ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಎಂ.ಎಂ.ಪಿ ನಿರ್ಮಾಣದ ಗುಲ್ವಾಡಿ ಟಾಕೀಸ್ ಅರ್ಪಿಸುವ ಆ 90 ದಿನಗಳು ಚಲನಚಿತ್ರದ ಚಿತ್ರೀಕರಣ ಮುಗಿದಿದ್ದು ಜನವರಿ ಕೊನೆಯ ವಾರದಲ್ಲಿ ಬಿಡುಗಡೆಗೊಳ್ಳಲಿದೆ. ಬಿಡುಗಡೆಯ ಪೂರ್ವದಲ್ಲಿ ಜ.2ರಂದು ಸಂಜೆ 6 ಗಂಟೆಗೆ ಗುಲ್ವಾಡಿಯಲ್ಲಿ ಚಿತ್ರದ ಫಸ್ಟ್ ಲುಕ್ ಪೋಸ್ಟರ್, ಟ್ರೈಲರ್, ಹಾಡು ಬಿಡುಗಡೆ ಕಾರ್ಯಕ್ರಮ ನಡೆಯಲಿದೆ ಎಂದು ಚಿತ್ರದ ನಿರ್ದೇಶಕರಾದ ಯಾಕೂಬ್ ಖಾದರ್ ಗುಲ್ವಾಡಿ ತಿಳಿಸಿದ್ದಾರೆ.
ಅವರು ಸೋಮವಾರ ಕುಂದಾಪುರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಇದೊಂದು ನಮ್ಮ ಮಹತ್ವಕಾಂಕ್ಷಿ ಚಿತ್ರವಾಗಿದ್ದು ಸಂಪೂರ್ಣ ಕಮರ್ಶಿಲ್ ಚಿತ್ರ. ರಾಜ್ಯಾದ್ಯಂತ 25 ಥಿಯೇಟರ್‍ಗಳಲ್ಲಿ ಬಿಡುಗಡೆಗೊಳ್ಳಲಿದ್ದು, 2 ಗಂಟೆಯ ಅವಧಿಯ ಈ ಚಿತ್ರ ಸಸ್ಪೆನ್ಸ್, ಥ್ರಿಲ್ಲರ್ ಕಥೆಯನ್ನು ಹೊಂದಿದೆ. ಚಿತ್ರದ ನಿರ್ದೇಶನ, ಕಥೆ, ಚಿತ್ರಕಥೆ, ನಿರ್ಮಾಪಕರು ರೊನಾಲ್ಡ್ ಲೋಬೊ. ನಾಯಕ ನಟರಾಗಿ ರತಿಕ್ ಮುರ್ಡೇಶ್ವರ್ ನಟಿಸುತ್ತಿದ್ದಾರೆ. ನಾಯಕಿಯಾಗಿ ಚಂದ್ರಿಕಾ ನಟಿಸುತ್ತಿದ್ದಾರೆ. ಉಳಿದಂತೆ ಹಿರಿಯ ನಟಿ ಭವ್ಯ, ಪ್ರದೀಪ್ ಪೂಜಾರಿ ಉಪ್ಪಿನಕುದ್ರು, ಮಾರುತಿ, ಅಮೀರ್ ಹಂಝ, ಪೂರ್ಣಿಮಾ ಸುರೇಶ್ ಮೊದಲಾದ ಖ್ಯಾತ ನಟನಟಿಯರೊಂದಿಗೆ ಸ್ಥಳೀಯ ಪ್ರತಿಭೆಗಳಿಗೂ ಅವಕಾಶ ನೀಡಲಾಗಿದೆ. ಕನ್ನಡ ಚಲನಚಿತ್ರ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದಿರುವ ಪ್ರಮೋದ್ ಮರವಂತೆ ಸಾಹಿತ್ಯ ಚಿತ್ರಕ್ಕಿದೆ. ರಾಧಾಕೃಷ್ಣ ಬಸ್ರೂರು ಸಂಗೀತವಿದೆ ಎಂದರು.
