ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಜು.26, 27ರಂದು ನೇಪಾಳದಲ್ಲಿ ನಡೆದ ಮಾಸ್ಟರ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ವಿಜೇತರಾದ ಕೋಟದ ದಿನೇಶ್ ಗಾಣಿಗ ಇವರಿಗೆ ಕೋಟ ಅಮೃತೇಶ್ವರೀ ದೇಗುಲದಲ್ಲಿ ಭವ್ಯ ಸ್ವಾಗತ ಕೋರಲಾಯಿತು.
ಇದೇ ವೇಳೆ ದೇಗುಲ ವ್ಯವಸ್ಥಾಪಕ ಗಣೇಶ ಹೊಳ್ಳ ಶಾಲು ಹೋದಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಕೋಟ ಗ್ರಾ.ಪಂ ಸದಸ್ಯ ಭುಜಂಗ ಗುರಿಕಾರ, ದೇಗುಲದ ಮಾಜಿ ಟ್ರಸ್ಟಿ ಸುಬ್ರಾಯ ಆಚಾರ್, ಪಂಚವರ್ಣ ಯುವಕ ಮಂಡಲದ ಪೂರ್ವಾಧ್ಯಕ್ಷ ಅಜಿತ್ ಆಚಾರ್, ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್, ಪಂಚವರ್ಣದ ಉಪಾಧ್ಯಕ್ಷ ದಿನೇಶ ಆಚಾರ್ ಇದ್ದರು.











