ಎಮ್.ಸಿ.ಸಿ. ಬ್ಯಾಂಕಿನ 20ನೇ ಶಾಖೆ ಬೈಂದೂರಿನಲ್ಲಿ ಉದ್ಘಾಟನೆ

0
532

Click Here

Click Here

ಬೈಂದೂರು :ಸಮಾಜದ ಅಭಿವೃದ್ಧಿಯಲ್ಲಿ ಬ್ಯಾಂಕುಗಳ ಪಾತ್ರ ಮಹತ್ವರ – ವಿನ್ಸೆಂಟ್ ಕುವೆಲ್ಹೊ

ಕುಂದಾಪುರ ಮಿರರ್ ಸುದ್ದಿ…

ಬೈಂದೂರು: ಸಮಾಜದ ಅಭಿವೃದ್ಧಿಯಲ್ಲಿ ಬ್ಯಾಂಕುಗಳ ಪಾತ್ರ ಮಹತ್ವರವಾದು. ಸದಸ್ಯರ ಜೊತೆಗೆ ಉತ್ತಮ ಬಾಂಧವ್ಯ, ಅತ್ತುತ್ತಮವಾದ ಸೇವೆ, ಆಡಳಿತ ಮಂಡಳಿ ಉತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ಬ್ಯಾಂಕುಗಳು ಜನರ ವಿಶ್ವಾಸ ಪಡೆದುಕೊಳ್ಳುತ್ತದೆ. ಎಮ್.ಸಿ.ಸಿ. ಸಮಾಜಮುಖಿ ಬ್ಯಾಂಕು ಅಗಿದ್ದು ಎಲ್ಲಾ ವರ್ಗದ ಜನರನ್ನು ಸೌಹಾರ್ದ, ಸಾಮರಸ್ಯೆತೆಯ ಜೀವನ ಕಾರಣವಾಗಿದೆ ಎಂದು ಬೈಂದೂರಿನ ಹೋಲಿ ಕ್ರಾಸ್ ಚರ್ಚ್ ಧರ್ಮಗುರುಗಳಾದ ವಂದನೀಯ ವಿನ್ಸೆಂಟ್ ಕುವೆಲ್ಹೊ ಹೇಳಿದರು.

