ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಭಾರತೀಯ ಸೇನೆಗೆ ಲೆಫ್ಟಿಂನೆಂಟ್ ಹುದ್ದೆ ಅಲಂಕರಿಸಿ ದೇಶ ಸೇವೆಗೆ ಹೊರಟ ಅಜಯ್ ದೇವಾಡಿಗ ಇವರನ್ನು ಕುಂದಾಪುರ ದೇವಾಡಿಗರ ಸಮಾಜ ಸೇವಾ ಸಂಘದಿಂದ ಸನ್ಮಾನಿಸಲಾಯಿತು.
ಕುಂದಾಪುರ ಪುರಸಭೆ ಅಧ್ಯಕ್ಷರಾದ ಮೋಹನ್ ಶೆಣೈ ಅವರು ಸನ್ಮಾನ ಕಾರ್ಯಕ್ರಮ ನಡೆಸಿ ಯುವಕರು ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಸತತ ಸಾಧನೆ ಮೂಲಕ ಇಂದು ಸೇನೆಯಲ್ಲಿ ಉನ್ನತ ಹುದ್ದೆ ಸೇರಿದ ಅಜಯ್ ದೇವಾಡಿಗರು ಎಲ್ಲರಿಗೂ ಮಾದರಿ. ಅವರಿಗೆ ಸಂಪೂರ್ಣ ಬೆಂಬಲ ನೀಡಿದ ಬಾಲ್ಯದ ಗೆಳೆಯ ಈಗಾಗಲೇ ಸೇನೆಯಲ್ಲಿ ಲೆಫ್ಟಿಂನೆಂಟ್ ಆಗಿ ಸೇವೆ ಸಲ್ಲಿಸುತ್ತಿರುವ ಭರತ್ ದೇವಾಡಿಗರು ಕುಂದಾಪುರಕ್ಕೆ ಹೆಮ್ಮೆ ತಂದಿದ್ದೀರಿ ಎಂದು ಶುಭ ಕೋರಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆ ಅಧ್ಯಕ್ಷರಾದ ನಾಗರಾಜ್ ರಾಯಪ್ಪನ ಮಠ ವಹಿಸಿದ್ದರು.
ಈ ಸಮಾರಂಭದಲ್ಲಿ ಪುರಸಭೆ ಸದಸ್ಯರಾದ ಜಿ. ಕೆ. ಗಿರೀಶ್ ದೇವಾಡಿಗ, ಮಾಜಿ ಸದಸ್ಯರಾದ ವಿಠಲ್ ಕುಂದರ್, ರಾಘವೇಂದ್ರ ದೇವಾಡಿಗ, ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ದೇವಾಡಿಗ, ಭಾರತೀಯ ಸೇನೆಯ ಲೆಫ್ಟಿಂನೆಂಟ್ ಭರತ್ ದೇವಾಡಿಗ, ಸಂಸ್ಥೆ ಗೌರವ ಅಧ್ಯಕ್ಷರಾದ ಚಂದ್ರಶೇಖರ ದೇವಾಡಿಗ, ಕೋಶಾಧಿಕಾರಿ ಆನಂದ್ ಕೆ ಎನ್, ಮಾಜಿ ಅಧ್ಯಕ್ಷ ರಾದ ನಾರಾಯಣ ದೇವಾಡಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಸ್ಥೆ ಕಾರ್ಯದರ್ಶಿ ಉದಯ್ ಕುಮಾರ್ ಹೇರಿಕೇರಿ ಸ್ವಾಗತಿಸಿದರು. ಮಾಜಿ ಕಾರ್ಯದರ್ಶಿ ಅಧ್ಯಾಪಕರಾದ ರಾಘವೇಂದ್ರ ದೇವಾಡಿಗ ಕಾರ್ಯಕ್ರಮ ನಿರೂಪಿಸಿ, ಅಧ್ಯಾಪಕರಾದ ಗುರುಪ್ರಸಾದ್ ದೇವಾಡಿಗ ವಂದಿಸಿದರು.











