ಕೋಟ :ವಿಶ್ವದೆಲ್ಲೆಡೆ ಕುಂದಾಪ್ರ ಭಾಷೆ ಪ್ರಚಲಿತ – ಸಾಹಿತಿ ಪೂರ್ಣಿಮಾ ಕಮಲಶಿಲೆ

0
551

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಕುಂದಾಪ್ರ ಭಾಷೆ ತನ್ನದೆ ಆದ ಪರಂಪರೆಯನ್ನು ವಿಶ್ವದೆಲ್ಲೆಡೆ ಪಸರಿಸಿಕೊಂಡಿದೆ. ಇಲ್ಲಿನ ಭಾಷೆಯ ಜತೆಗೆ ಸಾಂಪ್ರಾದಾಯಿಕ ಬದುಕು ಕಟ್ಟಿಕೊಟ್ಟಿದೆ ಎಂದು ಸಾಹಿತಿ ಕುಂದಗನ್ನಡದ ಪೂರ್ಣಿಮಾ ಕಮಲಶಿಲೆ ಹೇಳಿದರು.

ಭಾನುವಾರ ಕೋಟದ ಹಂದಟ್ಟು ಗೆಳೆಯರ ಬಳಗ ಗೀತಾನಂದ ವೇದಿಕೆಯಲ್ಲಿ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಮಾತೃ ಸಂಸ್ಥೆ ಪಂಚವರ್ಣ ಯುವಕ ಮಂಡಲ ಕೋಟ ಇದರ ಮಾರ್ಗದರ್ಶನದಲ್ಲಿ ನಾಲ್ಕನೇ ವರ್ಷದ ಆಸಾಡಿ ಒಡ್ರ್ -2025 ಊರ್ ಕೇರಿ ಬದ್ಕಿನ್ ಹಬ್ಬು ಕುಂದಾಪ್ರ ಭಾಷಿಯ ಗಮ್ಜಲ್ ಮಾಡಿ ಮಾತನಾಡಿ ಇಂದಿನ ಮಕ್ಕಳು ಬರೇ ಮೊಬೈಲ್ ಗೀಳಿನಲ್ಲಿ ಕುಂದಾಪ್ರ ಭಾಷೆ ಬದುಕಿನ ವಿಚಾರಧಾರೆಯನ್ನು ಮೆರೆತಿರುವುದು ಬೇಸರದ ಸಂಗತಿ ಮನೆಯ ಹಿರಿಯರು ಮಕ್ಕಳಿಗೆ ಇದರ ಉಳಿವಿನ ಬಗ್ಗೆ ಆಗಾಗ ತಿಳಿಹೇಳುವ ಕಾರ್ಯಮಾಡಬೇಕು ಪಂಚವರ್ಣ ಮಹಿಳಾ ಮಂಡಲ ಈ ಕುಂದಗನ್ನಡ ಸಂಸ್ಕೃತಿ ಉಳಿಸುವ ಕಾರ್ಯ ಪ್ರಶಂಸನೀಯ ಇಂತಹ ಕಾರ್ಯಕ್ರಮ ಎಲ್ಲೆಡೆ ಪಸರಿಸಿಕೊಳ್ಳಲಿ ಭಾಷಾಭಿಮಾನ, ಬದುಕಿನ ಸಂಸ್ಕಾರದ ಬೀಜ ಬಿತ್ತೋಣ ಎಂದರು.

ಕಾರ್ಯಕ್ರಮವನ್ನು ಸಮಾಜಸೇವಕಿ ಡಾ. ವಾಣಿಶ್ರೀ ಐತಾಳ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕುಂದಾಪ್ರ ಭಾಷೆಯಲ್ಲಿ ವೈವಿಧ್ಯತೆ ಇದೆ ನಮ್ಮ ಪೂರ್ವಜರು ಬಳುವಳಿಯಾಗಿ ನೀಡಿದ ಬದುಕಿನ ಸಂಸ್ಕತಿಯನ್ನು ಉಳಿಸಿ ಬೆಳೆಸುವ ಕಾರ್ಯ ಪ್ರತಿಯೊಬ್ಬರು ಮಾಡಬೇಕು ಎಂದರು.