ಅವರು ಬೈಂದೂರು ಮುಖ್ಯರಸ್ತೆಯ ದೀಪಾ ಕಾಂಪ್ಲೆಕ್ಸ್‍ನಲ್ಲಿ ಎಮ್.ಸಿ.ಸಿ. ಬ್ಯಾಂಕಿನ 20ನೇ ಶಾಖೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಎಮ್.ಸಿ.ಸಿ. ಬ್ಯಾಂಕು ಉತ್ತಮ ಸೇವೆಗೆ ಹೆಸರಾಗಿದೆ. ಗ್ರಾಹಕರ ಜೊತೆಗೆ ಉತ್ತಮ ಬಾಂಧವ್ಯ, ಸ್ನೇಹಮಯ ವಾತಾವರಣವನ್ನು ನಾನು ಈ ಬ್ಯಾಂಕಿನಲ್ಲಿ ನೋಡಿದ್ದೇನೆ. ಕ್ಲಪ್ತ ಸಮಯದ ಸ್ಪಂದಿಸುವ ರೀತಿ, ಅಗತ್ಯತೆಗಳನ್ನು ಪೂರೈಸುವಿಕೆ, ಪರಿಸರದ ಬೇಡಿಕೆಯನ್ನು ಆಧರಿಸಿ ಅವಶ್ಯಕತೆಗಳನ್ನು ಪೂರೈಸುವ ಶಕ್ತಿ ಈ ಬ್ಯಾಂಕಿಗಿದೆ. ಬ್ಯಾಂಕಿನ ಅಧ್ಯಕ್ಷರಾಗಿರುವ ಅನಿಲ್ ಲೋಬೊ ಅವರ ಡೈನಾಮಿಕ್ ನಾಯಕತ್ವ ಈ ಬ್ಯಾಂಕಿಗಿದೆ. ಇವರ ಅಭಿವೃದ್ಧಿಶೀಲ ದೂರದೃಷ್ಟಿಗೆ ಆಡಳಿತ ಮಂಡಳಿ ಬೆನ್ನುಲುಭಾಗಿ ನಿಂತಿದೆ. ಹಾಗಾಗಿ ಈ ಬ್ಯಾಂಕ್ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. 125ನೇ ವರ್ಷ ಬ್ಯಾಂಕು ಇನ್ನಷ್ಟು ಶಾಖೆಗಳನ್ನು ತೆರೆದು ಸಾಧನೆ ಮಾಡಲಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಮ್.ಸಿ.ಸಿ. ಬ್ಯಾಂಕ್ ಅಧ್ಯಕ್ಷರಾದ ಸಹಕಾರ ರತ್ನ ಅನಿಲ್ ಲೋಬೊ ಅವರು ಕರ್ನಾಟಕದ ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ 113 ವರ್ಷಗಳ ಇತಿಹಾಸವಿರುವ ಈ ಬ್ಯಾಂಕ್ ವಿತ್ತೀಯ ವರ್ಷದಲ್ಲಿ ಎಲ್ಲಾ ವ್ಯವಹಾರ ಮಾಪನಗಳಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ಇದು ಸ್ಪರ್ಧಾತ್ಮಕವಾದ ಯುಗ. ಇಲ್ಲಿ ಸ್ಪರ್ಧಾತ್ಮಕತೆಗೆ ತಕ್ಕಂತೆ ಬದುಕಬೇಕಾಗುತ್ತದೆ. ಅದೇ ರೀತಿ ನಮ್ಮ ಆಡಳಿತ ಮಂಡಳಿ 2018ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, 2018ರಿಂದ 2025ರ ವಿತ್ತೀಯ ವರ್ಷದಲ್ಲಿ ಅಭೂತಪೂರ್ವ ಪ್ರಗತಿಯನ್ನು ದಾಖಲಿಸಿದೆ. ನಾಲ್ಕು ವಿಧದ ಬ್ಯಾಂಕುಗಳಿದ್ದು ನಮ್ಮದು ಕೋ ಆಪರೇಟಿವ್ ಬ್ಯಾಂಕು ಆಗಿದೆ. ಇದೊಂದು ಹಣಕಾಸು ಸಂಸ್ಥೆ. ರಿಸರ್ವ ಬ್ಯಾಂಕಿನ ಮೇಲ್ವಿಚಾರಣೆ ಇರುತ್ತದೆ. ಹಾಗಾಗಿ ಸಾರ್ವಜನಿಕರು ವಿಶ್ವಾಸದಿಂದ ಈ ಬ್ಯಾಂಕಿನೊಂದಿಗೆ ವ್ಯವಹಾರ ಮಾಡಬಹುದಾಗಿದೆ ಎಂದರು.