ಚಿತ್ರದ ನಿರ್ದೇಶಕ, ನಿರ್ಮಾಪಕರಾದ ರೊನಾಲ್ಡ್ ಲೋಬೊ ಮಾತನಾಡಿ, ಇದೊಂದು ವಿಶಿಷ್ಠವಾದ ಕಥಾ ಹಂದರವನ್ನು ಹೊಂದಿರುವ ಸಿನಿಮಾವಾಗಿದ್ದು ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸುತ್ತದೆ. ದುಬಾರಿ ಸೆಟ್‍ಗಳ ಮೊರೆ ಹೋಗದೇ ಉಡುಪಿ ಜಿಲ್ಲೆಯ ನೈಸರ್ಗಿಕ ಸೌಂದರ್ಯವನ್ನು ಪ್ರೇಕ್ಷಕನ ಮುಂದಿಡುವ ಪ್ರಯತ್ನ ಮಾಡಿದ್ದೇವೆ. ಕುಂದಾಪುರದ ಭೌಗೋಳಿಕ ಚೆಲುವು, ಕರಾವಳಿ ಮತ್ತು ಸೀಮೆಯ ನಡುವಿನನ ಅಗರ್ಭವಾದ ಪ್ರಕೃತಿ ಸೌಂದರ್ಯದ ಪ್ರದೇಶಗಳನ್ನು ಹುಡುಕಿ ಅಲ್ಲಿ ಚಿತ್ರೀಕರಣ ನಡೆಸಿದ್ದೇವೆ.ಎಂದರು.
ಹಿರಿಯ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ್ ಮಾತನಾಡಿ, ಆ 90 ದಿನಗಳು ಸಿನಿಮಾದಲ್ಲಿ ಮನೋವೈಜ್ಞಾನಿಕತೆ ಹಾಗೂ ವಿಜ್ಞಾನವನ್ನು ಬಳಸಿಕೊಳ್ಳಲಾಗಿದೆ. ಕಥೆಯ ವಿಚಾರದಲ್ಲಿ ನಿರ್ದೇಶಕರು ಸಾಕಷ್ಟು ಅಧ್ಯಯನ ಮಾಡಿದ್ದಾರೆ. ಸಾಹಿತ್ಯ, ಸಂಭಾಷಣೆ, ಸಂಗೀತ, ಅಪರೂಪದ ಪ್ರಾಕೃತಿಕ ಸೌಂದರ್ಯದ ಸ್ಥಳಗಳ ಬಳಕೆಯಿಂದ ಚಿತ್ರ ಸಮೃದ್ದವಾಗಿದ್ದು ಎಲ್ಲಾ ವಿಭಾಗದ ಚಿತ್ರಪ್ರೇಮಿಗಳಿಗೂ ಚಿತ್ರ ಇಷ್ಟವಾಗಲಿದೆ ಎಂದರು.
ಸುದ್ಧಿಗೋಷ್ಠಿಯಲಿ ನಾಯಕ ನಟ ರತಿಕ್ ಮುರ್ಡೇಶ್ವರ್ , ಕಿನರಾ ಶೇಖರ್ ಶೆಟ್ಟಿ, ಗುಲ್ವಾಡಿ ಗ್ರಾ.ಪಂ.ಅಧ್ಯಕ್ಷ ಸುದೇಶ್ ಕುಮಾರ್ ಶೆಟ್ಟಿ, ನಟ ಅಮೀರ್ ಹಂಝ ಉಪಸ್ಥಿತರಿದ್ದರು.
