ಕೋಟ ವರುಣತೀರ್ಥ ಕೆರೆಗೆ 4ಸಾವಿರ ಮೀನುಗಳನ್ನು ಸಮರ್ಪಿಸಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕೆರೆ ಕಾಮಗಾರಿಗೆ ಮೆಚ್ಚುಗೆ

0
467

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಇಲ್ಲಿನ ಅಭಿವೃದ್ಧಿಯ ಕೊನೆಯ ಹಂತದಲ್ಲಿರುವ ಕೋಟದ ಅಮೃತೇಶ್ವರೀ ದೇಗುಲದ ಸನಿಹದಲ್ಲಿರುವ ವರುಣತೀರ್ಥ ಕೆರೆಗೆ ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಕಾರ್ಕಳದ ಮೀನುಗಾರಿಗಾ ಉಪನಿರ್ದೇಶಕ ಕಛೇರಿ ನೀಡಿದ ಒಟ್ಟು ನಾಲ್ಕು ಸಾವಿರ ಅಧಿಕ ಮೀನುಗಳನ್ನು ಕೆರೆಗೆ ಸಮರ್ಪಿಸಿದರು.

Click Here

ಈ ಸಂದರ್ಭದಲ್ಲಿ ಕೆರೆಯ ಅಭಿವೃದ್ಧಿ ವೀಕ್ಷಿಸಿದ ಅವರು ಕೆರೆ ಕಾಮಗಾರಿಗೆ ಮೆಚ್ಚುಗೆ ವ್ಯಕ್ತಪಡಿಸಿ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಈ ಕೆರೆ ಪ್ರಮುಖ ಪಾತ್ರ ವಹಿಸಲಿದ್ದು, ಇಲ್ಲಿನ ಜನಸಾಮಾನ್ಯರ ಕೃಷಿಕ ಬಹು ವರ್ಷಗಳ ಕನಸು ಸಾಕಾರಗೊಳ್ಳುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕೋಟ ಅಮೃತೇಶ್ವರೀ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ್ ಸಿ ಕುಂದರ್, ಸದಸ್ಯರಾದ ರತನ್ ಐತಾಳ್, ಚಂದ್ರ ಆಚಾರ್, ಸುಬ್ರಾಯ ಜೋಗಿ, ಕೋಟ ಪಂಚಾಯತ್ ಸದಸ್ಯರಾದ ಚಂದ್ರ ಪೂಜಾರಿ, ಸಂಸದರ ಆಪ್ತ ಸಹಾಯಕ ಹರೀಶ್ ಕುಮಾರ್ ಶೆಟ್ಟಿ ಸ್ಥಳೀಯರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here