ಕುಂದಾಪುರ ಮಿರರ್ ಸುದ್ದಿ…

ಕಿರಿಮಂಜೇಶ್ವರ: ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಜನತಾ ರಸಬುಗ್ಗೆ ಎಂಬ ಶೀರ್ಷಿಕೆಯಡಿಯಲ್ಲಿ ಮುದ್ದುಕೃಷ್ಣ ಸ್ಪರ್ಧೆಯು ಸಂಪನ್ನಗೊಂಡಿತು.
ಜೀ ಕನ್ನಡ ಸರಿಗಮಪ ಖ್ಯಾತಿಯ ಬಾಲಗಾಯಕಿ ದಿಯಾ ಹೆಗ್ಡೆ ಈ ಕಾರ್ಯಕ್ರಮವನ್ನು ಉದ್ಘಾಟಿಸಿ, ನಮ್ಮಂತಹ ಮಕ್ಕಳಿಗೆ ಬಾಲ್ಯದ ಹಂತದಲ್ಲಿಯೇ ವೇದಿಕೆಗಳು, ಯಥೇಚ್ಛ ಅವಕಾಶಗಳು ದೊರೆಯಬೇಕು. ನಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸಿಕೊಳ್ಳಲು, ನಮ್ಮ ಸಾಧನೆಯ ಹಾದಿಯನ್ನು ಕಂಡುಕೊಳ್ಳಲು ಇಂತಹ ವೇದಿಕೆಗಳು ಬಹು ಸಹಕಾರಿಯಾಗುತ್ತವೆ. ಇವು ನಮ್ಮಲ್ಲಿ ಆತ್ಮವಿಶ್ವಾಸವನ್ನು ವೃದ್ಧಿಸುತ್ತವೆ” ಎಂದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಜನತಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಗಣೇಶ್ ಮೊಗವೀರರು “ನಮ್ಮ ಪರಂಪರೆಯ ಉದಾತ್ತ ಅಂಶಗಳನ್ನು ನಮ್ಮ ವಿದ್ಯಾರ್ಥಿಗಳಿಗೆ ತಿಳಿಯಪಡಿಸಲು ವಿವಿಧ ರೀತಿಯಲ್ಲಿ ಪ್ರಯತ್ನಶೀಲರಾಗಿದ್ದೇವೆ. ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿಯೇ ನಮ್ಮಯ ಗುರಿಯಾಗಿದೆ. ಈ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಯ ವೈಭವವನ್ನು ಇಂದಿನ ಮುದ್ದುಕೃಷ್ಣ ಸ್ಪರ್ಧೆಯ ಮೂಲಕ ಯುವ ಪೀಳಿಗೆಯ ಮುಂದೆ ಅನಾವರಣಗೊಳಿಸಿದ್ದೇವೆ” ಎಂದರು.
ಉದ್ಘಾಟನಾ ಸಮಾರಂಭದ ನಂತರ ನಡೆದ 1 ರಿಂದ 3 ವರ್ಷದೊಳಗಣ ಕಿರಿಯರ ವಿಭಾಗದ ಮುದ್ದುಕೃಷ್ಣ ಸ್ಪರ್ಧೆಯಲ್ಲಿ ಆಕೃತಿ ಎ ಪೂಜಾರಿ ಪ್ರಥಮ ಬಹುಮಾನದೊಂದಿಗೆ 15999₹ ಗಳ ನಗದು ಮತ್ತು ಪ್ರಶಸ್ತಿ ಪತ್ರ ಮತ್ತು ಫಲಕ, ಶಿವಕಾರ್ತಿಕೇಯ ವಿ ದ್ವಿತೀಯ ಬಹುಮಾನ ದೊಂದಿಗೆ 13999₹ ಗಳ ನಗದು ಮತ್ತು ಪ್ರಶಸ್ತಿ ಪತ್ರ ಮತ್ತು ಫಲಕ, ಜಯಶ್ರೀ ಜಗದೀಶ ಖಾರ್ವಿ ತೃತೀಯ ಬಹುಮಾನ ದೊಂದಿಗೆ 12999₹ ಗಳ ನಗದು ಮತ್ತು ಪ್ರಶಸ್ತಿ ಪತ್ರ ಮತ್ತು ಫಲಕ ಹಾಗೂ ದಿವ್ಯಾಂಶ ವಿ ಮೊಗವೀರ ಚತುರ್ಥ ಬಹುಮಾನ ದೊಂದಿಗೆ 11999₹ ಗಳ ನಗದು ಮತ್ತು ಪ್ರಶಸ್ತಿ ಪತ್ರ ಮತ್ತು ಫಲಕವನ್ನು ಹಾಗೂ 13 ಪುಟಾಣಿಗಳು ಸಮಾಧಾನಕರ ಬಹುಮಾನಗಳನ್ನು ಪಡೆದುಕೊಂಡರು.