ಗ್ರಾಮೀಣ ಪರಿಕರವನ್ನು ಮಾಜಿ ಜಿ.ಪಂ ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ ಉದ್ಘಾಟಿಸಿದರು. ಆಸಾಡಿ ಒಡ್ರ್ ಗ್ರಾಮೀಣ ತಿನಿಸುಗಳನ್ನು ಸಾಂಸ್ಕೃತಿಕ ಚಿಂತಕಿ ಪ್ರೇಮ ಶೆಟ್ಟಿ ಅನಾವರಣಗೊಳಿಸಿದರು.

ಮಣೂರು‌ ಮಹಾಲಿಂಗೇಶ್ವರ ದೇಗುಲದ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ಸಭಾ ಕಾರ್ಯಕ್ರಮ ತೆಂಗಿನ ಹೂ ಅರಳಿಸುವ ಮೂಲಕ ಚಾಲನೆ ನೀಡಿದರು.

Click Here

ಆಸಾಡಿ ಒಡ್ರ್ ಸಾಧಕ ಪುರಸ್ಕಾರವನ್ನು ಸಾಮಾಜಿಕ ಚಿಂತಕಿ ಭಾರತಿ ವಿ ಮಯ್ಯ ಇವರಿಗೆ ನೀಡಲಾಯಿತು.
ಲೇಖಕಿ ಪೂರ್ಣಿಮಾ ಕಲಮಶಿಲೆ ಇವರನ್ನು ಅಭಿನಂದಿಸಲಾಯಿತು.

ಹಂದಟ್ಟು ಮಹಿಳಾ ಬಳಗದ ವತಿಯಿಂದ ಸಾಲಿಗ್ರಾಮದ ಹೊಸಬದುಕು ಆಶ್ರಮಕ್ಕೆ ದಿನಸಿ ಪರಿಕರವನ್ನು ಹಂದಟ್ಟು ಮಹಿಳಾ ಬಳಗದ ಅಧ್ಯಕ್ಷೆ ರತ್ನಾ ಪೂಜಾರಿ ಆಶ್ರಮದ ಮುಖ್ಯಸ್ಥ ವಿನಯಚಂದ್ರ ಸಾಸ್ತಾನ ಇವರಿಗೆ ಹಸ್ತಾಂತರಿಸಿದರು.

ಸಭೆಯ ಅಧ್ಯಕ್ಷತೆಯನ್ನು ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ವಹಿಸಿದ್ದರು.

ಮುಖ್ಯ ಅಭ್ಯಾಗತರಾಗಿ ಪಂಚವರ್ಣ ಮಹಿಳಾ ಮಂಡಲದ ಗೌರವಾಧ್ಯಕ್ಷೆ ಕುಸುಮಾ ದೇವಾಡಿಗ, ಪಂಚವರ್ಣ ಯುವಕ ಮಂಡಲದ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಮನೋಹರ್ ಪೂಜಾರಿ, ಗೆಳೆಯರ ಬಳಗ ಅಧ್ಯಕ್ಷ ಕೆ. ತಾರಾನಾಥ ಹೊಳ್ಳ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಮಹಿಳಾ ಮಂಡಲದ ಚಾಲಕಿ ಸುಜಾತ ಬಾಯರಿ ಹಾಗೂ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ನಿರೂಪಿಸಿದರೆ, ಪಂಚವರ್ಣ ಮಹಿಳಾ ಮಂಡಲದ ಕಾರ್ಯದರ್ಶಿ ವಸಂತಿ ಹಂದಟ್ಟು ಸ್ವಾಗತಿಸಿದರೆ, ಸದಸ್ಯೆ ವೀಣಾ ಪ್ರಕಾಶ್ ಪಡುಕರೆ ಪ್ರಾಸ್ತಾವನೆ ಸಲ್ಲಿಸಿದರು. ಸದಸ್ಯೆ ವಸಂತಿ ಕುಂದರ್ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಕೋಶಾಧಿಕಾರಿ ಸುಜಾತ ಉದಯ್ ತಿಂಗಳಾಯ ವಂದಿಸಿದರು. ಕಾರ್ಯಕ್ರಮವನ್ನು ಯುವಕ ಮಂಡಲದ ಸಲಹಾ ಸಮಿತಿಯ ರವೀಂದ್ರ ಕೋಟ ಸಂಯೋಜಿಸಿದರು.

