ಸೌಜನ್ಯ ಹೋರಾಟ ಸಮಿತಿಯಿಂದ ಕೋಟ ಅಮೃತೇಶ್ವರೀ ದೇಗುಲದಲ್ಲಿ ವಿಶೇಷ ಪೂಜೆ

0
706

Click Here

Click Here

ಸೌಜನ್ಯಾಳ ಕುಟುಂಬಕ್ಕೆ ನ್ಯಾಯ ದೊರಕಿಸುವವರೆಗೆ ಹೋರಾಟ ನಿಲ್ಲದು – ದಿನೇಶ್ ಗಾಣಿಗ

ಕುಂದಾಪುರ ಮಿರರ್ ಸುದ್ದಿ…
ಕೋಟ: ಸೌಜನ್ಯಳ ಸಾವಿಗೆ ನ್ಯಾಯ ದೊರಕಿಸಿಕೊಡಬೇಕು ಹಾಗೇ ಅತ್ಯಾಚಾರ ನಡೆಸಿದವರಿಗೆ ಕಾನೂನಿನ ಮೂಲಕ ಶಿಕ್ಷೆಯಾಗಬೇಕು ಎಂದು ಪ್ರಾರ್ಥಿಸಿ ಕೋಟದ ಅಮೃತೇಶ್ವರೀ ದೇಗುಲದಲ್ಲಿ ಸೌಜನ್ಯ ಹೋರಾಟ ಸಮಿತಿ ವಿಶೇಷ ಪೂಜೆ ಸಲ್ಲಿಸಿತು.

Click Here

ಈ ವೇಳೆ ಹೋರಾಟ ಸಮಿತಿಯ ಪ್ರಮುಖರಾದ ಕೋಟ ದಿನೇಶ್ ಗಾಣಿಗ ಈ ವರೆಗೆ ಸೌಜನ್ಯಾಳ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಸಾಕಷ್ಟು ಹೋರಾಟಗಳು ನಡೆಸಿದ್ದೇವೆ, ಆದರೆ ಮುಂದಿನ ನಮ್ಮ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳಲಿದ್ದು ಸೌಜನ್ಯಳ ಅತ್ಯಾಚಾರಗೈದ ಆರೋಪಿಗಳು ಹಾಗೂ ಅವರ ಪರವಾಗಿ ನಿಂತವರು ಸರ್ವನಾಶವಾಗಬೇಕೆಂದು ರಾಜ್ಯದ 25ಸಾವಿರ ದೇಗುಲದಲ್ಲಿ ಏಕಕಾಲದಲ್ಲಿ ವಿಶೇಷವಾಗಿ ಪೂಜೆ ಸಲ್ಲಿಸಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಸ್ಥಳೀಯರಾದ ಸಚಿನ್ ಶ್ರೀಯಾನ್ ಪಾಂಡೇಶ್ವರ, ಭರತ್ ಗಾಣಿಗ, ವಿಜಯ ಪೂಜಾರಿ, ಸಂದೀಪ್ ಕದ್ರಿಕಟ್ಟು, ಶ್ರೀನಿವಾಸ ಪುತ್ರನ್, ಯೋಗೇಂದ್ರ ಪುತ್ರನ್, ಕೋಟ ಕೇಶವ ಆಚಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here