ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವಂಡ್ಸೆ ಇಲ್ಲಿ 23ನೇ ವರ್ಷದ ಗಣೇಶೋತ್ಸವ, ಧಾರ್ಮಿಕ ಸಭೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.
ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ವೆಂಕಟೇಶ್ ಶೆಟ್ಟಿ ತೆಂಕೊಡಿಗೆ ವಹಿಸಿ, ಗಣೇಶೋತ್ಸವ ಎಲ್ಲಾ ಭಕ್ತಾಭಿಮಾನಿಗಳ ಸಂಪೂರ್ಣ ಸಹಕಾರದಿಂದ ಯಶಸ್ವಿಯಾಗಿ ನೆರವೇರಿದೆ. ಎಲ್ಲರ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ವಂಡ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಅವಿನಾಶ್, ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಗಿರೀಶ ಎನ್.ನಾಯ್ಕ (ಸಪ್ತಗಿರಿ), ನಿರಾಮಯ ಸೊಸೈಟಿ ವಂಡ್ಸೆ ಇದರ ಅಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿ, ಗ್ರಾಮ ಪಂಚಾಯತ್ ಮಾಜಿ ಸದಸ್ಯ ಗುಂಡು ಪೂಜಾರಿ ಹರವರಿ, ಉದಯ ಕೆ.ನಾಯ್ಕ ವಂಡ್ಸೆ, ದೀಪಕ್ ಕುಮಾರ್ ಶೆಟ್ಟಿ ಕಟ್ಟೆಮನೆ, ವಂಡ್ಸೆ, ಗೋಪಾಲ ಶೆಟ್ಟಿ ಕೊಳ್ತ, ಉದ್ಯಮಿ ಜಯರಾಮ ಶೆಟ್ಟಿ ಬೆಳ್ವಾಣ, ಪ್ರಭಾಕರ ಗಾಣಿಗ ಹರವರಿ, ರಕ್ಷಿತ್ ಶೆಟ್ಟಿ ಕೋಡಿಯರಮನೆ ವಂಡ್ಸೆ, ಪ್ರದೀಪ್ ಶೆಟ್ಟಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶೈಕ್ಷಣಿಕವಾಗಿ ಸಾಧನೆ ಮಾಡಿದ ಮನೀಷ್ ಮಾವಿನಕಟ್ಟೆ, ನಿಧಿ ಸಿ. ಪೂಜಾರಿ ತೆಂಕೊಡಿಗೆ, ದ್ವಿತೀಯ ಪಿಯುಸಿಯಲ್ಲಿ ಅವಿಜಿತ್ ಶೆಟ್ಟಿ ಕೊರ್ಗಿಮನೆ ಇವರನ್ನು ಸನ್ಮಾನಿಸಲಾಯಿತು. ಗಣೇಶೋತ್ಸವದ ಪ್ರಯುಕ್ತ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಂಡ್ಸೆ ಸ.ಮಾ.ಹಿ.ಪ್ರಾ.ಶಾಲೆ ವಿದ್ಯಾರ್ಥಿಗಳು, ಹಾಗೂ ಸಾರ್ವಜನಿಕರಿಗೆ ಆಯೋಜಿಸಲಾದ ಕ್ರೀಡಾ ಸ್ಪರ್ಧೆ, ಸಾಂಸ್ಕೃತಿಕ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಗಣೇಶೋತ್ಸವಕ್ಕೆ ಸಹಕಾರ ನೀಡಿದ ದಾನಿಗಳನ್ನು ಅಭಿನಂದಿಸಲಾಯಿತು.
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಾರ್ಯದರ್ಶಿ ಅಶ್ವಿನ್ ಮೇಲ್ಮನೆ ಸ್ವಾಗತಿಸಿದರು. ಮಣಿಕಂಠ ಪೂಜಾರಿ, ಅಭಿಷೇಕ್ ಮೆಂಡನ್, ವಿಠಲ ಆಚಾರ್ಯ ಸನ್ಮಾನ ಪತ್ರ ವಾಚಿಸಿದರು. ಕರ್ನಾಟಕ ಪಬ್ಲಿಕ್ ಸ್ಕೂಲ್ ವಂಡ್ಸೆ (ನೆಂಪು) ಇಲ್ಲಿನ ಅಧ್ಯಾಪಕರಾದ ವಸಂತರಾಜ್ ಶೆಟ್ಟಿ ಹಾಗೂ ಸರಕಾರಿ ಪ್ರೌಢಶಾಲೆ ಆಲೂರು ಇಲ್ಲಿನ ಅಧ್ಯಾಪಕರಾದ ಗಣೇಶ ದೇವಾಡಿಗ ನೂಜಿನಮನೆ ಕಾರ್ಯಕ್ರಮ ನಿರ್ವಹಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ವಿಠಲ ಆಚಾರ್ಯ ವಂದಿಸಿದರು.
ಸ.ಮಾ.ಹಿ.ಪ್ರಾ.ಶಾಲೆ ವಂಡ್ಸೆಯ ವಿದ್ಯಾರ್ಥಿಗಳು, ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಭರತನಾಟ್ಯ, ಓಂಕಾರ ಕಲಾವಿದರು ಕನ್ನುಕೆರೆ ತೆಕ್ಕಟ್ಟೆ ಇವರಿಂದ ನಗೆ ನಾಟಕ ನಡೆಯಿತು.
ಪೂರ್ವಾಹ್ನ ದೀಪ್ತ ದಿನೇಶ್ ಕುಂದರ್, ಆಯುಷಿ ದಿವಾಕರ ವಂಡ್ಸೆ, ಆರುಷ್ ಸುಧೀಂದ್ರ ಆಚಾರ್ಯ, ಧೃತಿ ಗಾಣಿಗ ಬಳಗೇರಿ, ರಿಧಿ ಕೃಷ್ಣ ಪೂಜಾರಿ ವಂಡ್ಸೆ ಇವರಿಂದ ಯಕ್ಷಗಾನ ನೃತ್ಯ ನಡೆಯಿತು. ಸಂಜೆ ಶ್ರೀ ರಾಘವೇಂದ್ರ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು.