Click Here

ಶ್ರೀ ಮೂಕಾಂಬಿಕಾ ದೇವಸ್ಥಾನ, ಕೊಲ್ಲೂರಿನ ಆಡಳಿತ ಧರ್ಮದರ್ಶಿ ಬಾಬು ಶೆಟ್ಟಿ ಭದ್ರತಾ ಕೊಠಡಿಯನ್ನು ಉದ್ಘಾಟಿಸಿ ಅವಿಭಜಿತ ದಕ ಜಿಲ್ಲೆಯಲ್ಲಿ ಹಲವಾರು ಬ್ಯಾಂಕುಗಳು ಆರಂಭಗೊಂಡಿವೆ. ಅದರಲ್ಲಿ 113 ವರ್ಷಗಳ ಇತಿಹಾಸವಿರುವ ಎಮ್.ಸಿ.ಸಿ ಬ್ಯಾಂಕ್ ಕೂಡಾ ಒಂದಾಗಿದೆ. ಸುದೀರ್ಘ ಅವಧಿಯಿಂದ ಉತ್ತಮ ಸೇವೆ ನೀಡುತ್ತಿರುವ ಈ ಬ್ಯಾಂಕು ಬೈಂದೂರಿನಲ್ಲಿ ಶಾಖೆ ಆರಂಭಿಸಿರುವುದು ಸಂತಸದ ವಿಚಾರ. ಈ ಭಾಗದ ಕೃಷಿಕರಿಗೂ ಈ ಬ್ಯಾಂಕಿನಿಂದ ಉತ್ತಮ ಸಹಕಾರ ಸಿಗುವಂತಾಗಲಿ ಎಂದು ಶುಭ ಹಾರೈಸಿದರು.

ಬೈಂದೂರು ಸೇಂಟ್ ಥಾಮಸ್ ರೆಸಿಡೆನ್ಶಿಯಲ್ ಸ್ಕೂಲ್, ಇದರ ಪ್ರಾಂಶುಪಾಲರಾದ ಫಿಲಿಪ್ ನೆಲಿವಿಲ್ಲ, ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ರಾಜು ಪೂಜಾರಿ, ಬೈಂದೂರು ಪಟ್ಟಣ ಪಂಚಾಯತ್ ನಾಮನಿರ್ದೇಶಿತ ಸದಸ್ಯ ಸದಾಶಿವ ಡಿ. ಪಡುವರಿ, ಶಿರೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಕಾಪ್ಸಿ ನೂರ್ ಮೊಹಮ್ಮದ್, ನಾಡದೋಣಿ ರಾಜ್ಯ ಸಂಘದ ಅಧ್ಯಕ್ಷ ನಾಗೇಶ್ ಖಾರ್ವಿ, ಬೈಂದೂರಿನ ವಕೀಲರ ಸಂಘದ ಅಧ್ಯಕ್ಷ ಮೋಬಿ ಪಿ.ಸಿ.ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.

ಉಪಾಧ್ಯಕ್ಷರಾದ ಜೆರಾಲ್ಡ್ ಜೂಡ್ ಡಿ’ಸಿಲ್ವಾ, ಮಹಾಪ್ರಬಂಧಕರಾದ ಸುನಿಲ್ ಮಿನೇಜಸ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ 2024-25ನೇ ಶೈಕ್ಷಣಿಕ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಸಾಧನೆ ಮಾಡಿದ ಮಾನ್ಯ, ಜಾನವಿ, ಗೌತಮಿ ಗೋಪಾಲ ಭಂಡಾರಿ, ಜೀವಿಕಾ, ರಕ್ಷಿತಾ, ನಾಗಶ್ರೀ ಅವರನ್ನು ಸನ್ಮಾನಿಸಲಾಯಿತು.

ಎಲ್ರಾಯ್ ಕಿರಣ್ ಕ್ರಾಸ್ಟೊ ಸ್ವಾಗತಿಸಿದರು. ಕುಂದಾಪುರ ಶಾಖೆಯ ಮೆನೇಜರ್ ಜ್ಯೋತಿ ಬರೆಟ್ಟೊ ಸಾಧಕ ವಿದ್ಯಾರ್ಥಿಗಳ ಪರಿಚಯಿಸಿದರು. ಬೈಂದೂರು ಶಾಖೆಯ ಸಿನಿಯರ್ ಮೆನೇಜರ್ ಸಂದೀಪ್ ಕ್ವಾಡ್ರಸ್ ವಂದಿಸಿದರು. ಸ್ಟೀವನ್ ಕೊಲೆಸೊ ಕಾರ್ಯಕ್ರಮ ನಿರ್ವಹಿಸಿದರು.

 

Click Here

LEAVE A REPLY

Please enter your comment!
Please enter your name here