ಕೋಟ ಪಂಚವರ್ಣ ಮಹಿಳಾಮಂಡಲದ ಆಸಾಡಿ ಒಡ್ರ್ ಕ್ರೀಡಾಕೂಟ :ಭಾಷೆ ಮತ್ತು ಬದುಕಿನ ಪರಂಪರೆ ವೇದಿಕೆ – ಶ್ರೀಕಾಂತ್ ಶೆಣೈ

0
235

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಕುಂದಾಪ್ರ ಭಾಷೆಗೆ ತನ್ನದೆ ಆದ ಅಸ್ತಿತ್ವ ಇದೆ. ಅದರ ಪರಂಪರೆಯನ್ನುಮುಂದಿನ ತಲೆಮಾರಿಗೆ ಕೊಂಡ್ಯೋಯುವ ಕೆಲಸ ನಾವುಗಳು ಮಾಡಬೇಕಿದೆ ಎಂದು ಕೋಟದ ಸಕಡ್ ಫೌಂಡೇಶನ್ ಪ್ರವರ್ತಕ ಕೋಟ ಶ್ರೀಕಾಂತ್ ಶೆಣೈ ಕರೆ ನೀಡಿದ್ದಾರೆ.

ಇದೇ ಬರುವ ಆ.10ರಂದು ಹಂದಟ್ಟು ಪರಿಸರದಲ್ಲಿ ನಡೆಯಲಿರುವ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಮಾತೃ ಸಂಸ್ಥೆ ಪಂಚವರ್ಣ ಯುವಕ ಮಂಡಲದ ಮಾರ್ಗದರ್ಶನದಲ್ಲಿ ಆಸಾಡಿ ಒಡ್ರ್ ಕಾರ್ಯಕ್ರಮದ ಪೂರ್ವಭಾವಿ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ ಪಂಚವರ್ಣ ಮಹಿಳಾ ಮಂಡಲ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ಸಮಾಜಕ್ಕೆ ಪ್ರೇರಕ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದರು.

ಕುಂದಗನ್ನಡದ ಗ್ರಾಮೀಣ ರಾಯಬಾರಿ ಎಂ. ಜಯರಾಮ್ ಶೆಟ್ಟಿ ಕುಂದಾಪ್ರ ಭಾಷೆ ಬದುಕು ಹಾಗೂ ಕ್ರೀಡೆಗಳ ಬಗೆಗಿನ ಕುರಿತು ಮಾತನಾಡಿ ಉಳಿಸಿಬೆಳೆಸಲು ಕರೆ ನೀಡಿದರು.

Click Here

ಪಂಚವರ್ಣ ಮಹಿಳಾಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.

ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ. ತಾರಾನಾಥ ಹೊಳ್ಳ, ವಿಪ್ರ ಮಹಿಳಾ ಸಾಲಿಗ್ರಾಮ ವಲಯ ಮಾಜಿ ಅಧ್ಯಕ್ಷೆ ಜ್ಞಾಹ್ನವಿ ಹೇರ್ಳೆ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಕೆ. ಮನೋಹರ್ ಪೂಜಾರಿ, ಹಂದಟ್ಟು ಮಹಿಳಾ ಬಳಗದ ಅಧ್ಯಕ್ಷೆ ರತ್ನ ಪೂಜಾರಿ ಉಪಸ್ಥಿತರಿದ್ದರು.

ಮಹಿಳಾಮಂಡಲದ ಸದಸ್ಯೆ ವೀಣಾ ಪೂಜಾರಿ ಸ್ವಾಗತಿಸಿದರು. ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಸಂಚಾಲಕಿ ಸುಜಾತ ಬಾಯರಿ ನಿರೂಪಿಸಿ ವಂದಿಸಿದರು.

ಗ್ರಾಮೀಣ ಕ್ರೀಡಾಕೂಟದ ಅಂಗವಾಗಿ ಕೋಲಾ, ಧಕ್ಕೆಬಲಿ ಹೌದರಾಯನ ವಾಲ್ಗವೆ, ಹೊಸ್ತಿಲು ಅಜ್ಜಿ , ಹಿರಿಯರ ಮಳೆಗಾಲದ ಆಹಾರ ಪದ್ಧತಿ , ಹಪ್ಪಳ ಮಾಡುವುದು ಉಪ್ಪಿನಕಾಯಿ ಮಾಡುವುದು ಹೊಸ್ತು, ಹೋರಿಗೆ ಏರ್ತಾ ಬಿಡುದ್, ಗಣಪತಿ ನಟ್ಟಿ, ಹೊಟ್ಟು ಸುಡುದ್, ಹೋಳಿ ಹಬ್ಬ, ಕೊಯ್ಲು ಕುರಿತು ಮಕ್ಕಳಿಗೆ ಭಾಷಣ ಸ್ಪರ್ಧೆ, ಹಿಡಿ ಕಡ್ಡಿ ನೇಯುವ ಸ್ಪರ್ಧೆ, ಸಂಗೀತ ಕುರ್ಚಿ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ಹಂದಟ್ಟು ಮಹಿಳಾ ಬಳಗ ಸಹಕಾರ ನೀಡಿತು.

Click Here

LEAVE A REPLY

Please enter your comment!
Please enter your name here