ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಕನ್ನಡ ಚಿತ್ರರಂಗದ ಖ್ಯಾತ ನಟ, ನಿರ್ಮಾಪಕ ಕೋಮಲ್ ಕುಮಾರ್ ಬಗ್ವಾಡಿ ಶ್ರೀ ಮಹಿಷಾಸುರಮರ್ದಿನಿ ದೇವಸ್ಥಾನಕ್ಕೆ ಸೆ.28 ರಂದು ಭೇಟಿ ನೀಡಿದರು.
ನವರಾತ್ರಿ ಉತ್ಸವದ ಸಂದರ್ಭದಲ್ಲಿ ಅವರು ಶ್ರೀ ದೇವರ ದರ್ಶನ ಪಡೆದರು. ಕೋಮಲ್ ಕುಮಾರ್ ಅವರನ್ನು ದೇವಸ್ಥಾನದ ವತಿಯಿಂದ ಗೌರವಿಸಲಾಯಿತು.
ದೇವಸ್ಥಾನದ ವಾತಾವರಣ, ನದಿ ತಟದ ಅಪೂರ್ವ ಪರಿಸರ, ಆಕರ್ಷಣಿಯವಾದ ದೇವಿಯ ವಿಗ್ರಹ, ಪೂಜಾ ವಿಧಾನಗಳು, ಧಾರ್ಮಿಕ ವಿಧಿವಿಧಾನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಮನಸಿಗೆ ವಿಶೇಷ ಅನುಭವ ನೀಡುವ ಈ ಕ್ಷೇತ್ರಕ್ಕೆ ನಿರಂತರ ಭೇಟಿ ನೀಡುವುದಾಗಿ ತಿಳಿಸಿದರು.
ಸಂದರ್ಭದಲ್ಲಿ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಕುಂದಾಪುರ ಶಾಖೆ ಅಧ್ಯಕ್ಷ ಉದಯಕುಮಾರ್ ಹಟ್ಟಿಯಂಗಡಿ, ಮಾಜಿ ಅಧ್ಯಕ್ಷ ಎಂ. ಎಂ ಸುವರ್ಣ, ಸತೀಶ್ ಎಂ ನಾಯ್ಕ್, ಮೊಗವೀರ ಯುವ ಸಂಘಟನೆ ಹೆಮ್ಮಾಡಿ ಘಟಕದ ಅಧ್ಯಕ್ಷ ದಿನೇಶ್ ಕಾಂಚನ್, ಜಯಂತ್ ಕುಂದರ್, ಪ್ರವೀಣ್ ಗಂಗೊಳ್ಳಿ, ಗಜೇಂದ್ರ ಬಗ್ವಾಡಿ, ಗಣೇಶ್ ಬಗ್ವಾಡಿ, ರಾಜೀವ್ ಸೌರಭ, ಸುಮತಿ ಯು., ಸುಮತಿ ಬಿ, ಸರೋಜ ಹೆಮ್ಮಾಡಿ, ಆನಂದ್ ಕೆ ನಾಯ್ಕ್, ಜಯಕರ ಪೂಜಾರಿ ಗುಲ್ವಾಡಿ, ದಯಾನಂದ ಗಂಗೊಳ್ಳಿ, ರಾಜು ಬಗ್ವಾಡಿ ಕ್ರಾಸ್, ಭಾಗ್ಯ, ರಾಘವೇಂದ್ರ, ವನಜ, ಸುಮ, ರಾಮ ಬಗ್ವಾಡಿ ಕ್ರಾಸ್, ನಾಗರಾಜ್ ಬಗ್ವಾಡಿ, ಶಿವರಾಮ್, ಜನಾರ್ಧನ್ ತೊಪ್ಲು, ಯಶೋಧ, ಪೂರ್ಣಿಮಾ, ಆನಂದ್ ಬಗ್ವಾಡಿ, ನಂದ್ಯಪ್ಪ ಶೆಟ್ಟಿ, ಗಿರಿಜಾ ಮೊಗವೀರ, ಶಾರದಾ ಪೂಜಾರಿ, ಪವಿತ್ರ, ಮೊದಲದವರು ಉಪಸ್ಥಿತರಿದ್ದರು.