ಗಮನ ಸೆಳೆದ ಪರಿಕರ, ತಿನಿಸು,ಹೊಲಿ ಕರೆಯುವುದು
ಕಾರ್ಯಕ್ರಮದಲ್ಲಿ ಗಾಡಿ ಕೂಸಣ್ಣನ ಎತ್ತಿನ ಗಾಡಿ, ಗ್ರಾಮೀಣ ಪರಿಕರಗಳಾದ ಚೆನ್ನಿಮಣಿ, ಕೊಪ್ಪರಿಗೆ, ನೇಗಿಲು ನೋಗ, ತಾಮ್ರದಹರಿ, ಮಣ್ ಮರ್ಗಿ, ಹಳೆಯ ಕಾಲದ ಗಡಿಯಾರ, ಗಾಡಿ ಕೂಸಣ್ಣನ ಎತ್ತಿನಗಾಡಿ, ಗಿರೀಜಾ ಬೋಜಣ್ಣ ಇವರ ಕಂಬಳ ಪರಿಕರ, ಸಾಂಬಾರ್ ಬಟ್ಲ್, ನರೋಳಿ ಸೊಪ್ಪಿನ ದೊಸೆ, ಬೆಸಿದ ಕಡ್ಲೆ, ಅಕ್ಕಿ ಉಂಡಿ, ಹೀಗೆ 80ಕ್ಕೂ ಅಧಿಕ ಬಗೆಯ ತಿಂಡಿ ತಿನಿಸುಗಳ ಸ್ಪರ್ಧೆಯಲ್ಲಿ ಕಂಡುಬಂತು. ಹಂದಟ್ಟು ಸುಬ್ಬಯ್ಯ ಪೂಜಾರಿ ಹೊಲಿ ಕರೆಯುವ ಹಾಗೂ ಸ್ಥಳೀಯ ಪುಟಾಣಿಗಳು ಹೊಲಿ ಕೂಗುವ ದೃಶ್ಯ ವಿಶೇಷವಾಗಿ ಗಮನ ಸೆಳೆಯಿತು.

ಆರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ
ಆಸಾಡಿ ಒಡ್ರ್ ಕಾರ್ಯಕ್ರಮದ ಸಾಂಸ್ಕ್ರೃತಿಕ ಕಾರ್ಯಕ್ರಮಕ್ಕೆ ವಿಶಿಷ್ಠವಾಗಿ ಪಂಚವರ್ಣ ಮಹಿಳಾ ಮಂಡಲದ ಪದಾಧಿಕಾರಿಗಳು ಹಳೆಯ ಸಂಪ್ರದಾಯದಂತೆ ದೀಪ, ಭತ್ತ ಸಸಿ, ವಿಳ್ಯೆದೆಲೆ, ಅಡಿಕೆ, ತುಳಸಿ ಕಟ್ಟೆ,ಕಳಶ, ಅರಸಿನ ಕುಂಕುಮ, ಬಳೆ, ಹೂವು, ಸಿಂಗಾರ, ಹಣ್ಣು, ನೀರು, ಬೆಲ್ಲ ಹಿಡಿದು ವೇದಿಕೆಯ ಮೇಲೆ ತಂದಿರಿಸಿ ಗಣ್ಯರನ್ನು ಸ್ವಾಗತಿಸಿದರು. ಕಾರ್ಯಕ್ರಮಕ್ಕೆ ಸ್ನೇಹಕೂಟದ ಸಂಚಾಲಕಿ ಭಾರತಿ ವಿಷ್ಣುಮೂರ್ತಿ ಮಯ್ಯ ದಂಪತಿಗಳು ಭತ್ತದ ಗಿಡಕ್ಕೆ ನೀರೇರೆವ ಮೂಲಕ ಉದ್ಘಾಟಿಸಿದರು. ಸ್ನೇಹಕೂಟ ಸದಸ್ಯೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಸಂಪನ್ನಗೊಂಡಿತು.

Click Here

LEAVE A REPLY

Please enter your comment!
Please enter your name here