ಜ.2 ಭಾನುವಾರ ಸಂಜೆ 7 ಗಂಟೆಗೆ ಗುಲ್ವಾಡಿ ಬ್ಯಾಂಕ್ ಆಫ್ ಬರೋಡ ಹತ್ತಿರ ಚಿತ್ರದ ಫಸ್ಟ್ ಲುಕ್ ಪೋಸ್ಟರ್, ಟ್ರೈಲರ್, ಹಾಡು ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ರಾಜ್ಯ ಹಿಂದುಳಿದ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕರಾದ ಡಾ|ಜಿ.ಶಂಕರ್, ರಾಜ್ಯ ಪ್ರಶಸ್ತಿ ಪುರಸ್ಕøತ ನಟ, ನಿರ್ದೇಶಕ ರಿಷಬ್ ಶೆಟ್ಟಿ, ರಾಜ್ಯ ಪ್ರಶಸ್ತಿ ಪುರಸ್ಕøತ ಸಂಗೀತ ನಿರ್ದೇಶಕ ರವಿ ಬಸ್ರೂರು, ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ಡಾ|ನಾಗಭೂಷಣ ಉಡುಪ, ಯುವ ಮೆರಿಡಿಯನ್ ಮಾಲಕ ಉದಯ ಕುಮಾರ್ ಶೆಟ್ಟಿ, ಹಿರಿಯ ನ್ಯಾಯವಾದಿ ಎಎಸ್.ಎನ್ ಹೆಬ್ಬಾರ್, ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಜೋನ್ಸನ್ ಡಿ ಅಲ್ಮೇಡಾ, ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ, ಸಹನ ಗ್ರೂಫ್‍ನ ಸುರೇಂದ್ರ ಶೆಟ್ಟಿ ಭಾಗವಹಿಸಲಿದ್ದಾರೆ.
ಸಂಜೆ 6 ಗಂಟೆಗೆ ಸಿನಿಮಾ ಮತ್ತು ಜಾನಪದ ಹಾಡುಗಳ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆ ಅಧ್ಯಕ್ಷ ಶಿವರಾಮ ಕೆಪಿ, ಯುವ ಮೆರಿಡಿಯನ್ ಮಾಲಕರಾದ ವಿನಯ ಕುಮಾರ ಶೆಟ್ಟಿ, ಗುಲ್ವಾಡಿ ಗ್ರಾ.ಪಂ.ಅಧ್ಯಕ್ಷ ಸುದೇಶ ಕುಮಾರ್ ಶೆಟ್ಟಿ, ಆದರ್ಶ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ|ಆದರ್ಶ ಹೆಬ್ಬಾರ್,, ಕೋಟದ ಮನಸ್ಮಿತ ಫೌಂಡೇಶನ್ ನಿರ್ದೇಶಕ ಡಾ|ಪ್ರಕಾಶ್ ತೋಳಾರ್, ಕುಂದಾಪುರ ನ್ಯೂ ಮೆಡಿಕಲ್ ವೈದ್ಯಕೀಯ ನಿರ್ದೇಶಕ ಡಾ|ರಂಜನ್ ಶೆಟ್ಟಿ, ಪ್ರಭಾ ಕಿರಣ್ ಟೈಲ್ಸ್ ಗುಲ್ವಾಡಿಯ ಪ್ರಶಾಂತ್ ತೋಳಾರ್, ಉಡುಪಿ ಕಸಾಪ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ದುರ್ಗಾಕೃಪಾ ಮೋಟಾರ್ಸ್‍ನ ವಿವೇಕಾನಂದ ಭಂಡಾರಿ, ಶೇಖರ ಶೆಟ್ಟಿ ಕೋಟೇಶ್ವರ, ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ಭಾಗವಹಿಸಲಿದ್ದಾರೆ.
ಖ್ಯಾತ ಗಾಯಕರಾದ ಡಾ|ಸತೀಶ್ ಪೂಜಾರಿ, ಅರ್ಫಾಝ್ ಉಳ್ಳಾಲ್, ಗವಿಶಿದ್ದಯ್ಯ ಹಳ್ಳಿಕೇರಿಮಠ, ಮೆಹಬೂಬ್ ಕಿಲ್ಲೆದಾರ್ ಸಿನಿಮಾ ಹಾಗೂ ಜಾನಪದ ಹಾಡುಗಳನ್ನು ಪ್ರಸ್ತುತ ಪಡಿಸಲಿದ್ದಾರೆ.