ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಬಸ್ರೂರು ಬಿಎಂ ಶಾಲೆಯ 70 ವಿದ್ಯಾರ್ಥಿಗಳಿಗೆ ಹಂಗಳೂರು ಲಯನ್ಸ್ ಕ್ಲಬ್ ಮೂಲಕ ಸುಮಾರು 45 ಸಾವಿರ ರೂಪಾಯಿ ಬೆಲೆಯ ಸಮವಸ್ತ್ರ ಹಾಗು ನೋಟ್ ಬುಕ್ ನ್ನು ದಾನಿಗಳಾದ ಲಯನ್ ಕೆ.ವಿ. ಬಾಲಚಂದ್ರ ಶೆಟ್ಟಿಯವರು ನೀಡಿದರು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಲಯನ್ ಸಂದೀಪ್ ಶೆಟ್ಟಿ, ದಾನಿಗಳಾದ ಲಯನ್ ಬಾಲಚಂದ್ರ ಶೆಟ್ಟಿಯವರ ಔದಾರ್ಯ ಕೊಂಡಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುವರ್ಣಲತಾ ವಹಿಸಿದ್ದರು. ವೇದಿಕೆಯಲ್ಲಿ ವಿಲ್ಫ್ರೆಡ್ ಮೆನೆಜಸ್, ನಿತೇಶ್ ಡಿಕೋಸ್ತ್ ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯರಾದ ಮನೋಹರ್ ಲಮಾಣಿ ವಂದಿಸಿದರು.











