಂಸ್ಮರಣಾ ಪ್ರಗತಿಪರ ಕೃಷಿ ಪ್ರಶಸ್ತಿಯನ್ನು ಪ್ರಗತಿಪರ ಸಾವಯವ ಕೃಷಿಕ ಹೆರಿಯಣ್ಣ ಶೆಟ್ಟಿ ಯಡಾಡಿ-ಮತ್ಯಾಡಿ ಅವರಿಗೆ ಪ್ರದಾನ ಮಾಡಲಾಯಿತು.

300 ಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಯಿತು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವೈದ್ಯಕೀಯ -ಡಾ| ರಜತ್ ರತ್ನಾಕರ ಶೆಟ್ಟಿ, ಡಾ| ಆಶಿತ್ ರತ್ನಾಕರ ಶೆಟ್ಟಿ ಹೇರಿಕುದ್ರು, ಡಾ| ರಚನಾ ಸುರೇಶ ಶೆಟ್ಟಿ ಮಂಡಳ್ಳಿ, ಪರಿಸರವಾದಿ ಎಚ್. ಶಶಿಧರ ಶೆಟ್ಟಿ, ಸಾಹಿತ್ಯ – ರಕ್ಷಿತ್ ಶೆಟ್ಟಿ ಕದಳಿ, ಯಕ್ಷಗಾನ – ರಂಜಿತ್ ಕುಮಾರ್ ಶೆಟ್ಟಿ ವಕ್ವಾಡಿ, ಎಸೆಸೆಲ್ಸಿ – ಪಿಯುಸಿಯಲ್ಲಿ ಬಂಟ ಸಮುದಾಯಕ್ಕೆ ಕೀರ್ತಿ ತಂದ ಅನುಶ್ರೀ ಬಾಬು ಶೆಟ್ಟಿ ಅಸೋಡು, ಅನುಶ್ರೀ ಭುಜಂಗ ಶೆಟ್ಟಿ ಸಿದ್ದಾಪುರ, ರಾಜೇಶ್ವರಿ ರತ್ನಾಕರ ಶೆಟ್ಟಿ ಕಾಲ್ತೋಡು, ಸೀಮಾ ಶೆಟ್ಟಿ ಕೆರಾಡಿ, ಸಿಎ ಸಾಧಕರಾದ ಕೊಡ್ಲಾಡಿಯ ಭರತ್ ಶೆಟ್ಟಿ, ಆದರ್ಶ್ ಎಂ. ಶೆಟ್ಟಿ, ಚಲನ್‍ಚಂದ್ರ ಶೆಟ್ಟಿ ಮಣಿಗೇರಿ, ವಿಲಾಸ್ ಶೆಟ್ಟಿ ಬಗ್ವಾಡಿ, ನರೇಶ್ ಶೆಟ್ಟಿ ಹುಯ್ಯಾರು, ಸಂಕೇತ್ ಹೆಗ್ಡೆ ಸಳ್ವಾಡಿ, ವಾಲಿಬಾಲ್ ಪಟು ಕೌಶಿಕ್ ಕೆ. ಶೆಟ್ಟಿ ಕಟ್ಕೇರಿ ಅವರನ್ನು ಸಮ್ಮಾನಿಸಲಾಯಿತು.

ಬಂಟರ ಸಂಘದ ತಾ| ಸಂಚಾಲಕ ಆವರ್ಸೆ ಸುಧಾಕರ ಶೆಟ್ಟಿ, ಉದ್ಯಮಿಗಳಾದ ಆನಂದರಾಮ ಶೆಟ್ಟಿ ಬೆಂಗಳೂರು, ಅಮರನಾಥ ಶೆಟ್ಟಿ ಹೆಗ್ಗುಂಜೆ, ರಾಜೇಂದ್ರ ವಿ. ಶೆಟ್ಟಿ, ಜಗದೀಶ್ ಶೆಟ್ಟಿ ಕುದ್ರುಕೋಡು, ಸುರೇಂದ್ರ ನಾರಾಯಣ ಶೆಟ್ಟಿ ಕಾನ್ಕಿ, ಸಂಜಯ ಗಾಂ„ ಆಸ್ಪತ್ರೆಯ ಡಾ| ಪುನೀತ್ ಶೆಟ್ಟಿ, ಕರುಣಾಕರ ಹೆಗ್ಡೆ, ಕೆ.ಟಿ. ಶಂಕರ ಶೆಟ್ಟಿಮ ಜಗದೀಶ್ ಶೆಟ್ಟಿ, ಕಂದಾವರ ಸತೀಶ್ ಶೆಟ್ಟಿ, ರತ್ನಾಕರ ಶೆಟ್ಟಿ, ಯುವ ಬಂಟರ ಸಂಘದ ಗೌರವಾಧ್ಯಕ್ಷ ಡಾ| ರಂಜನ್ ಶೆಟ್ಟಿ, ಸ್ಥಾಪಕಾಧ್ಯಕ್ಷ ಡಾ| ಅಂಪಾರು ನಿತ್ಯಾನಂದ ಶೆಟ್ಟಿ, ಪ್ರ. ಕಾರ್ಯದರ್ಶಿ ಉದಯ ಕುಮಾರ್ ಶೆಟ್ಟಿ ಮಚ್ಚಟ್ಟು, ಕೋಶಾಧಿಕಾರಿ ನಿತಿನ್ ಕುಮಾರ್ ಶೆಟ್ಟಿ ಹುಂಚನಿ, ಪ್ರವೀಣ್ ಕುಮಾರ್ ಶೆಟ್ಟಿ ಹರ್ಕೂರು, ಚೇತನ್ ಕುಮಾರ್ ಶೆಟ್ಟಿ ಕೋವಾಡಿ, ಸುಕೇಶ್ ಶೆಟ್ಟಿ ಹೊಸಮಠ, ಪ್ರವೀಣ್ ಕುಮಾರ್ ಶೆಟ್ಟಿ ಕೊಡ್ಲಾಡಿ, ಮತ್ತಿತರರು ಉಪಸ್ಥಿತರಿದ್ದರು.

ಹಳ್ನಾಡು ಪ್ರತಾಪ್‍ಚಂದ್ರ ಶೆಟ್ಟಿ, ಅಕ್ಷಯ್ ಹೆಗ್ಡೆ ಮೊಳಹಳ್ಳಿ ಕಾರ್ಯಕ್ರಮ ನಿರೂಪಿಸಿದರು.

Click Here

LEAVE A REPLY

Please enter your comment!
Please enter your name here