ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ದ.ಕ.ಕೂಟ ಬ್ರಾಹ್ಮಣರ ಮಿತ್ರ ಮಂಡಳಿ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಡಾ|| ಪಿ. ವಿಷ್ಣುಮೂರ್ತಿ ಐತಾಳ ನೇತ್ರತ್ವದ ತಂಡದಿಂದ ಸ್ಪರ್ಧಿಸಿದ್ದ ಎಲ್ಲಾ ಅಭ್ಯರ್ಥಿಗಳು ಜಯಗಳಿದರು.
ಆಡಳಿತ ಮಂಡಳಿಯ ಗೌರವ ಅಧ್ಯಕ್ಷರ ಸ್ಥಾನಕ್ಕೆ ಡಾ.ವಿಷ್ಣುಮೂರ್ತಿ ಐತಾಳ, ಗೌರವ ಉಪಾಧ್ಯಕ್ಷ ಸುಬ್ರಹ್ಮಣ್ಯ ಹೊಳ್ಳ, ಗೌರವ ಕಾರ್ಯದರ್ಶಿ ಡಾ.ಕೆ.ಸುರೇಶ ಐತಾಳ, ಕೋಶಾಧಿಕಾರಿ ಸ್ಥಾನಕ್ಕೆ ಚಂದ್ರಶೇಖರ ಐತಾಳ ಆಯ್ಕೆಗೊಂಡರು.
ಆಡಳಿತ ಮಂಡಳಿ ಸದಸ್ಯ ಸ್ಥಾನಕ್ಕೆ ಶ್ರೀಧರ ಅಲ್ಸೆ, ಗಣೇಶ ರಾವ್, ಪಿ.ಎ.ಮಂಜುನಾಥ ಹೇರ್ಳೆ, ಮಂಜುನಾಥ ಕಾರಂತ, ನರಸಿಂಹ ಐತಾಳ, ನಾಗೇಂದ್ರ ಹೇರ್ಳೆ, ರಮೇಶ ಕಾರಂತ, ರಾಘವೇಂದ್ರ ಮಧ್ಯಸ್ಥ, ರಾಮಕೃಷ್ಣ ಉಪಾಧ್ಯ, ಶಶಿಧರ ಹೊಳ್ಳ ಮತ್ತು ಶ್ರೀರಾಮ ಮಯ್ಯ ಆಯ್ಕೆಗೊಂಡರು.
ದ.ಕ.ಕೂಟ ಬ್ರಾಹ್ಮಣರ ಮಿತ್ರ ಮಂಡಳಿಯ ಸಾಲಿಗ್ರಾಮ ಪ್ರತಿನಿಧಿ ಸ್ಥಾನಕ್ಕೆ ರಾಘವೇಂದ್ರ ಮಧ್ಯಸ್ಥ ಇವರನ್ನು ಅಭಿನಂದಿಸಲಾಯಿತು.