3ರಿಂದ 6 ವರ್ಷದೊಳಗಣ ಹಿರಿಯರ ವಿಭಾಗದಲ್ಲಿ ವೈ ಆರಾಧ್ಯ ಭಟ್ ಪ್ರಥಮ ಬಹುಮಾನದೊಂದಿಗೆ 15999₹ ಗಳ ನಗದು ಮತ್ತು ಪ್ರಶಸ್ತಿ ಪತ್ರ ಮತ್ತು ಫಲಕ, ಅಗಮ್ಯ ಶೆಟ್ಟಿ ದ್ವಿತೀಯ ಬಹುಮಾನದೊಂದಿಗೆ 13999₹ ಗಳ ನಗದು ಮತ್ತು ಪ್ರಶಸ್ತಿ ಪತ್ರ ಮತ್ತು ಫಲಕ, ದೃಶಿಕಾ ಎಸ್ ಪೂಜಾರಿ ತೃತೀಯ ಬಹುಮಾನ ದೊಂದಿಗೆ 12999₹ ಗಳ ನಗದು ಮತ್ತು ಪ್ರಶಸ್ತಿ ಪತ್ರ ಮತ್ತು ಫಲಕ ಹಾಗೂ ಜಿಯಾಂಶಿ ಜಿ ಕೋಟ್ಯಾನ್ ಚತುರ್ಥ ಬಹುಮಾನ ದೊಂದಿಗೆ 11999₹ ಗಳ ನಗದು ಮತ್ತು ಪ್ರಶಸ್ತಿ ಪತ್ರ ಮತ್ತು ಫಲಕವನ್ನು ಹಾಗೂ 12 ಪುಟಾಣಿಗಳು ಸಮಾಧಾನಕರ ಬಹುಮಾನಗಳನ್ನು ಪಡೆದುಕೊಂಡರು.
ಈ ಸಮಾರಂಭದಲ್ಲಿ ಜನತಾ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲರಾದ ರಮೇಶ್ ಪೂಜಾರಿ, ಉಪನ್ಯಾಸಕರಾದ ಉದಯ್ ನಾಯ್ಕ, ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ಮುಖ್ಯ ಶಿಕ್ಷಕಿ ದೀಪಿಕಾ ಆಚಾರ್ಯ, ಬೋಧಕ/ಬೋಧಕೇತರ ವೃಂದದವರು ಮತ್ತು ಪೋಷಕರು ಉಪಸ್ಥಿತರಿದ್ದರು.
ಸಹಶಿಕ್ಷಕಿ ಅನ್ನಪೂರ್ಣ ವಂದಿಸಿ,ಸಹ ಶಿಕ್ಷಕರಾದ ಸುಬ್ರಹ್ಮಣ್ಯ ಮರಾಟಿ ಮತ್ತು ಮಹಾದೇವ ಕಾರ್ಯಕ್ರಮವನ್ನು ನಿರ್ವಹಿಸಿದರು.











